Gold Price: ಚಿನ್ನದ ಬೆಲೆ ₹3800 ಏರಿಕೆ; ಕುಸಿದ ಬೆಳ್ಳಿ ದರ
ಸೋಮವಾರ ಕುಸಿತ ಕಂಡಿದ್ದ ಚಿನ್ನದ ಬೆಲೆ ಮಂಗಳವಾರ ಮತ್ತೆ ಏರಿಕೆ ಕಂಡಿದೆ. ಆಭರಣ ಚಿನ್ನದ ಬೆಲೆ ಪ್ರತಿ ಗ್ರಾಂಗೆ 35 ರೂಪಾಯಿ ಏರಿಕೆಯಾಗಿದ್ದರೆ, ಶುದ್ಧ ಚಿನ್ನದ ಬೆಲೆ ಪ್ರತಿ ಗ್ರಾಂಗೆ 38 ರೂಪಾಯಿ ಹೆಚ್ಚಾಗಿದೆ. ಚಿನ್ನದ ಬೆಲೆ ಏರಿಕೆಯಾದರೆ ಮತ್ತೊಂದೆಡೆ ಬೆಳ್ಳಿ ಬೆಲೆ ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ ಶುದ್ಧ ಚಿನ್ನದ ಬೆಲೆ 100 ಗ್ರಾಂ ಗೆ 3800 ರೂಪಾಯಿ ಏರಿಕೆಯಾಗಿದ್ದು, ಸೋಮವಾರ ₹ 7,36,400 ಇದ್ದ 100 ಗ್ರಾಂ ಶುದ್ಧ ಚಿನ್ನದ ಬೆಲೆ ಮಂಗಳವಾರ ₹ 7,40,200 ಗೆ ಏರಿಕೆಯಾಗಿದೆ. ಒಂದು ಗ್ರಾಂ ಶುದ್ಧ ಚಿನ್ನ ಈಗ ₹ 7,402 ರಷ್ಟಾಗಿದೆ.

ಆಭರಣ ಚಿನ್ನದ ಬೆಲೆ ಗ್ರಾಂಗೆ 35 ರೂಪಾಯಿ ಹೆಚ್ಚಳವಾಗಿದೆ. ಸೋಮವಾರ ₹ 6,75,000 ಇದ್ದ 100 ಗ್ರಾಂ ಆಭರಣ ಚಿನ್ನದ ಬೆಲೆ ಮಂಗಳವಾರ ₹ 6,78,500 ಆಗಿದೆ. ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 6,785 ರೂಪಾಯಿ ಇದೆ.
ಬೆಳ್ಳಿ ಬೆಲೆ ಇಳಿಕೆ
ಚಿನ್ನದ ಬೆಲೆ ಏರಿಕೆಯಾಗಿದ್ದರೆ ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಪ್ರತಿ ಕೆಜಿ ಬೆಳ್ಳಿ ಬೆಲೆ 900 ರೂಪಾಯಿ ಕಡಿಮೆಯಾಗಿದೆ. ಸೋಮವಾರ ₹ 94,250 ಇದ್ದ ಒಂದು ಕೆಜಿ ಬೆಳ್ಳಿ ಮಂಗಳವಾರ ₹ 95,200 ಆಗಿದೆ. ಪ್ರತಿ ಗ್ರಾಂ ಬೆಳ್ಳಿ ಬೆಲೆ ಸೊಮವಾರ ₹ 95.20 ಇದ್ದರೆ ಮಂಗಳವಾರ ₹ 94.25 ಆಗಿದೆ.
ಇಳಿಕೆಯಾಗುತ್ತಾ ಚಿನ್ನದ ದರ
ಚಿನ್ನದ ಬೆಲೆ ಬೇಡಿಕೆ, ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಏರಿಳಿಕೆ ಕಾಣುತ್ತಿದೆ. ಕೇಂದ್ರ ಸರ್ಕಾರ ದೇಶಾದ್ಯಂತ ಒಂದೇ ರೀತಿ ಚಿನ್ನದ ದರ ನಿಗದಿಪಡಿಸಲು ಮುಂದಾಗಿದ್ದು ದರ ಕಡಿಮೆಯಾಗುವ ನಿರೀಕ್ಷೆ ಮಾಡಲಾಗಿದೆ.












Click it and Unblock the Notifications