Gold Price: ಮದುವೆ ಸಡಗರದಲ್ಲಿರುವವರಿಗೆ ಬಂಗಾರ ಕೊಳ್ಳಲು ಇದೇ ಉತ್ತಮ ಸಮಯ-ಯಾಕೆ ಗೊತ್ತಾ? ಇಲ್ಲಿದೆ ಮಾಹಿತಿ
Gold Price: ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಬಂಗಾರ ದರ ಒಂದು ವಾರದಿಂದ ಸತತವಾಗಿ ಇಳಿಕೆಯಾಗುತ್ತಲೇ ಬಂದಿದೆ. ಹಾಗೆಯೇ ಕೆಲವು ತಿಂಗಳುಗಳ ಹಿಂದೆಯಷ್ಟೇ 10 ಗ್ರಾಂ (22 ಕ್ಯಾರಟ್ ಬಂಗಾರ) 63,000 ರೂಪಾಯಿವರೆಗೂ ಇಳಿಯಾಗಿ ದಿಢೀರನೇ ಏರಿಕೆಯಾಗಿತ್ತು. ಹಾಗೆಯೇ ಈಗಲೂ ಕೂಡ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಮತ್ತೆ ಏರಿಕೆಯಾಗುವ ಸಾಧ್ಯತೆಗಳು ಹೆಚ್ಚಿದ್ದು, ಆದ್ದರಿಂದ ಇದೇ ಚಿನ್ನ ಖರೀದಿ ಮಾಡಲು ಉತ್ತಮ ಸಮಯವಾಗಿದೆ.
ಇನ್ನೇನು ಕೆಲವೇ ದಿನಗಳಲ್ಲಿ ಮದುವೇ ಸೀಸನ್ ಬರಲಿದ್ದು, ಈ ಹಿನ್ನೆಲೆ ಯಾವ ಸಮಯದಲ್ಲಾದರೂ 10 ಗ್ರಾಂ (22 ಕ್ಯಾರಟ್) ಬಂಗಾರ ದರ 70,000 ರೂಪಾಯಿ ದಾಟಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ ಆದ್ದರಿಂದ ಮದುವೆ ಸಡಗರದಲ್ಲಿರುವವರುಗೆ ಚಿನ್ನ ಖರೀದಿ ಮಾಡಲು ಇದೇ ಉತ್ತಮ ಸಮಯ. ಇದನ್ನು ಬಿಟ್ಟರೆ, ಮತ್ತೇ ಯಾವುದೇ ವಿದಿಯಿಲ್ಲದೇ, ದರ ಏರಿಕೆಯಾದಾಗಲೇ ಬಂಗಾರ ಖರೀದಿ ಮಾಡಬೇಕಾಗುತ್ತದೆ ಎಚ್ಚರವಿರಲಿ.

ಕಳೆದ ವಾರ ಸತತ ಇಳಿಕೆ ಕಂಡಿದ್ದ ಬಂಗಾರ ದರ ಇದೀಗ ನಿನ್ನೆಗೆ ಜೂನ್ (16)ಹೋಲಿಕೆ ಮಾಡಿದರೆ ಇಂದು (ಜೂನ್ 17) ಇಳಿಕೆಯಾಗಿದೆ. ಹಾಗಾದೆರೆ ಕರ್ನಾಟಕ ರಾಜಧಾನಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಪ್ರಸ್ತುತ ಬಂಗಾರ ದರ ಎಷ್ಟಿದೆ ಎನ್ನುವ ಅಂಕಿಅಂಶಗಳ ವಿವರವನ್ನು ಇಲ್ಲಿ ಗಮನಿಸಿ.
8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 53,192 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 58,032 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 66,490 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 72,540 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 66,490 ರೂಪಾಯಿ
* ಚೆನ್ನೈ - 67,040 ರೂಪಾಯಿ
* ಮುಂಬೈ - 66,490 ರೂಪಾಯಿ
* ಕೋಲ್ಕತ್ತಾ - 66,490 ರೂಪಾಯಿ
* ನವದೆಹಲಿ - 66,640 ರೂಪಾಯಿ
* ಹೈದರಾಬಾದ್ - 66,490 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 72,540 ರೂಪಾಯಿ
* ಚೆನ್ನೈ - 73,140 ರೂಪಾಯಿ
* ಮುಂಬೈ - 72,540 ರೂಪಾಯಿ
* ಕೋಲ್ಕತ್ತಾ - 72,540 ರೂಪಾಯಿ
* ನವದೆಹಲಿ - 72,690 ರೂಪಾಯಿ
* ಹೈದರಾಬಾದ್ - 72,540 ರೂಪಾಯಿ












Click it and Unblock the Notifications