Gold Price: ಆಭರಣ ಪ್ರಿಯರಿಗೆ ಆಘಾತ, ಬಂಗಾರದ ಬೆಲೆ 1 ಲಕ್ಷ ರೂಪಾಯಿ...
ಚಿನ್ನ.. ಚಿನ್ನ.. ಅಂತಾ ಕನಸಿನಲ್ಲೂ ಕನವರಿಸುವ ಮಹಿಳೆಯರಿಗೆ & ಆಭರಣ ಪ್ರಿಯರಿಗೆ ಆಘಾತವೇ ಎದುರಾಗುತ್ತಿದೆ. ಯಾಕಂದ್ರೆ ದೀಪಾವಳಿ ಹಬ್ಬದ ಸಮಯದಲ್ಲೇ ಚಿನ್ನದ ಬೆಲೆಯು ಭಾರಿ ಭರ್ಜರಿ ಏರಿಕೆ ಕಾಣುತ್ತಿದ್ದು, ಸಿಕ್ಕಾಪಟ್ಟೆ ಆಘಾತ ಎದುರಾಗಿದೆ. ಅದರಲ್ಲೂ ನೋಡ ನೋಡುತ್ತಲೇ ಚಿನ್ನದ ಬೆಲೆ ಇದೀಗ ಆಕಾಶಕ್ಕೆ ತಲುಪುತ್ತಿದೆ. ದೀಪಾವಳಿ & ಲಕ್ಷ್ಮೀ ಪೂಜೆಯ ಸಮಯದಲ್ಲೇ ಆಭರಣ ಪ್ರಿಯರಿಗೆ ಚಿನ್ನ ಶಾಕ್ ಕೊಟ್ಟಿದ್ದು, ಬಂಗಾರದ ಬೆಲೆಯು 1 ಲಕ್ಷ ರೂಪಾಯಿ...
ದೀಪಾವಳಿ ಹಬ್ಬದ ದಿನ ಬಂಗಾರ ಖರೀದಿ ಮಾಡಬೇಕು ಅಂತಾ ಕಾಯುತ್ತಿದ್ದವರೇ ಗಮನಿಸಿ. ದೀಪಾವಳಿ... ದೀಪಾವಳಿ... ಹೀಗೆ ಎಲ್ಲರೂ ಸಿಕ್ಕಾಪಟ್ಟೆ ಸಂಭ್ರಮದಲ್ಲಿ ದೀಪಾವಳಿ ಹಬ್ಬ ಆಚರಣೆ ಮಾಡುತ್ತಿದ್ದಾರೆ. ದೀಪಾವಳಿ ಹಬ್ಬದ ಜೊತೆಗೆ ಲಕ್ಷ್ಮೀ ಪೂಜೆ ಕೂಡ ಸಖತ್ ಗ್ರ್ಯಾಂಡ್ ಆಗಿ ನಡೆಯುತ್ತಿದೆ. ಹೀಗಿದ್ದಾಗಲೇ ಚಿನ್ನ ಖರೀದಿ ಮಾಡಬೇಕು ಅಂತಾ ಕೋಟ್ಯಂತರ ಜನರು ಕಾಯುತ್ತಿದ್ದಾರೆ. ಇಂತಹ ಅದ್ಭುತ ಸಂದರ್ಭದಲ್ಲೇ ಚಿನ್ನ ಬೆಲೆಯಲ್ಲಿ ಮತ್ತೆ 7,100 ರೂಪಾಯಿ ಏರಿಕೆ ಆಗಿದೆ.

ಬಂಗಾರದ ಬೆಲೆ ಈಗ ಎಷ್ಟಿದೆ?
ಹಬ್ಬಗಳ ಸಮಯದಲ್ಲಿ ಕಡಿಮೆ ಕಡಿಮೆ ಅಂದ್ರೂ ಒಂದು ಗ್ರಾಂ ಚಿನ್ನವನ್ನಾದರೂ ಖರೀದಿ ಮಾಡಬೇಕು ಎಂಬುದು ಎಲ್ಲರ ಆಸೆ. ಇದೆ ಕಾರಣಕ್ಕೆ ಜನ ಕೂಡ ಚಿನ್ನ ಖರೀದಿಗೆ ಕಾಯುತ್ತಾರೆ. ಆದರೆ ಮತ್ತೊಮ್ಮೆ ಚಿನ್ನದ ಬೆಲೆ ಏರಿಕೆ ಕಂಡಿದೆ. 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಏರಿಕೆ ಬಳಿಕ ಮತ್ತಷ್ಟು ಕೈ ಸುಡುತ್ತಿದೆ. ಪ್ರತಿ 100 ಗ್ರಾಂ 7100 ರೂಪಾಯಿ ಏರಿಕೆ ಕಂಡಿದೆ 24 ಕ್ಯಾರೆಟ್ ಶುದ್ಧ ಚಿನ್ನ. ಹೀಗಾಗಿಯೇ ಶುದ್ಧ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 8,11,600 ರೂಪಾಯಿ ಆಗಿದೆ ಇದರ ಜೊತೆಯಲ್ಲಿ ಶುದ್ಧ ಬಂಗಾರದ ಬೆಲೆ ಪ್ರತಿ 10 ಗ್ರಾಂಗೆ 81,160 ರೂಪಾಯಿಗೆ ಏರಿಕೆ ಆಗಿದ್ದು, ಈ ಮೂಲಕ ಚಿನ್ನದ ಖರೀದಿಗೆ ಕಾಯುತ್ತಿದ್ದವರಿಗೆ ಬೇಸರವಾಗಿದೆ.
ಆಭರಣ ಚಿನ್ನದ ಬೆಲೆಯಲ್ಲೂ ಏರಿಕೆ!
22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯಲ್ಲಿ ಕೂಡ ಭರ್ಜರಿ ಏರಿಕೆ ಕಂಡುಬಂದು, ದೀಪಾವಳಿ ಹಬ್ಬದ ಸಮಯದಲ್ಲಿ ಚಿನ್ನ ಖರೀದಿ ಮಾಡಲು ಪ್ಲಾನ್ ಮಾಡಿದ್ದವರಿಗೆ ಶಾಕ್ ಸಿಕ್ಕಂತಾಗಿದೆ. ಅದು ಹೇಗೆ ಅಂದ್ರೆ, 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ ಬರೋಬ್ಬರಿ 6,500 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 7,44,000 ರೂಪಾಯಿ ಆಗಿದ್ದು, 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 74,400 ರೂಪಾಯಿ ಆಗಿದೆ. ಹೀಗಾಗಿ ಜನರು ಕೂಡ ದೀಪಾವಳಿ ಸಮಯದಲ್ಲಿ ಚಿನ್ನ ಖರೀದಿ ಮಾಡಲು ಹಿಂದೆ & ಮುಂದೆ ಯೋಚನೆ ಮಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ.












Click it and Unblock the Notifications