Gold Price: ಚಿನ್ನ ಬೆಲೆ ಭರ್ಜರಿ ಕುಸಿದು 50,000 ರೂಪಾಯಿ ತಲುಪುವ ನಿರೀಕ್ಷೆ, ಈಗಲೇ ಖರೀದಿ ಮಾಡಬೇಕಾ?
ಚಿನ್ನ.. ಚಿನ್ನ.. ಅಂತಾ ಕನಸಲ್ಲೂ ಕನವರಿಸುತ್ತಿದ್ದ ಚಿನ್ನ ಆಭರಣ ಪ್ರಿಯರು ಈಗ ದಿಢೀರ್ ಚಿನ್ನ ಖರೀದಿ ಮಾಡಲು ಮುಗಿ ಬೀಳುತ್ತಿದ್ದಾರೆ. ಬಂಗಾರ ಬಲು ದುಬಾರಿ ಆಗುತ್ತಿದೆ, ಹಿಂಗೆ ಚಿನ್ನ ಬೆಲೆ ಏರಿಕೆ ಕಂಡರೆ ಬಡವರು ಮದುವೆ ಮಾಡೋದು ಹೇಗೆ? ಚಿನ್ನ ಖರೀದಿ ಮಾಡೋದು ಹೇಗೆ? ಅಂತಾ ಪ್ರಶ್ನೆ ಮಾಡುತ್ತಿದ್ದರು ಬಡವರು & ಮಧ್ಯಮ ವರ್ಗದವರು. ಈ ಸಮಯದಲ್ಲೇ, ಚಿನ್ನದ ಬೆಲೆ ಯಾವ ರೀತಿ ಕುಸಿತ ಕಾಣುತ್ತಿದೆ ಅಂದ್ರೆ, ಇನ್ನೇನು ಕೆಲವೇ ದಿನಗಳಲ್ಲಿ 50,000 ರೂಪಾಯಿ ತಲುಪುವ ನಿರೀಕ್ಷೆಗಳು ಹೆಚ್ಚಾಗಿವೆ. ಇಂತಹ ಸಮಯದಲ್ಲೇ...
ಮದುವೆಗೂ ಚಿನ್ನ ಬೇಕು, ಮನೆಯಲ್ಲಿ ಯಾವುದೇ ಶುಭ ಕಾರ್ಯ ಮಾಡಿದರೂ ಮೊದಲಿಗೆ ಚಿನ್ನ ಖರೀದಿ ಮಾಡಬೇಕು. ಯಾಕಂದ್ರೆ ಚಿನ್ನಕ್ಕೆ ನಮ್ಮ ದೇಶದಲ್ಲಿ ಅಷ್ಟು ದೊಡ್ಡ ಸ್ಥಾನ. ಭಾರತೀಯರಿಗೆ ಸಾಮಾನ್ಯವಾಗಿ ಚಿನ್ನ ಅಂದ್ರೆ ತುಂಬಾ ಇಷ್ಟ ಅದರಲ್ಲೂ ಆಭರಣವನ್ನ ತಮ್ಮ ಮೈಮೇಲೆ ಹಾಕಲು ಭಾರತೀಯರು ತುಂಬಾ ಇಷ್ಟಪಡುತ್ತಾರೆ.

ಹೀಗೆ ಭಾರತೀಯರಲ್ಲಿ ಚಿನ್ನ ಬಗ್ಗೆ ತುಂಬಾ ಕುತೂಹಲ ಇರುತ್ತದೆ. ಇದೆಲ್ಲವನ್ನೂ ಮೀರಿ ಚಿನ್ನ ಅನ್ನೋದು ಕಷ್ಟದ ಸಮಯ ಬಂದಾಗ ಸಹಾಯಕ್ಕೆ ಬರುವ ಬಂಧು ಅಥವಾ ಸ್ನೇಹಿತ ಇದ್ದಂತೆ. ಇದೇ ಚಿನ್ನ ಭಾರಿ ಕುಸಿತ ಕಾಣುತ್ತಿದ್ದು ಇನ್ನೇನು 50,000 ರೂಪಾಯಿ ತಲುಪುವ ನಿರೀಕ್ಷೆ....
ಚಿನ್ನದ ಬೆಲೆ 50,000 ರೂಪಾಯಿ?
ಜಸ್ಟ್ 30 ದಿನ ಅಷ್ಟೇ... 30 ದಿನಗಳ ಹಿಂದೆ ಚಿನ್ನದ ಬೆಲೆ ಹೇಗೆ ಏರಿಕೆ ಕಂಡಿತ್ತು ಅಂದ್ರೆ ಇನ್ನೇನು ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 1,00,000 ರೂಪಾಯಿ ಆಗುತ್ತದೆ ಅಂತಾ ಆಭರಣ ಪ್ರಿಯರು ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿದ್ದರು. ಹಾಗೆಯೇ ಶುದ್ಧ ಚಿನ್ನ ಇನ್ನೇನು 90,000 ರೂಪಾಯಿ ಗಡಿ ದಾಟಿ ಹೋಗುವ ಮುನ್ಸೂಚನೆ ಕೂಡ ನೀಡಿತ್ತು. ಇಷ್ಟೆಲ್ಲದರ ನಡುವೆ ಈ ತಿಂಗಳು ಅಂದ್ರೆ ನವೆಂಬರ್ ತಿಂಗಳಲ್ಲಿ ಚಿನ್ನದ ಬೆಲೆ ಕುಸಿದು ಬೀಳುತ್ತಾ ಪಾತಾಳ ಸೇರ್ತಿದೆ.
