• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

40 ಸಾವಿರದ ಗಡಿ ದಾಟಿದ ಹತ್ತು ಗ್ರಾಮ್ ಚಿನ್ನದ ಬೆಲೆ

|

ಬೆಂಗಳೂರು, ಆಗಸ್ಟ್ 29: ಪ್ರತಿ ಹತ್ತು ಗ್ರಾಮ್ ಚಿನ್ನದ ಬೆಲೆಯಲ್ಲಿ 250 ರುಪಾಯಿ ಏರಿಕೆಯಾಗಿದ್ದು, ಆ ಮೂಲಕ 10 ಗ್ರಾಮ್ ಚಿನ್ನದ ಬೆಲೆ 40 ಸಾವಿರದ ಗಡಿ ದಾಟಿದೆ. ಇದೇ ಮೊದಲ ಬಾರಿಗೆ ಚಿನಿವಾರ ಪೇಟೆಯಲ್ಲಿ ಪ್ರಬಲ ಬೇಡಿಕೆ ಕಂಡುಬಂದಿದೆ. ಜಾಗತಿಕ ಆರ್ಥಿಕ ಹಿಂಜರಿಕೆ ಆತಂಕದಲ್ಲಿ ಚಿನ್ನ- ಬೆಳ್ಳಿ ಎರಡರ ಬೆಲೆಯಲ್ಲಿ ಭಾರೀ ಏರಿಕೆ ಆಗಿದೆ.

ಸತತ 6ನೇ ದಿನವೂ ಏರಿಕೆ ಕಂಡ ಚಿನ್ನದ ಬೆಲೆ, ಬೆಳ್ಳಿ ಬೆಲೆಯೂ ಏರಿಕೆ

ಸತತ ಎರಡನೇ ದಿನವೂ ದಾಖಲೆಯ ಓಟ ಮುಂದುವರಿಸಿದ ಚಿನ್ನವು ಇನ್ನೂರಾ ಐವತ್ತು ರುಪಾಯಿ ಏರಿಕೆ ಕಂಡು, ಹತ್ತು ಗ್ರಾಮ್ ಚಿನ್ನದ ಬೆಲೆ 40,220 ರುಪಾಯಿಯನ್ನು ತಲುಪಿತು. ಚಿನ್ನ ಬೆಲೆಯು ಬುಧವಾರದಂದು 300 ರುಪಾಯಿಗಳ ಏರಿಕೆ ಕಂಡು, 10 ಗ್ರಾಮ್ ಗೆ 39,970 ರುಪಾಯಿ ತಲುಪಿತ್ತು.

Gold Price Crossed 40 Thousand, Silver Near To 50 Thousand Mark

ಇನ್ನು ಬೆಳ್ಳಿ ಕೇಜಿಗೆ ಐವತ್ತು ಸಾವಿರಕ್ಕೆ ಸಮೀಪ ಇದೆ. ಕೇಜಿಗೆ 200 ರುಪಾಯಿ ಏರಿಕೆ ಕಂಡ ಬೆಳ್ಳಿಯು ಪ್ರತಿ ಕೇಜಿಗೆ 49,050 ರುಪಾಯಿ ತಲುಪಿತು. ಕೈಗಾರಿಕೆಗಳಿಂದ ಹಾಗೂ ನಾಣ್ಯ ತಯಾರಿಕೆ ಘಟಕಗಳಿಂದ ಬಂದ ಭಾರೀ ಬೇಡಿಕೆ ಕಾರಣಕ್ಕೆ ಬೆಳ್ಳಿ ದರದಲ್ಲಿ ಕೂಡ ಏರಿಕೆ ಆಗಿದೆ. ಜಾಗತಿಕ ಆರ್ಥಿಕ ಹಿಂಜರಿತದ ಅಳುಕು, ಅಮೆರಿಕ- ಚೀನಾ ಮಧ್ಯದ ವ್ಯಾಪಾರ ಮಾತುಕತೆಯ ಅನಿಶ್ಚಿತತೆಯಿಂದಾಗಿ ಚಿನ್ನ- ಬೆಳ್ಳಿಗೆ ಬೇಡಿಕೆ ಹೆಚ್ಚಾಗಿದೆ.

ಜತೆಗೆ ಹಬ್ಬದ ಕಾಲವಾದ್ದರಿಂದ ಆಭರಣ ತಯಾರಕರು ಹೊಸದಾಗಿ ಖರೀದಿ ಮಾಡುತ್ತಿರುವುದು ಸಹ ಬೇಡಿಕೆ ಹೆಚ್ಚಾಗುವುದಕ್ಕೆ ಕಾರಣವಾಗಿದೆ.

English summary
Global economy slow down fear and other factors lead gold to cross 40,000 mark and silver near 50,000.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X