Gold Price: ಚಿನ್ನ ಬೆಲೆ 1 ಲಕ್ಷ ರೂಪಾಯಿ ಪ್ರತಿ 10 ಗ್ರಾಂಗೆ ತಲುಪುವ...

ಚಿನ್ನ... ಚಿನ್ನ... ಹೀಗೆ ಹೆಂಡತಿಗೆ ನೀವು ಚಿನ್ನ ಅಂತಾ ಕರೆಯುತ್ತೀರಾ? ಇಲ್ಲ ಇಲ್ಲ ಈ ರೀತಿ ನೀವು ಚಿನ್ನ ಅಂತಾ ಕರೆದು ಬೆಣ್ಣೆ ಹಚ್ಚಿದರೆ ಸಾಕಾಗುವುದಿಲ್ಲ. ನಿಮ್ಮ ಮುದ್ದಿನ ಮಡದಿಗೆ ಚಿನ್ನ ಖರೀದಿ ಮಾಡಿ ಕೊಡಿಸಬೇಕು ಕೂಡ, ಇಲ್ಲವಾದರೆ ಕಿರಿಕ್ ಗ್ಯಾರಂಟಿ. ಹೀಗಿದ್ದಾಗಲೇ ಚಿನ್ನದ ಬೆಲೆ ನವೆಂಬರ್ ಆರಂಭದಲ್ಲಿ ಭಾರಿ ಕುಸಿತ ಕಂಡು ಬಂದಿತ್ತು. ಆದರೆ ಇದೀಗ ಮತ್ತೆ ಚಿನ್ನದ ಬೆಲೆ ಮುಗಿಲು ಮುಟ್ಟುತ್ತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಚಿನ್ನದ ಬೆಲೆ 1 ಲಕ್ಷ ರೂಪಾಯಿ ಪ್ರತಿ 10 ಗ್ರಾಂಗೆ ತಲುಪುವ...

ಚಿನ್ನ ಇಲ್ಲದೆ ಶುಭಕಾರ್ಯ ನಡೆಯಲ್ಲ ಎನ್ನಬಹುದು. ಈ ಹಿನ್ನೆಲೆ ಭಾರತದಲ್ಲಿ ಚಿನ್ನಕ್ಕೆ ಭಾರಿ ಬೇಡಿಕೆ ಇದೆ. ಅದ್ರಲ್ಲೂ ಇನ್ನೇನು ಧನುರ್ಮಾಸ ಆರಂಭಕ್ಕೆ ಮೊದಲು ಮದುವೆ, ಶುಭಕಾರ್ಯ ಹೆಚ್ಚಾಗಿ ನಡೆಯಲಿವೆ. ಹೀಗಾಗಿ ಚಿನ್ನ & ಬೆಳ್ಳಿ ಖರೀದಿಗೆ ಜನ ಮುಗಿಬಿದ್ದ ಸಮಯದಲ್ಲೇ ಬೆಲೆ ಏರಿಕೆ ಆಘಾತವು ಸಿಕ್ಕಿದೆ. ಅದರಲ್ಲೂ ಚಿನ್ನದ ಬೆಲೆ ಏರಿಕೆ ಸ್ಥಿತಿ ನೋಡುತ್ತಿದ್ದರೆ, ನವೆಂಬರ್ 4ನೇ ವಾರ ಮತ್ತಷ್ಟು ಆಘಾತ ಸಿಗುವುದು ಗ್ಯಾರಂಟಿ ಆಗಿದೆ! ಹಾಗಾದ್ರೆ ಚಿನ್ನದ ಬೆಲೆ ಈಗ 1 ಲಕ್ಷ ರೂಪಾಯಿ ತಲುಪುತ್ತಾ?

Gold Price May Hit Another High On November Last Week Of 2024

ಚಿನ್ನ.. ಚಿನ್ನ.. ಚಿನ್ನ..

