Gold Price Today: ಇಂದು ಚಿನ್ನ ₹1100, ಬೆಳ್ಳಿ ₹5000 ಭರ್ಜರಿ ಏರಿಕೆ, ಮಹಾನಗರಗಳಲ್ಲಿ ಎಷ್ಟಿದೆ?
ಬೆಂಗಳೂರು: ವಾರದ ಬಹುತೇಕ ದಿನಗಳಲ್ಲಿ ದರ ಹೆಚ್ಚಿಸಿಕೊಳ್ಳುವ ಬೆಳ್ಳಿ ಮತ್ತು ಚಿನ್ನದ ದರದಲ್ಲಿ ಇಂದು ಸಹ ಭರ್ಜರಿ ಏರಿಕೆ ಆಗಿದೆ. ವಾರದ ಆರಂಭದ ದಿನ ಸೋಮವಾರ (ಡಿಸೆಂಬರ್ 22) ರಂದು ಚಿನ್ನ ಮತ್ತು ಬೆಳ್ಳಿ ದರಗಳು ಕ್ರಮವಾಗಿ 1,100 ರೂಪಾಯಿ ಮತ್ತು ಬೆಳ್ಳಿ 5,000 ರೂಪಾಯಿಯಷ್ಟು ಹೆಚ್ಚಾಗಿದೆ. ಈ ಮೂಲಕ ಇಂದಿನ ಗ್ರಾಹಕರ ಜೇಬಿಗೆ ಆಘಾತ ನೀಡಿದೆ. ನಿಮ್ಮ ನಗರಗಳಲ್ಲಿ ಈ ಲೋಹಗಳ ದರ ಇವತ್ತು ಎಷ್ಟಿದೆ?, ಹೆಚ್ಚಾಗಿದ್ದೆಷ್ಟು ಎಂಬ ವಿವರ ಇಲ್ಲಿದೆ.
ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳಲ್ಲಿ ಚಿನ್ನಕ್ಕೆ ವಿಶೇಷ ಸ್ಥಾನವಿದೆ. ನೂರಾರು ವರ್ಷಗಳಿಂದಲೂ ಚಿನ್ನವು ಜನರ ಜೀವನದ ಭಾಗವೇ ಆಗಿದೆ. ಇಂದಿಗೂ ಬೆಳ್ಳಿ-ಬಂಗಾರಕ್ಕೆ ಬೇಡಿಕೆ ಮುಂದುವರಿದಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ದರಗಳು ತೀವ್ರವಾಗಿ ಹೆಚ್ಚುತ್ತಿವೆ. ಅನಿರೀಕ್ಷಿತ ದಾಖಲೆಯ ಮಟ್ಟವನ್ನು ತಲುಪಿ ಗ್ರಾಹಕರನ್ನು ಚಿಂತೆಗೀಡು ಮಾಡಿವೆ. ಯುಎಸ್ ತೆರಿಗೆ ನೀತಿ, ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿಯುತ್ತಿರುವುದು, ವ್ಯಾಪಾರ ಅನಿಶ್ಚಿತತೆಗಳು ಮತ್ತು ಯುದ್ಧಗಳ ಕಾರಣದಿಂದ ಚಿನ್ನ-ಬೆಳ್ಳಿ ದರ ಗಗನಕ್ಕೇರಿವೆ.

ಕಳೆದೊಂದು ವರ್ಷದಿಂದ ಚಿನ್ನದ ದರದಲ್ಲಿ ಭಾರೀ ಬದಲಾವಣೆ ಆಗಿದೆ. ಮಧ್ಯಮ ವರ್ಗದವರು ಚಿನ್ನ ಖರೀದಿಯಿಂದಲೂ ದೂರ ಸರಿಯುವಂತಾಗಿದೆ. ನಿರಂತರ ಬೆಲೆ ಹೆಚ್ಚಳವಾಗಿದ್ದರೂ ಬೆಳ್ಳಿ ಮತ್ತು ಚಿನ್ನಕ್ಕೆ 2025 ವರ್ಷಾಂತ್ಯದಲ್ಲಿ ಬೇಡಿಕೆ ಕಡಿಮೆ ಆಗಿಲ್ಲ. ಧರಿಸುವುದು ಮತ್ತು ಹೂಡಿಕೆ ದೃಷ್ಟಿಯಿಂದ ಚಿನ್ನ ಖರೀದಿ ಮುಂದುವರಿದಿದೆ. ಇಂದು ಡಿಸೆಂಬರ್ 22ರಂದು 22 ಕ್ಯಾರಟ್ 10 ಗ್ರಾಂ ಚಿನ್ನ ಒಂದೇ ದಿನಕ್ಕೆ 1000 ರೂಪಾಯಿ ದರ ಹೆಚ್ಚಳದೊಂದಿಗೆ 1,24,000 ರೂ. ತಲುಪಿದೆ. 24 ಕ್ಯಾರಟ್ 10 ಗ್ರಾಂ ಬಂಗಾರದ ದರ 1,100 ರೂಪಾಯಿ ಏರಿಕೆಯೊಂದಿಗೆ ಒಟ್ಟು ದರ 1,35, 280 ರೂ. ತಲುಪಿದೆ. ಈ ಮೂಲಕ ಚಿನ್ನ ಖರೀದಿ ಗ್ರಾಹಕರಿಗೆ ಬಿಸಿ ತುಪ್ಪವಾಗಿದೆ.
