Gold Price: ಚಿನ್ನದ ಬೆಲೆ ಭಾರಿ ಕುಸಿತ.. ಮುಂದಿನ ದಿನಗಳಲ್ಲಿ ಮತ್ತಷ್ಟು ಕಡಿಮೆ ಆಗುತ್ತಾ?
ಚಿನ್ನದ ಬೆಲೆ ಮುಗಿಲು ಮುಟ್ಟುತ್ತಿದ್ದ ಸಮಯದಲ್ಲೇ ದಿಢೀರ್ ಕುಸಿಯಲು ಶುರು ಮಾಡಿದೆ. ಕಳೆದ ಕೆಲವು ತಿಂಗಳ ಕಾಲ ನಿರಂತರವಾಗಿ ಏರಿಕೆ ಕಂಡು, ಚಿನ್ನದ ಬೆಲೆ ಇನ್ನೇನು 10 ಗ್ರಾಂ 1 ಲಕ್ಷ ರೂಪಾಯಿ ಆಗಲಿದೆ ಎಂಬ ಮಾತು ಕೇಳಿಬಂದಿತ್ತು. ಆದರೆ ಈಗ 1 ಲಕ್ಷ ತಲುಪುವ ಮಾತು ಬಿಡಿ, 70,000 ರೂಪಾಯಿ ತಲುಪಿದರೆ ಸಾಕಪ್ಪಾ ಅನ್ನೋ ಪರಿಸ್ಥಿತಿ ನಿರ್ಮಾಣ ಆಗಿದೆ. ಇದು ಹೂಡಿಕೆ ಮಾಡಿದ್ದವರಿಗೆ ಚಿಂತೆ ತರಿಸಿದ್ದರೆ, ಆಭರಣ ಅಂದರೆ ಒಡವೆ ಇಷ್ಟುಪಡುವ ಮಹಿಳೆಯರಿಗೆ ಖುಷಿ ನೀಡಿದೆ. ಹಾಗಾದ್ರೆ ಇಂದಿನ ಬೆಲೆ ಎಷ್ಟಿದೆ? ಮುಂದೆ ಓದಿ.
ಚಿನ್ನದ ಬೆಲೆ ಎಷ್ಟೇ ಹೆಚ್ಚಾದರೂ ಅಥವಾ ಕಡಿಮೆ ಆದರೂ ಭಾರತೀಯರು ಕೊಳ್ಳುತ್ತಾರೆ. ಭಾರತೀಯರಿಗೆ ಸಾಮಾನ್ಯವಾಗಿ ಚಿನ್ನ ಅಂದ್ರೆ ತುಂಬಾ ಇಷ್ಟ, ಅದ್ರಲ್ಲೂ ಆಭರಣವನ್ನ ತಮ್ಮ ಮೈಮೇಲೆ ಹಾಕಲು ಭಾರತೀಯರು ತುಂಬಾ ಇಷ್ಟಪಡುತ್ತಾರೆ. ಹೀಗೆ ಭಾರತೀಯರಲ್ಲಿ ಚಿನ್ನದ ಬಗ್ಗೆ ತುಂಬಾ ಕುತೂಹಲ ಇರುತ್ತದೆ.

ಇದೆಲ್ಲವನ್ನೂ ಮೀರಿ ಚಿನ್ನ ಅನ್ನೋದು ಕಷ್ಟದ ಸಮಯ ಬಂದಾಗ ಸಹಾಯಕ್ಕೆ ಬರುವ ಬಂಧು ಅಥವಾ ಸ್ನೇಹಿತ ಇದ್ದಂತೆ. ಹಲವು ರೀತಿಯಲ್ಲಿ ಈ ಚಿನ್ನದ ಉಪಯೋಗ ಪಡೆಯಬಹುದಾಗಿದೆ ಇದೇ ಕಾರಣಕ್ಕೆ, ಚಿನ್ನ ಅಂದ್ರೆ ಭಾರತೀಯರಿಗೆ ಇಷ್ಟ ಇಷ್ಟ. ಹೀಗೆ ತುಂಬಾ ಇಷ್ಟಪಡುವ ವಸ್ತು ಚಿನ್ನ ಕಡಿಮೆ ಬೆಲೆಗೆ ಸಿಗುತ್ತಿದೆ. ಹಾಗಾದ್ರೆ ಇಂದಿನ ಬೆಲೆ ಎಷ್ಟಿದೆ? ಮತ್ತೊಮ್ಮೆ ಕುಸಿತ ಕಂಡ ನಂತರ ಚಿನ್ನದ ಬೆಲೆ ಎಷ್ಟಕ್ಕೆ ಇಳಿಕೆ ಕಂಡಿದೆ? ಮುಂದೆ ಓದಿ.
ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ
ಆಧುನಿಕ ಕಾಲಘಟ್ಟದಲ್ಲಿ ಚಿನ್ನ ಅದೆಷ್ಟು ಮುಖ್ಯ ಎಂದರೆ ಚಿನ್ನವು ಇಲ್ಲದೆ ಏನೂ ನಡೆಯಲ್ಲ. ಯಾಕಂದ್ರೆ ಚಿನ್ನ ಆಭರಣವಾಗಿ ಮಾತ್ರವಲ್ಲ ಹಲವು ಎಲೆಕ್ಟ್ರಾನಿಕ್ ವಸ್ತು ತಯಾರಿಕೆಗೂ ಕೂಡ ಬಳಕೆ ಮಾಡಲಾಗುತ್ತೆ. ಮೊಬೈಲ್ ಸೇರಿದಂತೆ ಹಲವು ಎಲೆಕ್ಟ್ರಾನಿಕ್ ಉಪಕರಣ ತಯಾರಿಕೆಗೂ ಕೂಡ ಚಿನ್ನ ಬೇಕೆ ಬೇಕಾಗುತ್ತೆ.
ಹೀಗಾಗಿ, ಚಿನ್ನ ಇದೀಗ ಆಧುನಿಕ ಕಾಲದಲ್ಲಿ ಅತ್ಯವಶ್ಯಕ ವಸ್ತು ಎನಿಸಿಕೊಂಡಿದ್ದು. ಹೀಗಿದ್ದಾಗ ಚಿನ್ನದ ಬೆಲೆ ಇಳಿಕೆ ಕಂಡು, 24 ಕ್ಯಾರೆಟ್ ಚಿನ್ನದ ಬೆಲೆ 71,240 ರೂಪಾಯಿಗೆ 10 ಗ್ರಾಂ ರೀತಿ ಮಾರಾಟ ಆಗುತ್ತಿದೆ. ಹಾಗೇ 22 ಕ್ಯಾರೆಟ್ ಚಿನ್ನದ ಬೆಲೆ 65,303 ರೂಪಾಯಿಗೆ 10 ಗ್ರಾಂ ರೀತಿ ಮಾರುಕಟ್ಟೆ ಬೆಲೆಯಲ್ಲಿ ಮಾರಾಟ ಆಗುತ್ತಿದೆ. ಮುಂದಿನ ಕೆಲವು ದಿನಗಳ ಕಾಲ ಈ ರೀತಿ ಚಿನ್ನ ಇನ್ನಷ್ಟು ಇಳಿಕೆ ಕಾಣುವ ನಿರೀಕ್ಷೆ ದಟ್ಟವಾಗಿದೆ.
ಅಮೆರಿಕದ ಬಳಿ ಇದೆ ಅತಿಹೆಚ್ಚು ಚಿನ್ನ!
ಚಿನ್ನ ಜಗತ್ತಿನ ಪ್ರತಿಯೊಂದು ದೇಶಕ್ಕೂ ಬೇಕು, ಹೀಗಾಗಿ ಚಿನ್ನ ಸಂಗ್ರಹಣೆ ಬಗ್ಗೆ ಪ್ರಪಂಚ ಒತ್ತು ನೀಡುತ್ತದೆ. ಅದರಲ್ಲೂ ಜಗತ್ತಿನ ಅತ್ಯಂತ ಶ್ರೀಮಂತ ದೇಶ ಎಂಬ ಬಿರುದು ಪಡೆದ, ಅಮೆರಿಕ ಬಳಿ ಅತಿಹೆಚ್ಚು ಚಿನ್ನ ಇದೆ. ಅಮೆರಿಕ ಬಳಿ ಸುಮಾರು 8,133 ಟನ್ ಚಿನ್ನವಿದೆ. ಹಾಗಾದ್ರೆ ಭಾರತ ಈಗ ಎಷ್ಟನೇ ಸ್ಥಾನದಲ್ಲಿ ಇದೆ ಗೊತ್ತಾ? ಅತಿಹೆಚ್ಚು ಚಿನ್ನ ಹೊಂದಿರುವ ಸಂಪೂರ್ಣ ಟಾಪ್-10 ದೇಶಗಳ ಪಟ್ಟಿಗೆ ಮುಂದೆ ಓದಿ.
