Gold Price: ಚಿನ್ನದ ಬೆಲೆ 1.59 ಲಕ್ಷ ರೂಪಾಯಿ, ಬೆಳ್ಳಿ ಬೆಲೆ ಮತ್ತಷ್ಟು ಏರಿಕೆ... ಯುದ್ಧ ಭೀತಿಯಲ್ಲಿ ಖರೀದಿ ಜೋರು!
ಚಿನ್ನದ ಬೆಲೆ ಹಾಗೂ ಬೆಳ್ಳಿ ಬೆಲೆ ಮುಗಿಲು ಮುಟ್ಟುತ್ತಿದೆ, ನೋಡ ನೋಡುತ್ತಿದ್ದಂತೆ ಚಿನ್ನ 1.59 ಲಕ್ಷ ರೂಪಾಯಿ ಪ್ರತಿ 10 ಗ್ರಾಂಗೆ ತಲುಪಿದೆ. ಇಂದು ಕೂಡ ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ ಕಂಡುಬಂದ ಕಾರಣಕ್ಕೆ ಆಭರಣ ಪ್ರಿಯರು ಚಿಂತೆ ಮಾಡುತ್ತಿದ್ದು, ಇನ್ನೇನು ಮದುವೆ ಹಾಗೂ ಶುಭಕಾರ್ಯ ಶುರು ಆಗುವ ಸಮಯದಲ್ಲೇ ಆತಂಕ ಮೂಡಿದೆ. ಅದರಲ್ಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಘಟನೆಗಳು ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಗೆ ಕಾರಣವಾಗುತ್ತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಮತ್ತೆ ಚಿನ್ನದ ಬೆಲೆ ಸಾರ್ವಕಾಲಿಕ ಹಂತ ತಲುಪುವ ಮುನ್ಸೂಚನೆ ಸಿಗುತ್ತಿದೆ. ಹಾಗಾದರೆ ಚಿನ್ನದ ಬೆಲೆ ಏರಿಕೆಗೆ ಏನಿದು ಅಂತಾರಾಷ್ಟ್ರೀಯ ಕಾರಣ? ಬನ್ನಿ ತಿಳಿಯೋಣ.
ಚಿನ್ನ ಮತ್ತು ಬೆಳ್ಳಿ ಎಂಬುದು ಭಾರತೀಯರ ಸಂಸ್ಕೃತಿ ಜೊತೆಗೆ ಬೆರೆತು ಹೋಗಿದ್ದು, ಯಾವುದೇ ರೀತಿ ಶುಭಕಾರ್ಯ ಮಾಡಬೇಕು ಎಂದರೂ ಚಿನ್ನ ಅಥವಾ ಬೆಳ್ಳಿ ಇರಲೇಬೇಕು. ಇಲ್ಲದೇ ಹೋದರೆ ಅಂತಹ ಶುಭಕಾರ್ಯ ಪೂರ್ಣಗೊಂಡಂತೆ ಆಗುವುದೇ ಇಲ್ಲ. ಹೀಗಿದ್ದಾಗ ಪ್ರತಿದಿನ ಕೂಡ ಚಿನ್ನದ ಬೆಲೆಯು ಭಾರಿ ಏರಿಕೆ ಕಾಣುತ್ತಿದ್ದು, ಬೆಳ್ಳಿ ಬೆಲೆ ಕೂಡ ವಿಪರೀತ ಏರಿಕೆ ಆಗಿದೆ. ಇಂದು ಕೂಡ ಅದೇ ರೀತಿಯಾಗಿ, ಚಿನ್ನದ ಬೆಲೆ ಹಾಗೂ ಬೆಳ್ಳಿ ಬೆಲೆ ಭಾರಿ ಏರಿಕೆ ಕಂಡಿದೆ. ಇರಾನ್ ಮತ್ತು ಅಮೆರಿಕ ನಡುವಿನ ಕಿರಿಕ್ ಹಾಗೂ ಯುದ್ಧ ಭೀತಿ ನಡುವೆ ಚಿನ್ನದ ಬೆಲೆ ನಡುಕ ಹುಟ್ಟಿಸುವ ಹಂತಕ್ಕೆ ತಲುಪುತ್ತಿದೆ ಈಗ. ಹಾಗಾದರೆ ಈಗ ಎಷ್ಟಿದೆ ಚಿನ್ನದ ಬೆಲೆ?

ಇಂದು ಎಷ್ಟಿದೆ ಚಿನ್ನದ ಬೆಲೆ?
