ಬಂಗಾರದ ಬೆಲೆ ಏರಿಕೆ, 35 ಸಾವಿರ ರು ಗಡಿ ದಾಟುವ ಸೂಚನೆ
ನವದೆಹಲಿ, ಜೂನ್ 25 : ಕೆಲ ದಿನಗಳ ಹಿಂದೆ ಇಳಿಕೆಯಾಗಿದ್ದ ಹಳದಿ ಲೋಹದ ಬೆಲೆ ಮತ್ತೆ ಮೇಲ್ಮುಖವಾಗಿ ಚಲಿಸುತ್ತಿದೆ. ಸ್ಥಳೀಯ ಆಭರಣ ತಯಾರಕರಿಂದ ಬೇಡಿಕೆ ಹೆಚ್ಚಾಗಿದ್ದು, ಜಾಗತಿಕ ಟ್ರೆಂಡ್ ಗೆ ತಕ್ಕಂತೆ ಚಿನ್ನದ ದರದಲ್ಲಿ ಮಂಗಳವಾರ (ಜೂನ್ 25)ದಂದು ಏರಿಕೆ ಕಂಡು ಬಂದಿದೆ.
ಬಂಗಾರದ ಬೆಲೆಯಲ್ಲಿ ಇಂದು ಮತ್ತೆ ಏರಿಕೆ ಕಂಡು ಬಂದಿದೆ. ಅಂತರಾಷ್ಟ್ರೀಯ ಮಾರುಕಟ್ಟೆ ಎಂಸಿಎಕ್ಸ್ ನಲ್ಲಿಯೂ ಬಂಗಾರದ ಬೆಲೆ ಹೆಚ್ಚಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ 6 ವರ್ಷಗಳಲ್ಲಿ ಅತಿ ಹೆಚ್ಚು ಏರಿಕೆ ಕಂಡಿದೆ.
ಯುಎಸ್ಎ ಹಾಗೂ ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿ ಹಾಗೂ ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿರುವುದರಿಂದ ಚಿನಿವಾರ ಪೇಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಕಳೆದ ಒಂದು ವಾರದಿಮ್ದ ಏರಿಕೆ ಕಂಡು ಬಂದಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಪ್ರತಿ ಔನ್ಸಿಗೆ 1432 ಡಾಲರ್ಸ್ ನಷ್ಟಿತ್ತು. ಬೆಳ್ಳಿ ಬೆಲೆ ಔನ್ಸಿಗೆ 15.52 ಡಾಲರ್ ನಂತೆ ವಹಿವಾಟು ನಡೆಸಿದೆ.

ಮಾರುಕಟ್ಟೆಯಲ್ಲಿ ಮಂಗಳವಾರದಂದು ವಹಿವಾಟು
ಎಂಸಿಎಕ್ಸ್ ನಲ್ಲಿ ಫ್ಯೂಚರ್ ಬಂಗಾರದ ಬೆಲೆ ಇಂದು 35 ಸಾವಿರದ ಹತ್ತಿರಕ್ಕೆ ಬಂದಿದ್ದು, ಸ್ಥಿರವಾದ ಬೆಲೆ ಇದಕ್ಕಿಂತ ಕಡಿಮೆಯಿದ್ದರೂ 35 ಸಾವಿರ ರು ಗಡಿ ದಾಟುವ ಸುಳಿವು ಸಿಕ್ಕಿದೆ. ಮಾರುಕಟ್ಟೆಯಲ್ಲಿ ಮಂಗಳವಾರ ಬೆಲೆ 403 ರೂಪಾಯಿ ಏರಿಕೆ ಕಂಡಿತ್ತು. ಅಂತಿಮವಾಗಿ 200 ರು ಏರಿಕೆ ಕಂಡು 10 ಗ್ರಾಂ ಬಂಗಾರದ ಬೆಲೆ 34, 470 ರೂಪಾಯಿಯಾಗಿತ್ತು. ಬೆಳ್ಳಿ ಬೆಲೆ 190 ರೂಪಾಯಿ ತನಕ ಏರಿಕೆ ಕಂಡರೂ ದಿನದ ವಹಿವಾಟದ ಅಂತ್ಯಕ್ಕೆ 110ರು ಏರಿಕೆ ಕಂಡು 1 ಕೆ.ಜಿಗೆ 39, 200 ರೂಪಾಯಿಯಂತೆ ವಹಿವಾಟು ನಡೆಸಿದೆ.

