ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಭರಣ ಚಿನ್ನ ಗ್ರಾಮ್ ಗೆ 3 ಸಾವಿರ ರುಪಾಯಿ, ದೀಪಾವಳಿಗೆ ಏನು ಕಥೆ?

|
Google Oneindia Kannada News

ಬೆಂಗಳೂರು, ಅಕ್ಟೋಬರ್ 25: ಇವತ್ತಿನ ಚಿನ್ನದ ಬೆಲೆ ಎಷ್ಟು ಗೊತ್ತಾ? 22 ಕ್ಯಾರಟ್ ಚಿನ್ನ ಪ್ರತಿ ಗ್ರಾಮ್ ಗೆ 2,987 ರುಪಾಯಿ. ಇನ್ನು ಅಪರಂಜಿ ಚಿನ್ನದ ಬೆಲೆ ಕೇಳಲೇಬೇಡಿ. ಅದಿನ್ನೂ ಮೇಲೆ ಹೋಗಿದೆ. ದೀಪಾವಳಿಗೆ ಇನ್ನೇನು ಹದಿನೈದು ದಿನ ಸಮಯ ಇರುವಾಗಲೇ ಇಷ್ಟೊಂದು ಎತ್ತರಕ್ಕೆ ಚಿನ್ನ ಏರಿರುವುದರ ಹಿಂದೆ ಕೆಲವು ಬಾಹ್ಯ ಕಾರಣಗಳು ಕೆಲಸ ಮಾಡಿವೆ.

ಮುಖ್ಯವಾಗಿ ಡಾಲರ್ ವಿರುದ್ಧ ರುಪಾಯಿ ಮೌಲ್ಯ ಕುಸಿತ ಆಗಿರುವುದು. ಇದರಿಂದ ಚಿನ್ನದ ಬೆಲೆ ಜಾಸ್ತಿ ಆಗುತ್ತದೆ. ಇನ್ನು ಭಾರತದ ಷೇರು ಮಾರುಕಟ್ಟೆ ಕುಸಿತದ ಹಾದಿಯಲ್ಲಿದೆ. ಅಲ್ಲಿ ಹೂಡಿಕೆ ಮಾಡುವವರಿಗೆ ಚಿನ್ನ ಆಕರ್ಷಣೀಯವಾಗಿ ಕಾಣುತ್ತದೆ. ಆದ್ದರಿಂದ ಸಟ್ಟಾ ವ್ಯವಹಾರಕ್ಕೆ ಕಾಣಿಸುವುದು ಚಿನ್ನವೇ.

ಇಳಿಕೆಯಾಗಿದ್ದ ಹಳದಿ ಲೋಹದ ಬೆಲೆ ದಿಢೀರ್ ಏರಿಕೆ! ಇಳಿಕೆಯಾಗಿದ್ದ ಹಳದಿ ಲೋಹದ ಬೆಲೆ ದಿಢೀರ್ ಏರಿಕೆ!

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕೂಡ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇರುವುದು ಕೂಡ ಚಿನ್ನವು ಅಟ್ಟ ಏರಲು ಏಣಿಯಂತಾಗಿದೆ. ಅಕ್ಟೋಬರ್ 25ನೇ ತಾರೀಕಿನಂದು ಇರುವ ಬೆಲೆಗೆ ಅನಿವಾರ್ಯ ಅಲ್ಲದವರು ಚಿನ್ನ ಖರೀದಿ ಮಾಡಲು ಯೋಚನೆ ಮಾಡುವಂತಾಗಿದೆ. ಏಕೆಂದರೆ ಚಿನ್ನದ ಬೆಲೆ, ಅದಕ್ಕೆ ವೇಸ್ಟೇಜ್, ಕೆಲವು ಆಭರಣಕ್ಕೆ ಅಥವಾ ಕೆಲವು ಕಡೆ ಮೇಕಿಂಗ್ ಚಾರ್ಜ್ ಹಾಕುತ್ತಾರೆ. ಜತೆಗೆ 3% ಜಿಎಸ್ ಟಿ ಸೇರುತ್ತದೆ.

