Gold Price on November 1st: ತಿಂಗಳ ಮೊದಲ ದಿನ ಚಿನ್ನದ ಬೆಲೆ ಕುಸಿತ, ಬೆಳ್ಳಿ ದರ ಏರಿಕೆ
Gold Silver Price: ಭಾರತದ ಸೇರಿದಂತೆ ಇತರ ದೇಶಗಳಲ್ಲಿ ಸದಾ ಬೇಡಿಕೆ ಇರುತ್ತಿದ್ದ ಚಿನ್ನಕ್ಕೆ ಕೊಂಚ ಬೇಡಿಕೆ ಕುಸಿದಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಹಾವು ಏಣಿ ಆಟ ಮುಮದುವರಿದಿದೆ. ಎರಡು ದಿನ ಕುಸಿದರೆ, ಒಂದು ದಿನ ಬೆಲೆ ಹೆಚ್ಚಳವಾಗುತ್ತಿದೆ. ಇಂದು ನವೆಂಬರ್ ತಿಂಗಳ ಮೊದಲ ದಿನವೇ (ನ.01) ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ ಆಗಿದೆ. ಬೆಳ್ಳಿ ದರ ಗಗನಕ್ಕೇರಿದೆ. ನಿಮ್ಮ ಊರುಗಳು, ಪ್ರಮುಖ ನಗರಗಳಲ್ಲಿ ಇಂದು ಎಷ್ಟಿದೆ ಬಂಗಾರದ ಬೆಲೆ ಪಟ್ಟಿ ಇಲ್ಲಿದೆ ಮಾಹಿತಿ.
ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿನ ಬದಲಾವಣೆ, ತೆರಿಗೆ ನೀತಿಗಳು ಮಾತ್ರವಲ್ಲದೇ, ಒಪ್ಪಂದಗಳು, ನಿರಂತರ ಚಿನ್ನದ ಖರೀದಿ ಹಾಗೂ ಯುದ್ಧದ ಭೀತಿಗಳಿಂದಾಗಿ ಈ ಲೋಹಗಳ ಮೇಲಿನ ದರ ಬದಲಾವಣೆ ಆಗುತ್ತಲೇ ಇದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ನೆನ್ನೆ 1,23,280 ರೂಪಾಯಿ ಇದ್ದದ್ದು ಇಂದು 1,23,000 ರೂಪಾಯಿಗೆ ಕುಸಿತಿದೆ. ಒಟ್ಟು 280 ರೂ. ಇಳಿಕೆ ಆಗಿದೆ.

22 ಕ್ಯಾರಟ್ 10 ಗ್ರಾಂ ಬಂಗಾರದ ಬೆಲೆಗೆ 1,13,000 ರೂಪಾಯಿಯಿಂದ 1,12,750 ರೂಪಾಯಿಗೆ ಕುಸಿದಿದೆ. ಇಂದಿಗೆ 250 ರೂಪಾಯಿಗೆ ಕುಸಿದಿದೆ. ಕಳೆದ ಒಂದು ವಾರದಲ್ಲಿ ಚಿನ್ನದ ಬೆಲೆಯು ಭರ್ತಿ ನಾಲ್ಕು ಬಾರಿ ಇಳಿಕೆ ಆಗಿದೆ. ಅದರಲ್ಲಿ ಮೂರು ಭಾರಿ ಮಾತ್ರವೇ ಕೊಂಚ ದರ ಹೆಚ್ಚಾಗಿದೆ. ಇಂದು ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಬೆಲೆ ಇಳಿಕೆ ಮಾಡಿದ್ದಾರೆ.
ಚಿನ್ನಕ್ಕೆ ವಿರುದ್ಧವಾಗಿ ಇಂದು ಬೆಳ್ಳಿಯ ಬೆಲೆಯಲ್ಲಿ 100 ಗ್ರಾಂ ದರವು ₹100 ಹೆಚ್ಚಾಗಿದೆ. ನೆನ್ನೆ ಇದ್ದ 15,100 ರೂಪಾಯಿಯಿಂದ 15,200ಗೆ ಏರಿಕೆ ಆಗಿದೆ. ಒಂದು ಕೆಜಿ ಚಿನ್ನದ ಬೆಲೆಯು 1000 ರೂಪಾಯಿ ಹೆಚ್ಚಾಗಿದ್ದು, ಅದರ ಬೆಲೆ 1,52,000 ರೂಪಾಯಿ ಇದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ಒಂದು ಲಕ್ಷ ರೂಪಾಯಿ ದಾಟಿದ ಬಳಿಕ ಚಿನ್ನ, ಬೆಳ್ಳಿಯ ದರವು ನಿರಂತರವಾಗಿ ಹೆಚ್ಚಾಗುತ್ತದೆ. 22ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಎರಡು ಲಕ್ಷ ರೂಪಾಯಿ ಆಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇತ್ತ ಕನಿಷ್ಠ 15ರಿಂದ 20ರಷ್ಟು ದರ ಇಳಿಕೆ ಆಗಲಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ. ಆ ಅಂದಾಜು ನಿಜವೆಂಬಂತೆ ನಿಧಾನವಾಗಿ ಚಿನ್ನದ ಬೆಲೆ ಇಳಿಕೆ ಆಗುತ್ತಿದೆ. ನಗರವಾರು ಇಂದಿನ 22 ಕ್ಯಾರಟ್ ಚಿನ್ನ ಬೆಲೆ ಮಾಹಿತಿ ಇಲ್ಲಿದೆ.
ಬೆಂಗಳೂರಲ್ಲಿನ 10 ಗ್ರಾಂ ಚಿನ್ನ-ಬೆಳ್ಳಿ ದರ
22 ಕ್ಯಾರಟ್ ಚಿನ್ನ: ₹1, 12,750
24 ಕ್ಯಾರಟ್ ಚಿನ್ನ: ₹1,23,000
10 ಗ್ರಾಂ ಬೆಳ್ಳಿ ದರ: ₹15,200
ನಗರವಾರು 22 ಕ್ಯಾರಟ್ ಚಿನ್ನ ಬೆಲೆ ವಿವರ
ಬೆಂಗಳೂರು: 1, 12,750 ರೂಪಾಯಿ
ಅಹಮದಾಬಾದ್:11,570 ರೂಪಾಯಿ
ಬೆಂಗಳೂರು : 111,460 ರೂಪಾಯಿ
ಚೆನ್ನೈ : 113,110 ರೂಪಾಯಿ
ದೆಹಲಿ : 111,610 ರೂಪಾಯಿ
ಮುಂಬೈ : 112,950 ರೂಪಾಯಿ
ಭೋಪಾಲ್ : 111,680 ರೂಪಾಯಿ
ಭುವನೇಶ್ವರ : 111,370 ರೂಪಾಯಿ
ಚಂಡೀಗಢ : 111,570 ರೂಪಾಯಿ
ಫರಿದಾಬಾದ್ : 111,690 ರೂಪಾಯಿ












Click it and Unblock the Notifications