ದೆಹಲಿಯಲ್ಲಿ ಚಿನ್ನದ ಬೆಲೆ ಎಷ್ಟಿದೆ?
ದೆಹಲಿಯಲ್ಲಿ 99.9% ಪರಿಶುದ್ಧ ಚಿನ್ನ ಹಾಗೂ 99.5% ಪರಿಶುದ್ಧ ಚಿನ್ನ ಬೆಲೆ ಕ್ರಮವಾಗಿ 200 ರು ಏರಿಕೆಯಾಗಿ 10 ಗ್ರಾಂಗೆ 34,470ರು ಹಾಗೂ 34,300ರು ಪ್ರತಿ 10ಗ್ರಾಂ ನಂತೆ ಮಾರಾಟ ಕಂಡಿದೆ.
ಕಳೆದ ವಾರದಲ್ಲಿ 10 ಗ್ರಾಂಗೆ 33,720ನಂತೆ ಮಾರಾಟವಾಗಿತ್ತು. ಸವರನ್ ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿದ್ದು, 100ರು ಏರಿಕೆ ಕಂಡು 8 ಗ್ರಾಂಗೆ 26,900ರು ನಷ್ಟಿದೆ. ಬೆಳ್ಳಿ ನಾಣ್ಯಗಳು 1,000 ರು ಏರಿಕೆ ಕಂಡು 100ಕ್ಕೆ 81,000ರು ಖರೀದಿಗೆ ಹಾಗೂ 82,000 ರು ಮಾರಾಟಕ್ಕೆ ದರ ಪಡೆದುಕೊಂಡಿವೆ.

ಕಳೆದ 4 ದಿನಗಳಲ್ಲಿ ಬೆಂಗಳೂರಲ್ಲಿ ಚಿನ್ನ ಬೆಳ್ಳಿ ದರ
ಕಳೆದ 4 ದಿನಗಳಲ್ಲಿ ಬೆಂಗಳೂರಲ್ಲಿ ಚಿನ್ನ ಬೆಳ್ಳಿ ದರ
ಚಿನ್ನದ ದರ (ಪ್ರತಿ 10ಗ್ರಾಂ) ರುಗಳಲ್ಲಿ
ಜೂನ್ 25: 31,950 (22 ಕ್ಯಾರೆಟ್), 34,850 (24 ಕ್ಯಾರೆಟ್)
ಜೂನ್ 24 : 31,950 ಹಾಗೂ 34,850
ಜೂನ್ 22: 31,900 ಹಾಗೂ 34,800
ಜೂನ್ 21: 32,050 ಹಾಗೂ 34,880
ಬೆಳ್ಳಿದರ ಬೆಳ್ಳಿ 1 ಕೆಜಿ ರುಗಳಲ್ಲಿ
ಜೂನ್ 25 : 40,355
ಜೂನ್ 24: 40,360
ಜೂನ್ 22: 40,000
ಜೂನ್ 21: 40,000
****

ಕಳೆದ 4 ದಿನಗಳಲ್ಲಿ ಚೆನ್ನೈನಲ್ಲಿ ಚಿನ್ನ ಬೆಳ್ಳಿ ದರ
ಕಳೆದ 4 ದಿನಗಳಲ್ಲಿ ಚೆನ್ನೈನಲ್ಲಿ ಚಿನ್ನ ಬೆಳ್ಳಿ ದರ
ಚಿನ್ನದ ದರ (ಪ್ರತಿ 10ಗ್ರಾಂ) ರುಗಳಲ್ಲಿ
ಜೂನ್ 25: 32,650 (22 ಕ್ಯಾರೆಟ್), 35,650 (24 ಕ್ಯಾರೆಟ್)
ಜೂನ್ 24 : 32,650 ಹಾಗೂ 35,610
ಜೂನ್ 22: 32,590 ಹಾಗೂ 35,550
ಜೂನ್ 21: 32,370 ಹಾಗೂ 35,380
ಬೆಳ್ಳಿದರ ಬೆಳ್ಳಿ 1 ಕೆಜಿ ರುಗಳಲ್ಲಿ
ಜೂನ್ 25 : 40,355
ಜೂನ್ 24: 40,360
ಜೂನ್ 22: 40,000
ಜೂನ್ 21: 40,000
***

ಕಳೆದ 4 ದಿನಗಳಲ್ಲಿ ಮುಂಬೈನಲ್ಲಿ ಚಿನ್ನ ಬೆಳ್ಳಿ ದರ
ಕಳೆದ 4 ದಿನಗಳಲ್ಲಿ ಮುಂಬೈನಲ್ಲಿ ಚಿನ್ನ ಬೆಳ್ಳಿ ದರ
ಚಿನ್ನದ ದರ (ಪ್ರತಿ 10ಗ್ರಾಂ) ರುಗಳಲ್ಲಿ
ಜೂನ್ 25: 33,650 (22 ಕ್ಯಾರೆಟ್), 34,650 (24 ಕ್ಯಾರೆಟ್)
ಜೂನ್ 24 : 33,200 ಹಾಗೂ 34,200
ಜೂನ್ 22: 33,310 ಹಾಗೂ 34,310
ಜೂನ್ 21: 33,200ಹಾಗೂ 34,200
ಬೆಳ್ಳಿದರ ಬೆಳ್ಳಿ 1 ಕೆಜಿ ರುಗಳಲ್ಲಿ
ಜೂನ್ 25 : 40,355
ಜೂನ್ 24: 40,360
ಜೂನ್ 22: 40,000
ಜೂನ್ 21: 40,000












Click it and Unblock the Notifications