Gold Price: ಚಿನ್ನದ ಬೆಲೆ ಒಂದೇ ದಿನ 3,200 ರೂಪಾಯಿ ಏರಿಕೆ!

ಚಿನ್ನದ ಬೆಲೆ ಸತತ ಇಳಿಕೆಯ ನಂತರ ಮತ್ತೊಮ್ಮೆ ಭರ್ಜರಿ ಏರಿಕೆ ಕಂಡಿದೆ. ಅದರಲ್ಲೂ ನಿನ್ನೆ ಚಿನ್ನ ಒಂದೇ ದಿನ ಭಾರಿ ಏರಿಕೆ ಕಂಡು, ಚಿನ್ನ ಪ್ರಿಯರಿಗೆ ಆಘಾತ ನೀಡಿದೆ. ಹಾಗಾದ್ರೆ ಇದೀಗ ಎಷ್ಟಿದೆ ಚಿನ್ನದ ಬೆಲೆ? ಬೆಂಗಳೂರು ಸೇರಿದಂತೆ ದೇಶದ ಯಾವ ಯಾವ ನಗರದಲ್ಲಿ ಚಿನ್ನ ಈಗ ಎಷ್ಟು ಬೆಲೆಗೆ ಸಿಗುತ್ತಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

ಚಿನ್ನದ ಬೆಲೆ ಭರ್ಜರಿ ಏರಿಕೆ ಕಂಡಿದೆ ಹೀಗಿದ್ದಾಗಲೇ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರಿಕೆ ಆಗೋದು ಎನ್ನಲಾಗುತ್ತಿದೆ. ನೋಡ ನೋಡುತ್ತಲೇ ಚಿನ್ನದ ಬೆಲೆಯು ಆಕಾಶ ಮುಟ್ಟುತ್ತಿದೆ. ಚಿನ್ನ ಸಂಗ್ರಹಕ್ಕೆ ಪ್ರತಿಯೊಂದು ದೇಶವೂ ತಮ್ಮ ತಮ್ಮ ಆರ್ಥಿಕತೆಯಲ್ಲಿ ಭಾರಿ ಒತ್ತು ನೀಡುತ್ತಿವೆ. ಅದರಲ್ಲೂ ಕೊಲ್ಲಿ ರಾಷ್ಟ್ರಗಳು, ಅರಬ್ ದೇಶಗಳಿಗೆ ಚಿನ್ನ ಬೇಕೆ ಬೇಕಾಗಿದೆ. ಅಮೆರಿಕ ಕೂಡ ಈ ವಿಚಾರದಲ್ಲಿ ಮೊದಲ ಸ್ಥಾನದಲ್ಲಿ ಇದೆ. ಹೀಗಾಗಿ ಸಂಕಷ್ಟ ಬಂದಾಗೆಲ್ಲಾ ಚಿನ್ನ ಸಹಾಯಕ್ಕೆ ಬರಲಿದೆ. ಹೀಗಿದ್ದಾಗ ಇಂದು ಚಿನ್ನ ಬೆಲೆ ಎಷ್ಟು ರೂಪಾಯಿಗೆ ತಲುಪಿದೆ ಗೊತ್ತಾ? ಮುಂದಿನ ದಿನಗಳಲ್ಲಿ ಚಿನ್ನ 1 ಲಕ್ಷ ರೂಪಾಯಿ ಆಗುತ್ತಾ? ಮುಂದೆ ಓದಿ.

Gold Price Is Raised Once Again On 12th Of June After Continuous Decreased

ಚಿನ್ನಕ್ಕೆ ಡಿಮ್ಯಾಂಡಪ್ಪೋ.. ಡಿಮ್ಯಾಂಡು..

ಶುದ್ಧ ಚಿನ್ನ ಅಥವಾ 24 ಕ್ಯಾರೆಟ್ ಚಿನ್ನದ ಬೆಲೆ ಏರಿಕೆ ಆಗಿದ್ದು ಈಗ 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 3,200 ರೂಪಾಯಿ ಏರಿಕೆ ಕಂಡಿದೆ. ಹೀಗಾಗಿ ಶುದ್ಧ ಚಿನ್ನ ಬೆಲೆ ಪ್ರತಿ 100 ಗ್ರಾಂಗೆ 7,21,600 ರೂಪಾಯಿ ಆಗಿದೆ. ಶುದ್ಧ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 72,160 ರೂಪಾಯಿ ಆಗಿದ್ದರೆ, ಆಭರಣ ಚಿನ್ನ ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಈಗ ಮಾರುಕಟ್ಟೆಯಲ್ಲಿ ಭಾರಿ ಏರಿಕೆ ಕಂಡು ಪ್ರತಿ 100 ಗ್ರಾಂ ಆಭರಣ ಚಿನ್ನದ ಬೆಲೆ ಈಗ 3000 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ಈಗ 300 ರೂಪಾಯಿ ಏರಿಕೆ ಆಗಿದ್ದು, ಆಭರಣ ಚಿನ್ನದ ಬೆಲೆ ಏರಿಕೆ ನಂತರ ಪ್ರತಿ 10 ಗ್ರಾಂಗೆ 66,150 ರೂಪಾಯಿಗೆ ಮಾರಾಟ ಆಗುತ್ತಿದೆ.

ಚಿನ್ನದ ಬೆಲೆಯಲ್ಲಿ ಏರಿಕೆ ಯಾಕೆ?

ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ಸ್ಥಿತಿ ಸರಿಯಾಗಿ ಇಲ್ಲ. ಮತ್ತೊಂದ್ಕಡೆ ರಷ್ಯಾ, ಉಕ್ರೇನ್ ಮಧ್ಯೆ ಯುದ್ಧ ಶುರುವಾದ ನಂತರ ಹೂಡಿಕೆ ಮಾಡುವವರಿಗೆ ಭಯವು ಶುರುವಾಗಿದ್ದು. ಯಾವುದೇ ಕ್ಷೇತ್ರದಲ್ಲಿ ಹೂಡಿಕೆ ಮಾಡಿದರೂ ಯುದ್ಧ ಶುರುವಾದರೆ ಕುಸಿತವು ಖಚಿತ. ಇದೇ ಕಾರಣಕ್ಕೆ ಚಿನ್ನದ ಮೇಲಿನ ಹೂಡಿಕೆಯೇ ಬೆಸ್ಟ್ ಎಂಬ ಅಭಿಪ್ರಾಯ ಕೂಡ ಕೇಳಿಬರುತ್ತಿದೆ. ಹಾಗೇ ಇನ್ನೂ ಒಂದಷ್ಟು ದಿನಗಳ ಕಾಲ ಇದೇ ರೀತಿ ಚಿನ್ನದ ಬೆಲೆಯಲ್ಲಿ ಏರಿಳಿತ ಮಾಮೂಲಿ ಎನ್ನಲಾಗುತ್ತಿದೆ.

ಚಿನ್ನ ಈಗ ಅಂತಾರಾಷ್ಟ್ರೀಯ ಕರೆನ್ಸಿ?

ಪ್ರಪಂಚದ ಮಟ್ಟದಲ್ಲಿ ಈಗ ಚಿನ್ನಕ್ಕೆ ಯಾಕೆ ಇಷ್ಟು ಬೆಲೆ ಬಂದಿದೆ ಎಂದರೆ, ಯುದ್ಧಗಳು ಶುರುವಾದ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಟ್ಟಿಯಾದ ಕರೆನ್ಸಿ ಇಲ್ಲವಾಗಿದ್ದು. ಈ ಕಾರಣಕ್ಕೆ ಈಗ ಚಿನ್ನದ ಮೇಲೆ ಜನರಿಗೆ ತುಂಬಾ ನಂಬಿಕೆ ಬಂದಿದೆ. ಹೀಗಾಗಿ ಜನರು ಕೂಡ ಚಿನ್ನ ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಹೀಗಾಗಿ ಏಪ್ರಿಲ್ ತಿಂಗಳಲ್ಲಿ ಚಿನ್ನ ಸಾಕಷ್ಟು ಏರಿಕೆ ಕಂಡಿತ್ತು. ಆದರೆ, ಇದೀಗ ಚಿನ್ನದ ಬೆಲೆ ಇಳಿಕೆ ಕಾಣುತ್ತಿದೆ. ಇಸ್ರೇಲ್ & ಇರಾನ್ ಯುದ್ಧ ನಡೆಯಲ್ಲ ಎಂಬ ನಂಬಿಕೆ ಸಿಕ್ಕ ನಂತರ ಚಿನ್ನದ ಬೆಲೆ ಇಳಿಕೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಜನರು ಕೂಡ ಚಿನ್ನ ಖರೀದಿಯನ್ನು ಆರಾಮವಾಗಿ ಮಾಡಬಹುದು.

ಹೂಡಿಕೆ ಮಾಡುವವರಿಗೆ ಟೆನ್ಷನ್?

ಚಿನ್ನದ ಬೆಲೆ ಮತ್ತೊಮ್ಮೆ ಭಾರಿ ಕುಸಿತ ಕಂಡಿದ್ದು, ಈ ಮೂಲಕ ಚಿನ್ನ ಕೊಳ್ಳಲು ಸುವರ್ಣಾವಕಾಶ ಒದಗಿ ಬಂದಿದೆ. ಚಿನ್ನದ ಬೆಲೆ ಕಳೆದ ಕೆಲ ದಿನಗಳಿಂದ ಪಾತಾಳ ಸೇರುತ್ತಿದೆ ಹೀಗಿದ್ದಾಗ ನಿನ್ನೆ ಕೂಡ ಚಿನ್ನದ ಬೆಲೆ ದಿಢೀರ್ ಕುಸಿತ ಕಂಡಿದ್ದು, ಒಂದೇ ದಿನ ಚಿನ್ನದ ಬೆಲೆ ಬರೋಬ್ಬರಿ 2,700 ರೂಪಾಯಿ ಕುಸಿತ ಕಂಡಿದೆ. 15 ವರ್ಷಗಳಿಗೆ ಹೋಲಿಕೆ ಮಾಡಿದರೆ ಚಿನ್ನದ ಬೆಲೆ ಸಾಕಷ್ಟು ಬದಲಾವಣೆ ಕಂಡಿದೆ. ಮುಂದಿನ ದಿನಗಳಲ್ಲಿ, ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆ ಇದೆ ಎನ್ನಲಾಗಿತ್ತು. ಹೀಗಿದ್ದರೂ, ಚಿನ್ನದ ಬೆಲೆ ಕುಸಿತದ ಕಡೆಗೆ ಮುಖ ಮಾಡುತ್ತಿರುವುದು ಹೂಡಿಕೆ ಮಾಡುವವರಿಗೆ ಟೆನ್ಷನ್ ಕೂಡ ಕೊಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+