ಅಮೆರಿಕದ ನಂತರದ ಸ್ಥಾನದಲ್ಲಿ ಜರ್ಮನಿ ಇದ್ದು, 3,352 ಟನ್ ಚಿನ್ನವನ್ನು ಜರ್ಮನಿಯು ಹೊಂದಿದೆ. ಇಟಲಿ ಬಳಿ 2,451 ಟನ್, ಫ್ರಾನ್ಸ್ ಬಳಿ 2,436 ಟನ್, ರಷ್ಯಾ ಬಳಿ 2,332 ಟನ್, ಚೀನಾ ಬಳಿ 2,262 ಟನ್, ಸ್ವಿಜರ್ಲ್ಯಾಂಡ್ ಬಳಿ 1,040, ಜಪಾನ್ ಬಳಿ 845.97 ಟನ್ ಇದ್ದರೆ, ಭಾರತದ ಬಳಿ 822.09 ಟನ್ ಚಿನ್ನದ ಸಂಗ್ರಹ ಇದೆ. ಈ ಮೂಲಕ ಇಡೀ ಜಗತ್ತಿನಲ್ಲಿ ಅತಿಹೆಚ್ಚು ಚಿನ್ನ ಇರುವ ದೇಶಗಳ ಪೈಕಿ ಭಾರತ ಕೂಡ ಒಂದಾಗಿದೆ.
ಹಳದಿ ಲೋಹ ಎಲ್ಲರಿಗೂ ಇಷ್ಟ!
ಚಿನ್ನ ಭಾರತೀಯರ ಪಾಲಿಗೆ ತುರ್ತು ಹಣ ಇದ್ದಂತೆ, ಯಾಕಂದ್ರೆ ಯಾವುದೇ ತುರ್ತು ಸ್ಥಿತಿ ಎದುರಾಗಿ ಪರದಾಟ ಶುರುವಾದರೂ ಭಾರತೀಯರು ಮೊದಲು ತಮ್ಮ ಬಳಿ ಇರುವ ಚಿನ್ನ, ಮತ್ತು ಬೆಳ್ಳಿ ಮೊರೆ ಹೋಗುತ್ತಾರೆ. ಯಾಕಂದ್ರೆ ತುರ್ತು ಪರಿಸ್ಥಿತಿಯಲ್ಲಿ, ಎಲ್ಲಿಯೂ ಹಣ ಸಿಗದೇ ಇದ್ದರೆ ನಮ್ಮ ಬಳಿ ಇರುವ ಚಿನ್ನ & ಬೆಳ್ಳಿಗೆ ಬೇಡಿಕೆ ಬಂದೇ ಬರುತ್ತದೆ. ಹೀಗಾಗಿಯೇ ಬಹುತೇಕ ಭಾರತೀಯರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾ ಬಂದಿದ್ದಾರೆ. ಮತ್ತೊಂದು ಕಡೆ ಚಿನ್ನದ ಮೇಲೆ ಹೂಡಿಕೆ ಮಾಡುವ ಪ್ರತಿಯೊಬ್ಬರಿಗೂ, ಹಳದಿ ಲೋಹ ಬೆನ್ನೆಲುಬಾಗಿ ನಿಂತಿದೆ. ಮುಂದಿನ ದಿನಗಳಲ್ಲಿ ಹಳದಿ ಲೋಹ ಅಂದ್ರೆ ಚಿನ್ನ ಮತ್ತಷ್ಟು ಎತ್ತರಕ್ಕೆ ಹೋಗುವ ನಿರೀಕ್ಷೆ ದಟ್ಟವಾಗಿದೆ.