ಚಿನ್ನದ ಬೆಲೆ ದಿಢೀರ್ 5,400 ರೂಪಾಯಿ ಭಾರಿ ಏರಿಕೆ ಕಂಡು, 24 ಕ್ಯಾರೆಟ್ ಶುದ್ಧ ಚಿನ್ನ ಬೆಲೆ ಪ್ರತಿ 10 ಗ್ರಾಂಗೆ 1,59,710 ರೂಪಾಯಿಗೆ ತಲುಪಿದೆ. ಹಾಗೇ ಮತ್ತೊಂದು ಕಡೆ 22 ಕ್ಯಾರೆಟ್ ಆಭರಣ ಚಿನ್ನವು ಪ್ರತಿ 10 ಗ್ರಾಂಗೆ 4,950 ರೂಪಾಯಿ ಏರಿಕೆ ಕಂಡಿದೆ ಇಂದು. 22 ಕ್ಯಾರೆಟ್ ಆಭರಣ ಚಿನ್ನ ಪ್ರತಿ 10 ಗ್ರಾಂಗೆ ಇದೀಗ 1,46,400 ರೂಪಾಯಿಗೆ ತಲುಪಿದ್ದು, ಆ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ. ಆದರೆ ಈ ರೀತಿ ಚಿನ್ನದ ಬೆಲೆ ಏರಿಕೆ ಹಿಂದೆ ಮಹತ್ವದ ಕಾರಣ ಇದ್ದು, ಅಮೆರಿಕ ಮತ್ತು ಇರಾನ್ ನಡುವೆ ಶುರುವಾಗಿರುವ ಯುದ್ಧ ಭೀತಿಯು ಕೂಡ ಚಿನ್ನ ಹಾಗೂ ಬೆಳ್ಳಿ ಬೆಲೆ ಏರಿಕೆಗೆ ಕಾರಣಗಳಲ್ಲಿ ಒಂದು ಎನ್ನಲಾಗುತ್ತಿದೆ. ಹಾಗೇ ಬೆಳ್ಳಿ ಬೆಲೆ ಒಂದೇ ದಿನ 15,000 ಪ್ರತಿ ಕೆಜಿಗೆ ಏರಿಕೆಯಾಗಿ ಇದೀಗ 3,40,000 ರೂಪಾಯಿ ತಲುಪಿದೆ.
ಚಿನ್ನ ಖರೀದಿ ಮತ್ತಷ್ಟು ಕಷ್ಟ
ಈಗಾಗಲೇ ಚಿನ್ನದ ಬೆಲೆ ಭಾರಿ ದೊಡ್ಡ ಪ್ರಮಾಣದಲ್ಲಿ ಏರಿಕೆ ಕಂಡಿದೆ ಎಂದು ಚಿಂತೆ ಮಾಡುತ್ತಿರುವ ಜನರಿಗೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ಏಕೆಂದರೆ ಇದೀಗ ಇರುವ ಚಿನ್ನದ ಬೆಲೆಯಲ್ಲಿ, ಹಾಗೂ ಬೆಳ್ಳಿ ಬೆಲೆಯನ್ನು ನೋಡಿದರೆ ಬಡವರು ಹಾಗೂ ಮಧ್ಯಮ ವರ್ಗದವರು ಈ ಅಪರೂಪದ ಲೋಹಗಳನ್ನು ಖರೀದಿ ಮಾಡುವುದು ಕಷ್ಟಕರ. ಹೀಗಿದ್ದಾಗ ಮತ್ತೊಂದಿಷ್ಟು ಟೆನ್ಷನ್ ಶುರುವಾಗಿದ್ದು ಆದಷ್ಟು ಬೇಗ ಚಿನ್ನದ ಬೆಲೆ ಇಳಿಕೆ ಕಾಣಲಿ ಎಂದು ಕಾಯುತ್ತಿದ್ದಾರೆ ಜನ. ಆದರೆ ಈಗಿನ ವಾತಾವರಣ ಅದಕ್ಕೆ ಪೂರಕವಾಗಿಲ್ಲ, ಚಿನ್ನ ಹಾಗೂ ಬೆಳ್ಳಿ ಬೆಲೆ ಇದೇ ರೀತಿ ಮುಂದಿನ ಕೆಲವು ದಿನಗಳ ಕಾಲ ಮತ್ತೆ ಏರಿಕೆ ಕಾಣಬಹುದು ಎನ್ನುತ್ತಿದ್ದಾರೆ ತಜ್ಞರು. ಕಳೆದ 2 ವರ್ಷದ ಅಂತರದಲ್ಲಿ ಚಿನ್ನ ಹಾಗೂ ಬೆಳ್ಳಿಗೆ ಭಾರಿ ಡಿಮ್ಯಾಂಡ್ ಬಂದಿರುವ ಕಾರಣ ಬೆಲೆ ಕೂಡ ಆಕಾಶ ಮುಟ್ಟುತ್ತಿದೆ.












Click it and Unblock the Notifications