Gold Price on May 20: ಚಿನ್ನ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್‌: ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ?

Gold Price on May 20: ಚಿನ್ನ ಮತ್ತು ಬೆಳ್ಳಿ ಪ್ರಿಯರಿಗೆ ಇಲ್ಲೊಂದು ಭರ್ಜರಿ ಗುಡ್‌ನ್ಯೂಸ್‌ ಇದೆ. ಇತ್ತೀಚೆಗೆ ಭಾರೀ ಏರಿಕೆ ಕಂಡಿದ್ದ ಚಿನ್ನದ ಬೆಲೆಯು ಇದೀಗ ಏಕಾಏಕಿ ಇಳಿಕೆಯತ್ತ ಸಾಗುತ್ತಿದೆ. ಚಿನ್ನದ ಬೆಲೆ ಭರ್ಜರಿ ಇಳಿಕೆಯಾಗಿದೆ. ಮೇ 20ರ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ಹಾಗೂ ನೆನ್ನೆಗಿಂತ ಎಷ್ಟು ಕಡಿಮೆಯಾಗಿದೆ ಎನ್ನುವ ನಿಖರ ಬೆಲೆ ಇಲ್ಲಿದೆ.

ಬಂಗಾರದ ಬೆಲೆಯಲ್ಲಿ ನಿರಂತರ ಇಳಿಕೆ ಮುಂದುವರಿದಿದೆ. ಚಿನ್ನದ ಬೆಲೆಯಲ್ಲಿ ಸೋಮವಾರಕ್ಕಿಂತ ಮಂಗಳವಾರ ಭರ್ಜರಿ ಇಳಿಕೆ ಕಂಡಿದೆ. 24 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 4,900 ರೂಪಾಯಿ ಇಳಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲೂ ಬದಲಾವಣೆ ಆಗುತ್ತಿದೆ. ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನತೆ ಎದುರಾದ ಸಂದರ್ಭದಲ್ಲಿ ಭಾರತದಲ್ಲಿ ಚಿನ್ನದ ಬೆಲೆಯು ಭಾರೀ ಏರಿಕೆ ಕಂಡಿತ್ತು. ಅಲ್ಲದೇ ವಿಶ್ವದ ವಿವಿಧ ದೇಶಗಳ ನಡುವಿನ ಉದ್ವಿಗ್ನತೆಯ ಕಾರಣ ಸೇರಿದಂತೆ ವಿವಿಧ ಕಾರಣಗಳಿಗಾಗಿ ಚಿನ್ನದ ಬೆಲೆಯು ಏರಿಕೆ ಆಗಿತ್ತು. ಇದೀಗ ಕಳೆದ ಒಂದು ವಾರದಿಂದ ಚಿನ್ನದ ಬೆಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ.

Gold Price on May 20 New Great Good News for Gold lovers Gold and silver prices drop sharply

18 ಕ್ಯಾರೆಟ್‌ ಚಿನ್ನದ ಬೆಲೆ: ಇನ್ನು ಮೇ 20ರಂದು 18 ಕ್ಯಾರೆಟ್‌ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. 1 ಗ್ರಾಂ 18 ಕ್ಯಾರೆಟ್‌ ಚಿನ್ನದ ಬೆಲೆಯು 7,127 ರೂಪಾಯಿ ಹಾಗೂ 10 ಗ್ರಾಂಗೆ 71,270 ರೂಪಾಯಿ ಆಗಿದೆ. ನೆನ್ನೆಗೆ ಮೇ 19ಕ್ಕೆ ಹೋಲಿಕೆ ಮಾಡಿದರೆ 18 ಕ್ಯಾರೆಟ್‌ ಚಿನ್ನದ ಬೆಲೆಯು 100 ಗ್ರಾಂಗೆ 3,600 ರೂಪಾಯಿ ಇಳಿಕೆ ಕಂಡಿದೆ.

22 ಕ್ಯಾರೆಟ್‌ ಚಿನ್ನದ ಬೆಲೆ: 22 ಕ್ಯಾರೆಟ್‌ ಚಿನ್ನದ ಬೆಲೆ ಸಹ ಇಳಿಕೆ ಕಂಡಿದೆ. 1 ಗ್ರಾಂ 22 ಕ್ಯಾರೆಟ್‌ ಚಿನ್ನದ ಬೆಲೆಯು 8,710 ರೂಪಾಯಿ ಆಗಿದೆ. 10 ಗ್ರಾಂ ಬೆಲೆಯು 87,100 ರೂಪಾಯಿ ಆಗಿದೆ. ನೆನ್ನೆಗಿಂತ 22 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆಯು 4,500 ರೂಪಾಯಿ ಕಡಿಮೆಯಾಗಿದೆ.

Gold Price on May 20 New Great Good News for Gold lovers Gold and silver prices drop sharply

24 ಕ್ಯಾರೆಟ್‌ ಚಿನ್ನದ ಬೆಲೆ: ಇನ್ನು 24 ಕ್ಯಾರೆಟ್‌ ಚಿನ್ನದ ಬೆಲೆ 1 ಗ್ರಾಂಗೆ 9,502 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ ಬೆಲೆಯು 95,020 ರೂಪಾಯಿ ಇಳಿಕೆಯಾಗಿದೆ. ನೆನ್ನೆಗಿಂತ 24 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆಯು 4,900 ರೂಪಾಯಿ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯು ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.

ಬೆಳ್ಳಿ ಬೆಲೆ ಎಷ್ಟಿದೆ ?

ಇನ್ನು ಚಿನ್ನದ ಬೆಲೆಯಲ್ಲಿ ಮಾತ್ರವಲ್ಲ ಬೆಳ್ಳಿ ಬೆಲೆಯಲ್ಲೂ ಭರ್ಜರಿ ಇಳಿಕೆಯಾಗಿದೆ. ಬೆಳ್ಳಿ ಬೆಲೆಯು ಪ್ರತಿ ಗ್ರಾಂಗೆ 97 ರೂಪಾಯಿ ಆಗಿದ್ದರೆ. ಪ್ರತಿ ಕೆ.ಜಿ ಬೆಳ್ಳಿ ಬೆಲೆಯು 97,000 ಸಾವಿರ ರೂಪಾಯಿ ಆಗಿದೆ. ಈ ಮೂಲಕ ನೆನ್ನೆಗಿಂತ ಇಂದು ಬೆಳ್ಳಿ ಬೆಲೆಯು ಬರೋಬ್ಬರಿ 1000 ರೂಪಾಯಿ ಇಳಿಕೆಯಾದಂತೆ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+