Gold Price Today: ಚಿನ್ನದ ಬೆಲೆ ದಿಢೀರ್ ಏರಿಕೆ, ಇಂದಿನ ದರಗಳು ಎಷ್ಟಿದೆ?
ಚಿನ್ನವು ದಿನೇ ದಿನೇ ದುಬಾರಿಯಾಗುತ್ತಲೇ ಇದೆ. ನಿನ್ನೆ ಕೂಡ ಚಿನ್ನದ ಬೆಲೆಗಳಲ್ಲಿ ಭಾರೀ ಏರಿಕೆ ಕಂಡಿತ್ತು. ಒಂದು ಗ್ರಾಂ ಚಿನ್ನದ ಮೇಲೆ ಬರೋಬ್ಬರಿ 136 ರೂಪಾಯಿವರೆಗೆ ಹೆಚ್ಚಾಗಿದೆ. ಕಳೆದ ಮೂರು ದಿನಗಳಿಂದಲೂ ಚಿನ್ನದ ದರಗಳು ನಿರಂತರವಾಗಿ ಏರುತ್ತಿದೆ. ನವೆಂಬರ್ 30ರಂದು ಭಾನುವಾರ ಇಂದಿನ 24 ಕ್ಯಾರೆಟ್, 22 ಕ್ಯಾರೆಟ್, 18 ಕ್ಯಾರೆಟ್ ಚಿನ್ನ ಹಾಗೂ ಬೆಳ್ಳಿಯ ದರಗಳು ಪ್ರತಿ ಗ್ರಾಂ.ಗೆ ಎಷ್ಟಿದೆ? ಎನ್ನುವ ವಿವರ ಇಲ್ಲಿದೆ.
ಶನಿವಾರ ಕೂಡ ಚಿನ್ನದ ಬೆಲೆಗಳು ಮತ್ತೆ ಏರಿಕೆ ಕಂಡಿದ್ದವು. ಬೆಂಗಳೂರಿನಲ್ಲಿ ಪ್ರಸ್ತುತ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹12,982, 22 ಕ್ಯಾರೆಟ್ ಚಿನ್ನಕ್ಕೆ ₹11,900 ಮತ್ತು 18 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹9,737 ದರ ಇದೆ. ಬೆಂಗಳೂರಿನಲ್ಲಿ ಈಗ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನ ಒಂದು ಗ್ರಾಂ.ಗೆ ₹12,982 ಇದ್ದು, ಬರೋಬ್ಬರಿ ₹136 ಏರಿಕೆಯಾಗಿದೆ. 8 ಗ್ರಾಂ ಚಿನ್ನದ ದರ ₹1,03,856, 10 ಗ್ರಾಂ.ಚಿನ್ನದ ದರ ₹1,29,820, 100 ಗ್ರಾಂ ಚಿನ್ನದ ದರ ₹12,98,200 ಇದ್ದು, ₹13,600 ಏರಿದೆ.

22 ಕ್ಯಾರೆಟ್ ಚಿನ್ನ ಒಂದು ಗ್ರಾಂ. ಬೆಲೆ ₹11,900 ಆಗಿದ್ದು, ₹125 ಹೆಚ್ಚಾಗಿದೆ. 8 ಗ್ರಾಂ ಚಿನ್ನದ ದರ ₹95,200, 10 ಗ್ರಾಂ ಚಿನ್ನದ ದರ ₹1,19,000 ಹಾಗೂ 100 ಗ್ರಾಂ ಚಿನ್ನದ ದರವು ₹11,90,000 ಆಗಿದೆ. 18 ಕ್ಯಾರೆಟ್ ಚಿನ್ನಕ್ಕೆ ಒಂದು ಗ್ರಾಂಗೆ ₹9,737 ಇದ್ದು, ಗ್ರಾಂ ಮೇಲೆ ₹103 ಏರಿಕೆ ಕಂಡಿದೆ. 8 ಗ್ರಾಂ ಚಿನ್ನದ ದರವು ₹77,896, 10 ಗ್ರಾಂ ಚಿನ್ನದ ದರ ₹97,370, 100 ಗ್ರಾಂ ಚಿನ್ನದ ದರ ₹9,73,700 ಇದ್ದು ಬರೋಬ್ಬರಿ ₹10,300 ಹೆಚ್ಚಾಗಿದೆ. ಕಳೆದ ಮೂರು ದಿನಗಳಿಂದಲೂ ಚಿನ್ನದ ದರಗಳು ಸತತವಾಗಿ ಹೆಚ್ಚಾಗುತ್ತಿವೆ.
ಬೆಂಗಳೂರಿನಲ್ಲಿ ಕಳೆದ 10 ದಿನಗಳ ಚಿನ್ನದ ದರಪಟ್ಟಿ (ಗ್ರಾಂ.ಗೆ)
ದಿನಾಂಕ: 24 ಕ್ಯಾರೆಟ್ ಚಿನ್ನ; 22 ಕ್ಯಾರೆಟ್ ಚಿನ್ನ
ನವೆಂಬರ್ 29, ₹12,982 ; ₹11,900
ನವೆಂಬರ್ 28, ₹12,846 ; ₹11,775
ನವೆಂಬರ್ 27, ₹12,775 ; ₹11,710
ನವೆಂಬರ್ 26, ₹12,791 ; ₹11,725
ನವೆಂಬರ್ 25, ₹12,704 ; ₹11,645
ನವೆಂಬರ್ 24, ₹12,513 ; ₹11,470
ನವೆಂಬರ್ 23, ₹12,584 ; ₹11,535
ನವೆಂಬರ್ 22, ₹12,584 ; ₹11,535
ನವೆಂಬರ್ 21, ₹12,398 ; ₹11,365
ಬೆಳ್ಳಿ-ಪ್ಲಾಟಿನಂ ದರವೂ ಏರಿಕೆ
ಬೆಂಗಳೂರಿನಲ್ಲಿ ಈಗ ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ ₹185 ಮತ್ತು ಪ್ರತಿ ಕಿಲೋಗ್ರಾಂಗೆ ₹1,85,000 ಇದೆ. ನಿನ್ನೆ ಗ್ರಾಂ ಮೇಲೆ 9 ರೂಪಾಯಿ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಪ್ಲಾಟಿನಂ ಬೆಲೆ ನೋಡುವುದಾದರೆ ಪ್ರತಿ ಗ್ರಾಂಗೆ ₹4,753 ಮತ್ತು 10 ಗ್ರಾಂಗೆ ₹47,530 ಆಗಿದೆ. ನಿನ್ನೆಗಿಂತ ಗ್ರಾಂ ಮೇಲೆ 33 ರೂಪಾಯಿ ಏರಿಕೆ ಕಂಡಿದ್ದು, ಈ ವಾರದಲ್ಲಿ ದರಗಳು ಮತ್ತಷ್ಟು ಏರುವ ನಿರೀಕ್ಷೆ ಇದೆ.
-
Price Hike: ಕೇಂದ್ರದಿಂದ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ ಹೇಳಿಕೆ, ದರ ಹೆಚ್ಚಿಸಿದ್ದೇ ಕಾಂಗ್ರೆಸ್; ಡಿಕೆಶಿಗೆ ತಿರುಗೇಟು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ












Click it and Unblock the Notifications