ನವೆಂಬರ್ ತಿಂಗಳ ಆರಂಭದಲ್ಲೇ ಚಿನ್ನದ ಬೆಲೆ ಭಾರಿ ಕುಸಿತ ಕಂಡಿತ್ತು. ಅಂದಹಾಗೆ ಹೀಗೆ ಚಿನ್ನದ ಬೆಲೆ ಕುಸಿತ ಕಂಡಿದ್ದ ಕಾರಣ ಜನರು ಕೂಡ ಈಗ ಚಿನ್ನ ಖರೀದಿಗೆ ಮುಂದೆ ಬರ್ತಾ ಇದ್ದಾರೆ. ಮತ್ತೊಂದು ಕಡೆ, ಚಿನ್ನ ಖರೀದಿಗೆ ಇದು ಬೆಸ್ಟ್ ಟೈಂ ಎಂಬ ಮಾತುಗಳು ಕೇಳಿ ಬರ್ತಾ ಇದ್ದರೂ. ಇನ್ನೊಂದು ಕಡೆ ಚಿನ್ನದ ಬೆಲೆ ಮತ್ತಷ್ಟು ಕುಸಿಯುವ ಬಗ್ಗೆ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ ಮದುವೆಗೆ ಅಂತಾ ಚಿನ್ನ ಆರ್ಡರ್ ಮಾಡುವವರಿಗೆ ಈಗ ಬೆಸ್ಟ್ ಟೈಂ ಅಂತಾ ಹೇಳಲಾಗುತ್ತಿದೆ. ಹಾಗಾದ್ರೆ ಈಗ ಎಷ್ಟಿದೆ ಚಿನ್ನದ ಬೆಲೆ? ಮುಂದೆ ಓದಿ.
ಚಿನ್ನದ ಬೆಲೆ ಎಷ್ಟಿದೆ ಈಗ?
ಆಭರಣ ಚಿನ್ನ ಅಥವಾ 22 ಕ್ಯಾರೆಟ್ ಚಿನ್ನದ ಬೆಲೆ ಇದೀಗ ಪ್ರತಿ 10 ಗ್ರಾಂಗೆ 69,950 ರೂಪಾಯಿ ಆಗಿದೆ. ಹಾಗೇ ಶುದ್ಧ ಚಿನ್ನ ಎಂದು ಕರೆಯುವ 24 ಕ್ಯಾರೆಟ್ ಚಿನ್ನದ ಬೆಲೆ ಇದೀಗ ಭರ್ಜರಿ ಪ್ರತಿ 10 ಗ್ರಾಂಗೆ 76,310 ರೂಪಾಯಿಗೆ ಬಂದು ತಲುಪಿದೆ. ಮತ್ತೊಂದು ಕಡೆ ಬೆಳ್ಳಿ ಬೆಲೆಯು ಪ್ರತಿ 1 ಕೆಜಿಗೆ 1 ಲಕ್ಷ ರೂಪಾಯಿಯ ಗಡಿ ದಾಟಿ ಹೋಗಿತ್ತು. ಆದರೆ ಈಗ ಕುಸಿತ ಕಂಡು 89,500 ರೂಪಾಯಿಗೆ ಇಳಿಕೆ ಆಗಿದೆ. ಹಾಗೇ ಪ್ರತಿ 100 ಗ್ರಾಂ ಬೆಳ್ಳಿಯ ಬೆಲೆ ಈಗ 8,950 ರೂಪಾಯಿ ಆಗಿದೆ.
ಚಿನ್ನ ಖರೀದಿ ಮಾಡುವವರಿಗೆ ಖುಷಿ!
ಒಟ್ನಲ್ಲಿ ಬಂಗಾರದ ಬೆಲೆ ಭಾರಿ ಕುಸಿತ ಕಾಣುತ್ತಿದ್ದು, ಇನ್ನೇನು ಮತ್ತೊಂದು ಹಂತಕ್ಕೆ ಕುಸಿದು ಬೀಳುವ ನಿರೀಕ್ಷೆ ಇದೆ. ಚಿನ್ನದ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿತ ಕಾಣುತ್ತಿದ್ದು, ಲಕ್ಷ ಲಕ್ಷ ಏರಿಕೆ ಕಂಡು ಆಭರಣ ಖರೀದಿ ಮಾಡುವವರಿಗೆ ಆಘಾತ ನೀಡಿತ್ತು. ಆದರೆ ಈಗ ಬಂಗಾರದ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿತ ಕಾಣುತ್ತಿದೆ. ಈ ಮೂಲಕ ಚಿನ್ನ ಖರೀದಿ ಮಾಡಬೇಕು ಅಂತಾ ಕಾಯುತ್ತಿದ್ದ ಜನರಿಗೆ ಸಿಕ್ಕಾಪಟ್ಟೆ ಖುಷಿಯಾಗಿದೆ. ಅದರಲ್ಲೂ ಒಂದೇ ವಾರದಲ್ಲಿ ಚಿನ್ನದ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆ ಆಗಿದ್ದು, ಆಭರಣ ಖರೀದಿಗೆ ಕಾಯುತ್ತಿದ್ದ ಜನರಿಗೆ ಇದರಿಂದ ಸಖತ್ ಖುಷಿ ಸಿಕ್ಕಂತಾಗಿದೆ.












Click it and Unblock the Notifications