Gold Price: ಚಿನ್ನದ ಬೆಲೆ 1,58,620 ರೂಪಾಯಿ, ಕೇಂದ್ರ ಬಜೆಟ್‌ನಲ್ಲಿ ಬಂಗಾರದ ಬೆಲೆ ಇಳಿಕೆಗೆ ಸಿಗುತ್ತಾ ಬೆಂಬಲ?
ಚಿನ್ನ ಚಿನ್ನ, ಎಲ್ಲಿ ಕೇಳಿದರೂ & ನೋಡಿದರೂ ಬರೀ ಬಂಗಾರದ ಬೆಲೆಯ ಬಗ್ಗೆ ಚರ್ಚೆ ಜೋರಾಗಿದೆ. ಯಾಕಂದ್ರೆ ಇದೀಗ ಚಿನ್ನದ ಬೆಲೆ ಅಷ್ಟು ದೊಡ್ಡ ಮಟ್ಟದಲ್ಲಿ ಏರಿಕೆ ಕಾಣುತ್ತಿದ್ದು, ಚಿನ್ನದ ಜೊತೆಗೆ ಬೆಳ್ಳಿ ಬೆಲೆ ಕೂಡ ಆಕಾಶ ಮುಟ್ಟುತ್ತಿದೆ. ನೋಡ ನೋಡುತ್ತಲೇ ಚಿನ್ನದ ಬೆಲೆ ಬರೋಬ್ಬರಿ 1,58,620 ರೂಪಾಯಿ ಪ್ರತಿ 10 ಗ್ರಾಂಗೆ ತಲುಪಿದ್ದು, ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ಇದರಿಂದ ಭಾರಿ ದೊಡ್ಡ ಸಮಸ್ಯೆ ಎದುರಾಗುತ್ತಿದೆ. ಮದುವೆ ಸೇರಿದಂತೆ ಶುಭಕಾರ್ಯಗಳಿಗೆ ಚಿನ್ನ ಖರೀದಿ ಈಗ ಸವಾಲಾಗಿದೆ. ಹೀಗಿದ್ದಾಗ ಕೇಂದ್ರ ಬಜೆಟ್‌ನಲ್ಲಿ ಬಂಗಾರದ ಬೆಲೆ ಇಳಿಕೆಗೆ ಸಿಗುತ್ತಾ ಬೆಂಬಲ?
ಪ್ರಪಂಚದಲ್ಲೇ ಅತಿಹೆಚ್ಚು ಚಿನ್ನ ಇಷ್ಟಪಡುವ ದೇಶ ಎಂದರೆ ಭಾರತ, ಹಾಗೇ ನಮ್ಮ ದೇಶದಲ್ಲಿ ಪ್ರತಿ ವ್ಯಕ್ತಿಗೆ ಸರಾಸರಿ 25 ಗ್ರಾಂ ಚಿನ್ನ ಇದೆಯಂತೆ. ಹೀಗಾಗಿ ಇಡೀ ಜಗತ್ತಿನಲ್ಲೇ ಅತಿಹೆಚ್ಚು ಚಿನ್ನ ಆಮದು ಮಾಡಿಕೊಳ್ಳುವ ದೇಶ ಭಾರತ. ಏಷ್ಯಾ & ಆಫ್ರಿಕಾ ಸೇರಿದಂತೆ ಹಲವು ಭಾಗಗಳಿಂದ ಭಾರತಕ್ಕೆ ಚಿನ್ನ ಆಮದು ಆಗುತ್ತದೆ. ಆದರೆ ಚಿನ್ನದ ಬೆಲೆ ಏರಿಕೆ ನಂತರ ಹೊಸ ಸಮಸ್ಯೆ ಎದುರಾಗಿದ್ದು, ಕಳ್ಳಸಾಗಣೆ ದೊಡ್ಡ ಸಮಸ್ಯೆಯಾಗುತ್ತಿದೆ. ದಿನದಿಂದ ದಿನಕ್ಕೆ ಬಂಗಾರದ ಬೆಲೆ ಏರಿಕೆ ಕಾಣುತ್ತಿರುವ ಬೆನ್ನಲ್ಲೇ ಈ ರೀತಿ ಕಳ್ಳಸಾಗಣೆ ಪರ್ವ ಕೂಡ ಹೆಚ್ಚಾಗುತ್ತಿದೆ. ಹೀಗಾಗಿ ಕಳ್ಳಸಾಗಣೆ ತಡೆಯಲು ಮತ್ತು ಚಿನ್ನದ ಬೆಲೆ ಇಳಿಕೆ ಮಾಡಲು ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಬಂಪರ್ ಘೋಷಣೆ ಮಾಡುತ್ತಾ? ಎಂಬ ಪ್ರಶ್ನೆ ಈಗ ಕಾಡುತ್ತಿದೆ.

ಚಿನ್ನದ ಬೆಲೆ ಇಳಿಕೆ ಗ್ಯಾರಂಟಿ?
