Gold Price on May 19: ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಚಿನ್ನದ ದರದಲ್ಲಿ ಇಂದು ಮತ್ತೆ ಹೆಚ್ಚಳ

ಬೆಂಗಳೂರು, ಮೇ 19: ಚಿನ್ನದ ಬೆಲೆಯಲ್ಲಿ ಏರಿಳಿತ ಮುಂದುವರಿದಿದೆ. ಒಂದು ಲಕ್ಷ ರೂಪಾಯಿ ಆಸುಪಾಸಿನಲ್ಲಿರುವ ಚಿನ್ನದ ಬೆಲೆ ಮತ್ತೆ ಏರಿಕೆ ಆಗಿದೆ. ಇತ್ತ ಬೆಳ್ಳಿ ದರದಲ್ಲಿ ಕೊಂಚ ಏರಿಕೆ ಆಗಿದೆ. ಈ ಬೆಲೆ ಏರಿಕೆಯು ಚಿನ್ನ ಖರೀದಿಗೆ ತುದಿಗಾಲಲ್ಲಿದ್ದ ಗ್ರಾಹಕರಿಗೆ ಹಿಂದೇಟು ಹಾಕುವಂತೆ ಮಾಡಿದೆ. ಆಭರಣ ಚಿನ್ನ 22 ಕ್ಯಾರಟ್ ಒಂದು ಗ್ರಾಂಗೆ ಮೇ 19ರಂದು ಸೋಮವಾರ 35 ರೂಪಾಯಿ ಏರಿಕೆ ಗಿದೆ. ಅದೇ ರೀತಿ 24 ಕ್ಯಾರಟ್ ಚಿನ್ನದ ಬೆಲೆಯು ಹೆಚ್ಚಾಗಿದೆ.

22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಇಂದು 87,550 ರೂಪಾಯಿಗೆ ಏರಿಕೆ ಆಗಿದೆ. ನೆನ್ನೆ ಅದರ ಬೆಲೆ 87,200 ರೂಪಾಯಿ ಇದ್ದು, ಒಟ್ಟು 350 ರೂಪಾಯಿ ಹೆಚ್ಚಾಗಿದೆ. ಇದೇ ಚಿನ್ನ 100 ಗ್ರಾಂಗೆ 8,75,500 ರೂಪಾಯಿಗೆ ಹೆಚ್ಚಾಗಿದೆ.

Gold Price Again Increased Rs 350 Per Gram in India Silver Rate Slightly Jump

24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯು ಇಂದು 95,510 ರೂಪಾಯಿಗೆ ಏರಿಕೆ ಆಗಿದೆ. ಇದೇ ಚಿನ್ನಕ್ಕೆ ನೆನ್ನೆ 95,130 ರೂಪಾಯಿ ಇತ್ತು. ಒಂದೇ ದಿನಕ್ಕೆ 380 ರೂಪಾಯಿ ಹೆಚ್ಚಾದಂತಾಗಿದೆ. ಇದೆ ಚಿನ್ನದ 100 ಗ್ರಾಂ ದರವು 9,55,100 ರೂಪಾಗೆ ಹೆಚ್ಚಾಗಿದೆ. ಇಲ್ಲಿ ಒಟ್ಟು ನೆನ್ನೆಗಿಂತ ಒಟ್ಟು 3,800 ರೂಪಾಯಿ ಏರಿಕೆ ಆದಂತಾಗಿದೆ.

ಆಭರಣಕ್ಕೆ ಬಳಕೆ ಆಗುವ ಚಿನ್ನವು ವೇಸ್ಟೇಜ್, ಮೇಕಿಂಗ್ ಚಾರ್ಜ್ ಹಾಗೂ ಸರಕು ಸೇವಾ ತೆರಿಗೆ (ಜಿಎಸ್‌ಟಿ) ಸೇರಿದಂತೆ ಮೇಲೆ ಹೇಳಲಾದ ಬೆಲೆಗಿಂತಲೂ ಹೆಚ್ಚಾಗಬಹುದು. ಅಲ್ಲದೇ, ನಗರದಿಂದ ನಗರಕ್ಕೆ ಈ ದರದಲ್ಲಿ ಕೊಂಚ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಇನ್ನೂ ಬೆಳ್ಳಿಯ ದರ 10 ಗ್ರಾಂಗೆ 980 ರೂಪಾಯಿ ಇದ್ದರೆ, 100 ಗ್ರಾಂ 9800 ರೂಪಾಯಿ ಇದೆ. ಇನ್ನೂ ನಗರವಾರು ಬಂಗಾರದ ದರ ಇಲ್ಲಿದೆ.

22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಂ) ನಗರವಾರು ವಿವರ

ಬೆಂಗಳೂರು: 87,550 ರೂ

ದೆಹಲಿ: 87,700 ರೂಪಾಯಿ

ಹೈದರಾಬಾದ್: 87,550 ರೂಪಾಯಿ

ಕೇರಳ: 87,550 ರೂಪಾಯಿ

ಅಹ್ಮದಾಬಾದ್: 87,600 ರೂಪಾಯಿ

ಚೆನ್ನೈ: 87,550 ರೂಪಾಯಿ

ಮುಂಬೈ: 87,550 ರೂಪಾಯಿ

ಭುವನೇಶ್ವರ್: 87,550 ರೂಪಾಯಿ

ಕೋಲ್ಕತಾ: 87,550 ರೂಪಾಯಿ

ಜೈಪುರ್: 87,700 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+