• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೊಸ ಗರಿಷ್ಠ ಮಟ್ಟ ತಲುಪಿದ ಚಿನ್ನದ ಬೆಲೆ: 2 ದಿನದಲ್ಲಿ 1,000 ರೂ. ಏರಿಕೆ

|

ನವದೆಹಲಿ, ಆಗಸ್ಟ್‌ 07: ಭಾರತೀಯ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಇಂದು ಮತ್ತಷ್ಟು ಹೆಚ್ಚಾಗಿದೆ. ಎಂಸಿಎಕ್ಸ್‌ನಲ್ಲಿ ಅಕ್ಟೋಬರ್ ಚಿನ್ನದ ಭವಿಷ್ಯವು 10 ಗ್ರಾಂಗೆ 300 ರೂಪಾಯಿ ಏರಿಕೆಯಾಗಿ ಹೊಸ ಗರಿಷ್ಠ ಮಟ್ಟ 56,143 ರೂಪಾಯಿಗೆ ತಲುಪಿದೆ.

ಚಿನ್ನದ ಭವಿಷ್ಯದ ಜೊತೆಗೆ ಬೆಳ್ಳಿ ಭವಿಷ್ಯವು ಪ್ರತಿ ಕೆಜಿಗೆ 1,750 ಡಾಲರ್ ಅಥವಾ ಶೇಕಡಾ 2.3ರಿಂದ 77,802 ರೂಪಾಯಿಗೆ ಏರಿದೆ. ಹಿಂದಿನ ಅಧಿವೇಶನದಲ್ಲಿ, ಚಿನ್ನವು ಪ್ರತಿ ಗ್ರಾಂಗೆ ಶೇಕಡಾ 1.3ರಷ್ಟು ಅಥವಾ 720 ರೂಪಾಯಿ ಏರಿಕೆಯಾಗಿದ್ದು, ಇಂಟ್ರಾಡೇ ಗರಿಷ್ಠ 10 ಗ್ರಾಂಗೆ, 56,079 ಕ್ಕೆ ತಲುಪಿದೆ. ಬೆಳ್ಳಿ ಪ್ರತಿ ಕೆ.ಜಿ.ಗೆ ಶೇಕಡಾ 5.6 ಅಥವಾ 4,100 ರೂಪಾಯಿ ಏರಿಕೆಯಾಗಿದೆ.

ಚಿನ್ನದ ಬೆಲೆಯಲ್ಲಿ ನಿಲ್ಲದ ಏರಿಕೆ: ಬೆಳ್ಳಿ ಕೆಜಿಗೆ 73,500 ರೂಪಾಯಿ

ಭಾರತದಲ್ಲಿ ಈ ವರ್ಷ ಚಿನ್ನವು ಶೇಕಡಾ 44ರಷ್ಟು ಏರಿಕೆಯಾಗಿದ್ದು, ಜಾಗತಿಕ ಮಟ್ಟದಲ್ಲಿ ಹಳದಿ ಲೋಹಕ್ಕೆ ಭಾರೀ ಬೇಡಿಕೆ ಸೃಷ್ಠಿಯಾಗಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿ, ಹೆಚ್ಚು ಪ್ರಚೋದನೆ ಮತ್ತು ಅಮೆರಿಕಾ-ಚೀನಾ ಉದ್ವಿಗ್ನತೆಯ ನಿರೀಕ್ಷೆಯಂತೆ ಚಿನ್ನವು ತನ್ನ ದಾಖಲೆಯ ಏರಿಕೆ ಮುಂದುವರೆಸಿದೆ. ಸ್ಪಾಟ್ ಚಿನ್ನವು ಶೇ. 0.3ರಷ್ಟು ಏರಿಕೆಯಾಗಿ ಔನ್ಸ್‌ಗೆ 2,068.32 ಡಾಲರ್‌ಗೆ ತಲುಪಿದೆ. ಬೆಳ್ಳಿ ಔನ್ಸ್‌ಗೆ ಶೇ. 2.6ರಷ್ಟು ಏರಿಕೆಯಾಗಿ, 30 ಡಾಲರ್‌ಗೆ ಜಿಗಿದಿದೆ.

ಚಿನ್ನದ ಬೆಲೆಗಳನ್ನು ದುರ್ಬಲ ಯುಎಸ್ ಡಾಲರ್ ಸಹ ಬೆಂಬಲಿಸಿದೆ, ಇದು ಇತರ ಕರೆನ್ಸಿಗಳನ್ನು ಹೊಂದಿರುವವರಿಗೆ ಕಡಿಮೆ ವೆಚ್ಚವನ್ನು ನೀಡುತ್ತದೆ. ಇತರ ಆರು ಕರೆನ್ಸಿಗಳ ವಿರುದ್ಧ ಅಮೆರಿಕಾ ಡಾಲರ್ ಬಲವನ್ನು ಅಳೆಯುವ ಡಾಲರ್ ಸೂಚ್ಯಂಕವು ಎರಡು ವರ್ಷಗಳಿಗಿಂತಲೂ ಕಡಿಮೆಯಾಗಿದೆ.

English summary
Gold and silver prices moved higher today in Indian markets continuing their recent momentum. On MCX, October gold futures rose Rs 300 to a new high of 56,143 per 10 gram. Silver futures rallied Rs 1,750 per kg.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X