ಶುಭಕಾರ್ಯದಲ್ಲಿ ಚಿನ್ನ ಅತ್ಯಗತ್ಯ ವಸ್ತು. ಚಿನ್ನದ ಬಗ್ಗೆ ಹೇಳುತ್ತಾ ಹೋದ್ರೆ ಸಮಯ ಸಾಲದು ಬಿಡಿ. ಯಾಕಂದ್ರೆ ಅಮೂಲ್ಯವಾದ ವಸ್ತು ಚಿನ್ನ ಭೂಮಿ ಮೇಲೆ ಬದುಕಲು ಈ ಮನುಷ್ಯನಿಗೆ ಸಾಕಷ್ಟು ವಿಧದಲ್ಲಿ ಆಧಾರವಾಗಿದೆ. ಸಾವಿರಾರು ವರ್ಷಗಳಿಂದಲೂ ಮನುಷ್ಯರ ಜೀವನದಲ್ಲಿ ಚಿನ್ನ ಬೆರೆತು ಹೋಗಿದೆ.

ಈ ಪೈಕಿ ಭಾರತೀಯ ಸಂಪ್ರದಾಯದ ಪ್ರಕಾರ, ಯಾವುದೇ ಶುಭಕಾರ್ಯವು ನಡೆಯಲು ಚಿನ್ನ ಅತ್ಯಗತ್ಯ. ಹಾಗಾದ್ರೆ ಇದೀಗ ಚಿನ್ನದ ಬೆಲೆ ಏರಿಕೆ ಗ್ಯಾರಂಟಿ ಆಯ್ತಾ? ಈ ಮೂಲಕ ಚಿನ್ನ 1 ಲಕ್ಷ ರೂಪಾಯಿ ಗಡಿ ದಾಟಿ ಇತಿಹಾಸ ಬರೆಯುತ್ತಾ? ಈಗ ಎಷ್ಟಿದೆ ಚಿನ್ನದ ಬೆಲೆ? ಮುಂದೆ ಓದಿ.

ಚಿನ್ನ 1 ಲಕ್ಷ ರೂಪಾಯಿ ಗಡಿ ದಾಟಿ...

ಬಂಗಾರದ ಬೆಲೆ ಇದೀಗ ಭಾರಿ ದೊಡ್ಡ ಮಟ್ಟಕ್ಕೆ ತಲುಪಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಇದೀಗ ಪ್ರತಿ 10 ಗ್ರಾಂಗೆ 79,630 ಸಾವಿರ ರೂಪಾಯಿ ಇದೆ. ಹಾಗೇ 22 ಕ್ಯಾರೆಟ್ ಚಿನ್ನಕ್ಕೆ ಇದೀಗ 72,990 ರೂಪಾಯಿ ಬೆಲೆ ಇದೆ. ಈ ಮೂಲಕ 24 ಕ್ಯಾರೆಟ್ ಚಿನ್ನದ ಬೆಲೆ ಹಾಗೂ 22 ಕ್ಯಾರೆಟ್ ಚಿನ್ನದ ಬೆಲೆ ನಡುವೆ 6,500 ಸಾವಿರ ರೂಪಾಯಿ ಮಾತ್ರ ವ್ಯತ್ಯಾಸ ಇದೆ.

ಈ ಮೂಲಕ ಇದೀಗ 24 ಕ್ಯಾರೆಟ್ ಚಿನ್ನದ ಬೆಲೆ ನವೆಂಬರ್ ತಿಂಗಳ ಅಂತ್ಯಕ್ಕೆ ಅಂದ್ರೆ ಇದೇ ವಾರ ಮತ್ತಷ್ಟು ಏರಿಕೆ ಕಾಣುವ ನಿರೀಕ್ಷೆ ಇದ್ದು, ಈ ಮೂಲಕ 1 ಲಕ್ಷ ರೂಪಾಯಿ ಗಡಿ ದಾಟಿ ಹೋಗುವ ನಿರೀಕ್ಷೆ ಇದೀಗ ದಟ್ಟವಾಗಿದೆ. ಇದು ಚಿನ್ನ ಖರೀದಿ ಮಾಡುವವರ ನಿದ್ದೆಗೆಡಿಸಿ, ಹೂಡಿಕೆದಾರರಿಗೆ ಖುಷಿ ಖುಷಿ ನೀಡುತ್ತಿದೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+