2026-27ನೇ ಸಾಲಿನ ಕೇಂದ್ರ ಬಜೆಟ್‌ಗೆ ಇನ್ನು ಕೇವಲ 1 ವಾರ ಬಾಕಿ ಉಳಿದಿದೆ. ಹೀಗಿದ್ದಾಗ ಶತಕೋಟಿ ಭಾರತೀಯರ ಕಣ್ಣು ಕೇಂದ್ರ ಬಜೆಟ್ ಮೇಲೆ ನೆಟ್ಟಿದೆ. ಇಂತಹ ಸಮಯದಲ್ಲಿ, ಚಿನ್ನದ ಕಳ್ಳಸಾಗಣೆ ತಡೆಯಲು ಮತ್ತು ಬಂಗಾರದ ಬೆಲೆ ಕಡಿಮೆ ಮಾಡಲು ಆಮದು ಸುಂಕ ಮತ್ತಷ್ಟು ಇಳಿಕೆ ಮಾಡುವಂತೆ ಆಭರಣ ವ್ಯಾಪಾರಿಗಳು ಮನವಿ ಮಾಡುತ್ತಿದ್ದಾರೆ. ಆ ಮೂಲಕ ಚಿನ್ನ ಬೆಲೆಯಲ್ಲಿ ಇಳಿಕೆ ಕಾಣಬಹುದು ಎಂಬ ನಿರೀಕ್ಷೆ ಕೂಡ ಇದೆ. ಹೀಗಿದ್ದರೂ ಕೇಂದ್ರ ಬಜೆಟ್‌ನಲ್ಲಿ ಚಿನ್ನದ ಮೇಲಿನ ಆಮದು ಸುಂಕವು ಕಡಿಮೆ ಆಗುವುದು ಅನುಮಾನ ಎನ್ನಲಾಗುತ್ತಿದೆ.
ಚಿನ್ನದ ಬೆಲೆ ಏರಿಕೆಗೆ ಕಾರಣ ಏನು?
2026ರ ಬಜೆಟ್‌ನಲ್ಲಿ ಚಿನ್ನದ ಮೇಲಿನ ಆಮದು ಸುಂಕ ಕಡಿತ ಅನುಮಾನ ಎನ್ನುತ್ತಿದ್ದಾರೆ ತಜ್ಞರು. ಈ ಪರಿಸ್ಥಿತಿಗೆ ಕಾರಣ ಏನೆಂದರೆ, ಆಮದು ವೆಚ್ಚಗಳು ಸೇರಿದಂತೆ ಇನ್ನಿತರ ಸಮಸ್ಯೆಗಳ ಪರಿಣಾಮವಾಗಿ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ವಿನಾಯಿತಿ ಘೋಷಣೆ ಮಾಡುವುದು ಅನುಮಾನ ಎನ್ನಲಾಗುತ್ತಿದೆ. ಈ ನಡುವೆ ಜಾಗತಿಕವಾಗಿ ಯುದ್ಧ ಹಾಗೂ ಹಲವು ದೇಶಗಳ ನಡುವಿನ ವೈಮನಸ್ಸಿನ ಪರಿಣಾಮ ದಿಢೀರ್ ಭುಗಿಲೆದ್ದಿರುವ ಅನಿಶ್ಚಿತತೆ, ಯುಎಸ್ ಬಡ್ಡಿದರ ಕಡಿತ ಮತ್ತು ಡಾಲರ್ ವಿಚಾರಗಳಿಂದ ಚಿನ್ನದ ಬೆಲೆ ಭಾರಿ ಏರಿಕೆ ಕಾಣುತ್ತಿದೆ. ಹಾಗೂ ಬೆಳ್ಳಿಗೆ ಕೂಡ ಭಾರಿ ಡಿಮ್ಯಾಂಡ್ ಬಂದಿದ್ದು, ಸಿಲ್ವರ್ ರೇಟ್ ಕೂಡ ದೊಡ್ಡ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಇಷ್ಟೆಲ್ಲದರ ನಡುವೆ ಸದ್ಯಕ್ಕೆ ಚಿನ್ನದ ಬೆಲೆಯಲ್ಲಿ ಇಳಿಕೆ ಆಗುವುದು ಅನುಮಾನ ಎನ್ನಲಾಗುತ್ತಿದೆ.
ಒಟ್ಟಾರೆ ಹೇಳುವುದಾದರೆ ಕೇಂದ್ರ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆಗಳು ಮೂಡಿದ್ದು, ಹೇಗಾದರೂ ಚಿನ್ನದ ಬೆಲೆ ಇಳಿಕೆ ಆಗಲಿ ಎಂದು ಜನರು ಕಾಯುತ್ತಿದ್ದಾರೆ. ಇದೀಗ ಕೇಂದ್ರ ಸರ್ಕಾರ ಕೂಡ ಜನರ ಬೇಡಿಕೆಗೆ ಗ್ರೀನ್ ಸಿಗ್ನಲ್ ಕೊಟ್ಟು ಆಮದು ಸುಂಕ ಕಡಿಮೆ ಮಾಡಿದರೆ ಅದರಿಂದ ಭರ್ಜರಿ ಲಾಭವು ಸಿಗಲಿದೆ. ಚಿನ್ನದ ಬೆಲೆ ಈಗ ಇರುವ ದರಕ್ಕಿಂತ ಒಂದಷ್ಟು ಕಡಿಮೆ ಆಗುವ ನಿರೀಕ್ಷೆ ಕೂಡ ಇದ್ದು, ಹೀಗಾಗಿ ಬಜೆಟ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.












Click it and Unblock the Notifications