ಆಭರಣ ಖರೀದಿಸುವಾಗ ಪ್ರತಿ ಗ್ರಾಮ್ ಗೆ 3,300 ರುಪಾಯಿ ದಾಟುತ್ತದೆ

ಆಭರಣ ಖರೀದಿಸುವಾಗ ಪ್ರತಿ ಗ್ರಾಮ್ ಗೆ 3,300 ರುಪಾಯಿ ದಾಟುತ್ತದೆ

ಇವೆಲ್ಲವೂ ಸೇರಿಕೊಂಡು ಆಭರಣ ಪ್ರತಿ ಗ್ರಾಮ್ ಗೆ 3,300 ರುಪಾಯಿ ದಾಟಿಹೋಗುತ್ತದೆ. ಕಳೆದ ವರ್ಷ ದೀಪಾವಳಿ ಹೊತ್ತಿಗೆ ಚಿನ್ನದ ಬೆಲೆ ಈ ಪರಿಯಲ್ಲಿ ಏರಿಕೆ ಆಗಿರಲಿಲ್ಲ. ಈಗಾಗಲೇ ತಿಳಿಸಿದಂತೆ ಅದಕ್ಕೆ ಮೇಲಿನ ಯಾವ ಅಂಶದ ಪ್ರಭಾವವೂ ಇರಲಿಲ್ಲ. ಆದರೆ ಈ ಸಲ ಹಬ್ಬದ ಹೊತ್ತಿಗೆ ಎಲ್ಲಿಗೆ ಹೋಗಿ ಮುಟ್ಟಬಹುದು ಎಂದು ಊಹಿಸಲು ಸಹ ಕಷ್ಟವಾಗುತ್ತಿದೆ.

ಚಿನ್ನದ ಸಟ್ಟಾ ವ್ಯವಹಾರ ಮಾಡುವವರಿಂದ ಬೆಲೆ ಹೆಚ್ಚಳ

ಚಿನ್ನದ ಸಟ್ಟಾ ವ್ಯವಹಾರ ಮಾಡುವವರಿಂದ ಬೆಲೆ ಹೆಚ್ಚಳ

ತೀರ್ಥಹಳ್ಳಿಯ ಅನ್ನಪೂರ್ಣಾ ಜ್ಯುವೆಲ್ಲರ್ಸ್ ಮಾಲೀಕರಾದ ಎಚ್.ಎನ್.ದಿನೇಶ್ ಅವರನ್ನು ಒನ್ ಇಂಡಿಯಾ ಕನ್ನಡ ಈ ಬಗ್ಗೆ ಮಾತನಾಡಿಸಿತು. "ಚಿನ್ನದ ಮೇಲೆ ಸಟ್ಟಾ ವ್ಯವಹಾರ ಮಾಡುವವರಿಂದ ಬೆಲೆ ಹೆಚ್ಚಾಗಲು ಒಂದು ಕಾರಣ ಇರುತ್ತದೆ. ಆದರೆ ಈ ಸಲ ಡಾಲರ್ ಮೌಲ್ಯ ಹೆಚ್ಚಾಗಿರುವುದು, ಷೇರು ಮಾರುಕಟ್ಟೆ ಕುಸಿತ ಇತ್ಯಾದಿ ಅಂಶಗಳು ಸೇರಿಕೊಂಡಿವೆ" ಎಂದರು.

ನವರಾತ್ರಿಯಲ್ಲಿ ಇಳಿದ ಚಿನ್ನ, ದೀಪಾವಳಿಯಲ್ಲಿ ರಾಕೆಟ್ ನಂತೆ ಏರಲಿದೆ? ನವರಾತ್ರಿಯಲ್ಲಿ ಇಳಿದ ಚಿನ್ನ, ದೀಪಾವಳಿಯಲ್ಲಿ ರಾಕೆಟ್ ನಂತೆ ಏರಲಿದೆ?