ಕಳೆದ ಒಂದು ವಾರದಲ್ಲಿ ಎರಡು ದಿನ ಕೊಂಚ ಇಳಿಕೆ ಕಂಡಿದ್ದ ಚಿನ್ನವು ಡಿಸೆಂಬರ್ 20, 21 ರಂದು ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿತ್ತು. ಇಂದು ಮತ್ತೆ ಭಾರೀ ಪ್ರಮಾಣದಲ್ಲಿ ದರ ಏರಿಕೆ ಆಗಿದೆ. ಅದೇ ರೀತಿ ಬೆಳ್ಳಿಯ ದರದಲ್ಲೂ ಬದಲಾವಣೆ ಆಗಿದೆ. 10 ಗ್ರಾಂ ಬೆಳ್ಳಿಗೆ 50 ರೂಪಾಯಿಯಂತೆ 100 ಗ್ರಾಂಗೆ 500 ರೂ. ಹಾಗೂ 01 ಕೆಜಿ ಬೆಳ್ಳಿಗೆ 5000 ರೂಪಾಯಿ ಏರಿಕೆ ಆಗಿದೆ. ಕ್ರಮವಾಗಿ ಬೆಳ್ಳಿ 2,190, 21,900 ಹಾಗೂ 2,19,000 ರೂಪಾಯಿ ಇದೆ. ಚಿನ್ನಕ್ಕೆ ಪೂಪೋಟಿ ನೀಡುವಷ್ಟರ ಮಟ್ಟಿಗೆ ಬೆಳ್ಳಿ ದರ ಹೆಚ್ಚಿಸಿಕೊಂಡಿದೆ. ನಗರವಾರು ಚಿನ್ನದ ದರ ಪಟ್ಟಿ ಇಲ್ಲಿದೆ
24k 01 ಗ್ರಾಂ ಚಿನ್ನದ ದರಪಟ್ಟಿ
ಚೆನ್ನೈ: 13,615 ರೂಪಾಯಿ
ಮುಂಬೈ: 13,528 ರೂಪಾಯಿ
ದೆಹಲಿ: 13,543 ರೂಪಾಯಿ
ಕೋಲ್ಕತ್ತಾ: 13,528 ರೂಪಾಯಿ
ಬೆಂಗಳೂರು: 13,528 ರೂಪಾಯಿ
ಹೈದರಾಬಾದ್: 13,528 ರೂಪಾಯಿ
ಕೇರಳ: 13,528 ರೂಪಾಯಿ
ಪುಣೆ: 13,528 ರೂಪಾಯಿ
ವಡೋದರಾ: 13,533 ರೂಪಾಯಿ
ಅಹಮದಾಬಾದ್: 13,533 ರೂಪಾಯಿ
22k 01 ಗ್ರಾಂ ಚಿನ್ನದ ಬೆಲೆಪಟ್ಟಿ
ಚೆನ್ನೈ: 12,480 ರೂಪಾಯಿ
ಮುಂಬೈ: 12,400 ರೂಪಾಯಿ
ದೆಹಲಿ: 12,405 ರೂಪಾಯಿ
ಕೋಲ್ಕತ್ತಾ: 12,400 ರೂಪಾಯಿ
ಬೆಂಗಳೂರು: 12,400 ರೂಪಾಯಿ
ಹೈದರಾಬಾದ್: 12,400 ರೂಪಾಯಿ
ಕೇರಳ: 12,400 ರೂಪಾಯಿ
ಪುಣೆ: 12,400 ರೂಪಾಯಿ
ವಡೋದರಾ: 12,405 ರೂಪಾಯಿ
ಅಹಮದಾಬಾದ್: 12,405 ರೂಪಾಯಿ
ಮಟ್ಟಗಳಿಗೆ ತಲುಪಿದ್ದು, ಗ್ರಾಹಕರಲ್ಲಿ ಕುತೂಹಲ ಮೂಡಿಸಿದೆ.












Click it and Unblock the Notifications