Gold Price Today: ಹೂಡಿಕೆದಾರರಿಗೆ ಆಘಾತ; ಚಿನ್ನದ ಬೆಲೆ ಸತತ ಭಾರೀ ಕುಸಿತ! ಇಂದು ಎಷ್ಟಿದೆ 22ಕ್ಯಾರಟ್ ದರ?
ಬೆಂಗಳೂರು: ಜಾಗತಿಕ ಬೆಳವಣಿಗೆಗಳ ಪರಿಣಾಮವು ಚಿನ್ನದ ಮೇಲೆ ಆಗಾಧವಾಗಿ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಚಿನ್ನದ ಮೌಲ್ಯ ಕುಸಿತ ಕಂಡಿದೆ. ಗರಿಷ್ಠ ಏರಿಕೆ ಬಳಿಕ ಭಾರತದ ಮಾರುಕಟ್ಟೆ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಲ್ಲೂ ಚಿನ್ನ, ಬೆಳ್ಳಿ ದರ ತೀವ್ರ ಕುಸಿತ ಕಂಡಿದೆ. ಇವತ್ತಿಗೆ ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಸತತ ಐದನೇ ದಿನವೂ ಬಂಗಾರದ ಬೆಲೆ ಇಳಿಕೆಯಾಗಿದೆ. ಇಂದು ಸೆಪ್ಟಂಬರ್ 2ರಂದು 22ಕ್ಯಾರಟ್ ಮತ್ತು 24 ಕ್ಯಾರಟ್ ಚಿನ್ನದ ಬೆಲೆ ವಿವರ ಇಲ್ಲಿದೆ.
2026ರ ಫೆಬ್ರವರಿ 1ರವರೆಗೆ ನಿರಂತರವಾಗಿ ದಾಖಲೆ ಹಂತದಲ್ಲಿ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಯು ನಂತರ ನಿರಂತರವಾಗಿ ಕುಸಿತ ಕಂಡಿವೆ. ಆಗಾಗ ಏರಿಳಿತ ಮುಂದುವರಿದರೂ ಸಹಿತ ಚಿನ್ನದ ಮೇಲಿನ ಹೂಡಿಕೆದಾರರು ತಾತ್ಕಾಲಿಕವಾಗಿ ನಷ್ಟ ಅನುಭವಿಸುವಂತಾಗಿದೆ. ಬೆಳ್ಳಿ ದರವು 2,45,000 ರೂಪಾಯಿಯ ಆಸುಪಾಸಿನಲ್ಲೇ ಗಿರಕಿ ಹೊಡೆಯುತ್ತಿದೆ. ಒಂದು ದಿನ 5,000 ಏರಿಕೆ ಆದರೆ ಮಾರನೇ ದಿನ ಮತ್ತಷ್ಟೇ ಪ್ರಮಾಣದಲ್ಲಿ ಇಳಿಕೆ ಆಗುತ್ತಿದೆ.

ಚಿನ್ನದ ದರದಲ್ಲಿ ಸತತ ಕುಸಿತ
ಒಟ್ಟಾರೆಯಾಗಿ ನೋಡುವುದಾದರೆ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ ದಾಖಲಾಗಿದೆ. ಇಂದು ಬುಧವಾರ (ಸೆಪ್ಟಂಬರ್ 2) ಚಿನ್ನದ ಇಳಿಕೆ, ಒಟ್ಟು ದರ ಹೀಗಿದೆ.
* ಇಂದು 22 ಕ್ಯಾರಟ್ 1 ಗ್ರಾಂ ಬೆಲೆ 190 ರೂಪಾಯಿಯತೆ ಹತ್ತು ಗ್ರಾಂ ಚಿನ್ನದ ಬೆಲೆ 1900 ರೂಪಾಯಿ ಕುಸಿದು ಅದರ ಒಟ್ಟು ಬೆಲೆ 1,39,350 ರೂಪಾಯಿ ತಲುಪಿದೆ.
* 24ಕ್ಯಾರಟ್ 1 ಗ್ರಾಂ ಬೆಲೆ 207 ರೂಪಾಯಿಯತೆ ಹತ್ತು ಗ್ರಾಂ ಚಿನ್ನದ ಬೆಲೆ 2070 ರೂಪಾಯಿ ಕುಸಿದು ಅದರ ಒಟ್ಟು ದರ 1,52,020 ರೂಪಾಯಿ ತಲುಪಿದೆ.