ಪ್ರತಿ ಗ್ರಾಮ್ ಗೆ ನೂರು-ಇನ್ನೂರು ರುಪಾಯಿ ಕಡಿಮೆ ಆಗಬೇಕು

ಪ್ರತಿ ಗ್ರಾಮ್ ಗೆ ನೂರು-ಇನ್ನೂರು ರುಪಾಯಿ ಕಡಿಮೆ ಆಗಬೇಕು

ಈ ಸಲ ದೀಪಾವಳಿ ಹೊತ್ತಿಗೆ ಚಿನ್ನದ ಬೆಲೆ ಎಷ್ಟಾಗುತ್ತದೆ ಎಂದು ಅಂದಾಜು ಮಾಡಲು ಸಾಧ್ಯವಿಲ್ಲ. ಆದರೆ ಗ್ರಾಹಕರು ಖರೀದಿಗೆ ಬರಬೇಕು ಅಂದರೆ ಒಂದಿಷ್ಟು ಬೆಲೆ ಕಡಿಮೆ ಆಗಲೇಬೇಕು. ಅಂದರೆ ಈಗಿರುವ ಮಟ್ಟದಿಂದ ನೂರು-ಇನ್ನೂರು ರುಪಾಯಿ ಪ್ರತಿ ಗ್ರಾಮ್ ಗೆ ಕಡಿಮೆ ಆದರೆ ಒಳ್ಳೆಯದು ಎಂದು ಅವರು ಅಭಿಪ್ರಾಯಪಟ್ಟರು.

ಅನಿವಾರ್ಯ ಅಲ್ಲದಿದ್ದರೆ ಈಗ ಖರೀದಿ ಬೇಡ

ಅನಿವಾರ್ಯ ಅಲ್ಲದಿದ್ದರೆ ಈಗ ಖರೀದಿ ಬೇಡ

ಈಗ ಅನಿವಾರ್ಯ ಅಲ್ಲ ಅಂತಾದರೆ ಚಿನ್ನದ ಬೆಲೆ ಕಡಿಮೆ ಆಗುವ ತನಕ ಕಾಯುವುದು ಉತ್ತಮ. ಏಕೆಂದರೆ, ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ಉಳಿತಾಯ ಅನ್ನೋ ರೀತಿ ಚಿನ್ನ ಖರೀದಿ ಮಾಡುವುದಕ್ಕೆ ಇದು ಸೂಕ್ತ ಸಮಯ ಅಲ್ಲ. ಡಾಲರ್ ವಿರುದ್ಧ ರುಪಾಯಿ ಮೌಲ್ಯ ಹೆಚ್ಚಾಗಿ, ಷೇರು ಮಾರುಕಟ್ಟೆ ಚೇತರಿಸಿಕೊಂಡು, ಕಚ್ಚಾ ತೈಲ ಬೆಲೆಯೂ ಇಳಿದರೆ ಚಿನ್ನದ ಬೆಲೆಯೂ ಇಳಿಯುತ್ತದೆ. ಅಲ್ಲಿಯ ತನಕ ತಾಳ್ಮೆ ಇರಬೇಕು ಎಂದು ದಿನೇಶ್ ಹೇಳಿದರು.

ಕುಸಿಯುತ್ತಿರುವ ರೂಪಾಯಿ, ಮತ್ತೆ ಆಮದು ಸುಂಕ ಹೆಚ್ಚಿಸಿದ ಕೇಂದ್ರಕುಸಿಯುತ್ತಿರುವ ರೂಪಾಯಿ, ಮತ್ತೆ ಆಮದು ಸುಂಕ ಹೆಚ್ಚಿಸಿದ ಕೇಂದ್ರ

English summary
22 ct gold price 2,987 on Thursday (October 25th) in Bengaluru. Nearing to Deepavali further rise can expect, jeweler seller express opinion to Oneindia Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X