Gold Price: ಚಿನ್ನ ಮತ್ತೊಮ್ಮೆ 67,100 ರೂಪಾಯಿಗೆ ಏರಿಕೆ! ಈಗ ಎಷ್ಟಿದೆ ಬಂಗಾರದ ಬೆಲೆ?
ಬಂಗಾರ ಹಾಗೂ ಬೆಳ್ಳಿಯ ಬೆಲೆ ಮತ್ತೊಮ್ಮೆ ಭಾರಿ ಪ್ರಮಾಣದಲ್ಲಿ ಇಂದು ಏರಿಳಿತ ಕಂಡಿದೆ. ಚಿನ್ನದ ಬೆಲೆ ಭಾರಿ ಏರಿಕೆ ಕಾಣುತ್ತಿದೆ, ಹೀಗಾಗಿ ಬಂಗಾರ ಖರೀದಿ ಮಾಡಬೇಕು ಎನ್ನುತ್ತಲೇ ಕಾಯುತ್ತಿದ್ದ ಜನರಿಗೆ ಆಘಾತ ಎದುರಾಗಿದೆ. ಅದರಲ್ಲೂ ಇಂದು ಒಂದೇ ದಿನ ಗರಿಷ್ಠ 5,500 ರೂಪಾಯಿ ಏರಿಕೆಯನ್ನ ಕಂಡಿದೆ ಚಿನ್ನದ ಬೆಲೆ. ಹಾಗಾದ್ರೆ ಇಂದು ಕರ್ನಾಟಕ & ಕರ್ನಾಟಕದ ರಾಜಧಾನಿ ಬೆಂಗಳೂರಲ್ಲಿ ಎಷ್ಟಿದೆ ಚಿನ್ನದ ಬೆಲೆ? ಇಂದು ಬೆಲೆ ಏರಿಕೆಗೆ ಕಾರಣ ಏನು? ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ ಬನ್ನಿ.
ಚಿನ್ನ.. ಚಿನ್ನ.. ಚಿನ್ನ.. ಭಾರತದಲ್ಲಿ ಚಿನ್ನ ಇಲ್ಲದೆ ಶುಭಕಾರ್ಯ ನಡೆಯುವುದಿಲ್ಲ ಬಿಡಿ. ಆಧುನಿಕ ಕಾಲದಲ್ಲಿ ಚಿನ್ನ ಅದೆಷ್ಟು ಮುಖ್ಯ ಅಂದ್ರೆ ಬಂಗಾರ ಇಲ್ಲದೆ ಏನೂ ನಡೆಯಲ್ಲ ಬಿಡಿ. ಯಾಕಂದ್ರೆ ಚಿನ್ನ ಆಭರಣವಾಗಿ ಮಾತ್ರವಲ್ಲ ಹಲವು ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕೆಯಲ್ಲಿ ಕೂಡ ಬಳಕೆ ಮಾಡಲಾಗುತ್ತೆ. ಮೊಬೈಲ್ ಸೇರಿ ಹಲವು ಎಲೆಕ್ಟ್ರಾನಿಕ್ ಉಪಕರಣ ತಯಾರಿಕೆಗು ಚಿನ್ನ ಬೇಕೆ ಬೇಕಾಗುತ್ತೆ. ಹೀಗಾಗಿ ಚಿನ್ನ ಆಧುನಿಕ ಕಾಲದಲ್ಲಿ ಅತ್ಯವಶ್ಯಕ ವಸ್ತು ಎನಿಸಿಕೊಂಡು ಬೇಡಿಕೆ ಪಡೆದಿದೆ. ಎಲ್ಲಾ ಕಡೆಯಿಂದಲೂ ಕೂಡ ಚಿನ್ನಕ್ಕೆ ಬೇಡಿಕೆ ಹೆಚ್ಚಾಗುತ್ತಿರುವ ಕಾರಣಕ್ಕೆ ಬೆಲೆಯಲ್ಲಿ ಏರಿಳಿತ ಉಂಟಾಗುತ್ತಿದ್ದು ಇಂದು ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ.

5,500 ರೂಪಾಯಿ ಏರಿಕೆ!
ಕರ್ನಾಟಕ & ಬೆಂಗಳೂರಲ್ಲಿ ಇಂದು ಚಿನ್ನದ ಬೆಲೆ ಏರಿಕೆ ಕಂಡು ಆಭರಣ ಪ್ರಿಯರಿಗೆ ಬೇಸರದ ಸುದ್ದಿ ನೀಡಿದೆ. 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆಯು ಏರಿಕೆ ಬಳಿಕ ಮತ್ತಷ್ಟು ಮೇಲೆ ಹೋಗಿದೆ 100 ಗ್ರಾಂಗೆ 5,500 ರೂಪಾಯಿ ಏರಿಕೆಯನ್ನ ಕಂಡಿದೆ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ. ಹೀಗೆ ಶುದ್ಧ ಚಿನ್ನ ಬೆಲೆ ಪ್ರತಿ 100 ಗ್ರಾಂಗೆ 7,32,000 ರೂಪಾಯಿ ಆಗಿದೆ. ಇದರ ಜೊತೆ ಶುದ್ಧ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 73,200 ರೂಪಾಯಿಗೆ ಏರಿಕೆ ಆಗಿದೆ. ಆಭರಣ ಚಿನ್ನ ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಈಗ ಎಷ್ಟಿದೆ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
22 ಕ್ಯಾರೆಟ್ ಚಿನ್ನದ ಬೆಲೆ...
ಒಡವೆ ಅಥವಾ ಆಭರಣ ತಯಾರಿಕೆಗಾಗಿ ಬಳಸುವ 22 ಕ್ಯಾರೆಟ್ ಚಿನ್ನದ ಬೆಲೆ ಕೂಡ ಭರ್ಜರಿ ಏರಿಕೆ ಕಂಡಿದೆ ಇಂದು. ಆಭರಣ ಚಿನ್ನ ಇಂದು ಒಂದೇ ದಿನ ಬರೋಬ್ಬರಿ 5000 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ ಇದೀಗ ಪ್ರತಿ 10 ಗ್ರಾಂ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ, ಬರೋಬ್ಬರಿ 67,100 ರೂಪಾಯಿಗೆ ತಲುಪಿದೆ.
ಹಾಗೇ ಮತ್ತೊಂದು ಕಡೆ 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಕೂಡ ಭಾರಿ ಏರಿಕೆ ಆಗಿದ್ದು, ಪ್ರತಿ 100 ಗ್ರಾಂ 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದೇ ದಿನ ಬರೋಬ್ಬರಿ 4,100 ರೂಪಾಯಿ ಏರಿಕೆ ಕಂಡಿದೆ. ಹೀಗಾಗಿ 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 5,49,000 ರೂಪಾಯಿ ಇದ್ದರೆ, 10 ಗ್ರಾಂಗೆ 54,900 ರೂಪಾಯಿ ಇದೆ. ಒಟ್ನಲ್ಲಿ ಈ ಮೂಲಕ ಚಿನ್ನದ ಬೆಲೆಯಲ್ಲಿ ಭಾರಿ ಏರಿಳಿತ ಕಂಡುಬರುತ್ತಿದೆ.












Click it and Unblock the Notifications