* ಇನ್ನೂ 18 ಕ್ಯಾರಟ್ 1 ಗ್ರಾಂ ದರವು 155 ರೂಪಾಯಿಯತೆ ಹತ್ತು ಗ್ರಾಂ ಚಿನ್ನದ ಬೆಲೆ 1550 ರೂಪಾಯಿ ಇಳಿಕೆಯಾಗಿದ್ದು, ಒಟ್ಟು ದರ 1,14,020 ರೂಪಾಯಿ ತಲುಪಿದೆ.
ಚಿನ್ನದ ಮೇಲಿನ ಹೂಡಿಕೆದಾರರಿಗೆ ಶಾಕ್
ಮುಂದುವರಿದು, 22 ಕ್ಯಾರಟ್ ಚಿನ್ನವು ಆಗಸ್ಟ್ 29ರಿಂದಲೇ ಇಳಿಕೆಯತ್ತ ಸಾಗಿದೆ. ನಿತ್ಯವು 1000-2000ರೂಪಾಯಿಯಷ್ಟು ದರ ಇಳಿಕೆ ಆಗಿದೆ. ಈ ಮೊದಲು ಬೆಲೆಯಲ್ಲಿ ಹಾವು ಏಣಿ ಆಟವಾದರೂ ಕಾಣುತ್ತಿತ್ತು. ಆದರೆ ಇತ್ತೀಚೆಗೆ ಬಂಗಾರದ ಬೆಲೆ ಸತತವಾಗಿ ಇಳಿಕೆಯತ್ತ ಸಾಗಿದ್ದು, ಹೂಡಿಕೆದಾರರಿಗೆ ಆಘಾತ ಉಂಟಾಗಿದೆ. ಗ್ರಾಹಕರಿಗೆ ಇದೊಂದು ಸೂಕ್ತ ಕಾಲ ಎನ್ನಬಹುದಾಗಿದೆ.
Gold Price Today: ಬೆಳ್ಳಿ ದರ ಎಷ್ಟಿದೆ?
ಶ್ವೇತ ವರ್ಣ ಬೆಳ್ಳಿ ಲೋಹವು ಕಳೆದ ಸುಮಾರು ಎರಡು ವಾರಗಳಿಂದ ಏರಿಕೆಯನ್ನೇ ಕಂಡಿಲ್ಲ. ಆಗಸ್ಟ್ 24ರಿಂದ ಈವರೆಗೆ ಒಂದು ಕೆ.ಜಿ. ಬೆಳ್ಳಿ ದರದಲ್ಲಿ ನಿರಂತರವಾಗಿ ಮೂರು ಬಾರಿ ತಲಾ 5000 ರೂಪಾಯಿಯಂತೆ ಕುಸಿತ ಕಂಡಿದ್ದು ಬಿಟ್ಟರೆ, ಹೆಚ್ಚಿನ ದಿನಗಳಲ್ಲಿ ಬೆಳ್ಳಿ ದರ ಸ್ಥಿರವಾಗಿದೆ. ಬೆಳೆ ಏರಿಕೆಯತ್ತ ಮುಖ ಮಾಡಿಲ್ಲ. ಕೈಗಾರಿಕೆ, ಆಭರಣ ಸೇರಿದಂತೆ ಇನ್ನಿತರ ಉದ್ದೇಶಗಳಿಗೆ ಬಳಕೆ ಆಗುವ ಬೆಳ್ಳಿಯ ಮೌಲ್ಯ ಇಳಿಕೆ ಆಗಿದೆ.
ನಗರವಾರು 22ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ
ಚೆನ್ನೈ: 13,935 ರೂಪಾಯಿ
ಮುಂಬೈ: 13,935 ರೂಪಾಯಿ
ದೆಹಲಿ: 13,950 ರೂಪಾಯಿ
ಕೊಲ್ಕತ್ತಾ: 13,935 ರೂಪಾಯಿ
ಬೆಂಗಳೂರು: 13,935 ರೂಪಾಯಿ
ಹೈದರಾಬಾದ್: 13,935 ರೂಪಾಯಿ
ಕೇರಳ: 13,935ರೂಪಾಯಿ
ಪುಣೆ: 13,935 ರೂಪಾಯಿ
ಅಹಮದಾಬಾದ್: 13,935 ರೂಪಾಯಿ


Click it and Unblock the Notifications