ಚಿನ್ನ ಈಗ ಅಂತಾರಾಷ್ಟ್ರೀಯ ಕರೆನ್ಸಿ?
ಪ್ರಪಂಚದ ಮಟ್ಟದಲ್ಲಿ ಈಗ ಚಿನ್ನಕ್ಕೆ ಯಾಕೆ ಇಷ್ಟು ಬೆಲೆ ಬಂದಿದೆ ಎಂದರೆ, ಯುದ್ಧಗಳು ಶುರುವಾದ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಟ್ಟಿಯಾದ ಕರೆನ್ಸಿ ಇಲ್ಲವಾಗಿದ್ದು. ಈ ಕಾರಣಕ್ಕೆ ಈಗ ಚಿನ್ನದ ಮೇಲೆ ಜನರಿಗೆ ತುಂಬಾ ನಂಬಿಕೆ ಬಂದಿದೆ. ಹೀಗಾಗಿ ಜನರು ಕೂಡ ಚಿನ್ನ ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಹೀಗಾಗಿ ಏಪ್ರಿಲ್ ತಿಂಗಳಲ್ಲಿ ಚಿನ್ನ ಸಾಕಷ್ಟು ಏರಿಕೆ ಕಂಡಿತ್ತು. ಆದರೆ, ಇದೀಗ ಚಿನ್ನದ ಬೆಲೆ ಇಳಿಕೆ ಕಾಣುತ್ತಿದೆ. ಇಸ್ರೇಲ್ & ಇರಾನ್ ಯುದ್ಧ ನಡೆಯಲ್ಲ ಎಂಬ ನಂಬಿಕೆ ಸಿಕ್ಕ ನಂತರ ಚಿನ್ನದ ಬೆಲೆ ಇಳಿಕೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಜನರು ಕೂಡ ಚಿನ್ನ ಖರೀದಿಯನ್ನು ಆರಾಮವಾಗಿ ಮಾಡಬಹುದು.
ಹೂಡಿಕೆ ಮಾಡುವವರಿಗೆ ಟೆನ್ಷನ್?
ಚಿನ್ನದ ಬೆಲೆ ಮತ್ತೊಮ್ಮೆ ಭಾರಿ ಕುಸಿತ ಕಂಡಿದ್ದು, ಈ ಮೂಲಕ ಚಿನ್ನ ಕೊಳ್ಳಲು ಸುವರ್ಣಾವಕಾಶ ಒದಗಿ ಬಂದಿದೆ. ಚಿನ್ನದ ಬೆಲೆ ಕಳೆದ ಕೆಲ ದಿನಗಳಿಂದ ಪಾತಾಳ ಸೇರುತ್ತಿದೆ ಹೀಗಿದ್ದಾಗ ನಿನ್ನೆ ಕೂಡ ಚಿನ್ನದ ಬೆಲೆ ದಿಢೀರ್ ಕುಸಿತ ಕಂಡಿದ್ದು, ಒಂದೇ ದಿನ ಚಿನ್ನದ ಬೆಲೆ ಬರೋಬ್ಬರಿ 2,700 ರೂಪಾಯಿ ಕುಸಿತ ಕಂಡಿದೆ. 15 ವರ್ಷಗಳಿಗೆ ಹೋಲಿಕೆ ಮಾಡಿದರೆ ಚಿನ್ನದ ಬೆಲೆ ಸಾಕಷ್ಟು ಬದಲಾವಣೆ ಕಂಡಿದೆ. ಮುಂದಿನ ದಿನಗಳಲ್ಲಿ, ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆ ಇದೆ ಎನ್ನಲಾಗಿತ್ತು. ಹೀಗಿದ್ದರೂ, ಚಿನ್ನದ ಬೆಲೆ ಕುಸಿತದ ಕಡೆಗೆ ಮುಖ ಮಾಡುತ್ತಿರುವುದು ಹೂಡಿಕೆ ಮಾಡುವವರಿಗೆ ಟೆನ್ಷನ್ ಕೂಡ ಕೊಡುತ್ತಿದೆ.












Click it and Unblock the Notifications