• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಾಗತಿಕವಾಗಿ ತಗ್ಗಿದ ಬೇಡಿಕೆ, ಏರಿಕೆ ಬಳಿಕ ಇಳಿಕೆ ಕಂಡ ಚಿನ್ನದ ಬೆಲೆ

|

ಬೆಂಗಳೂರು, ಜುಲೈ 23: ಸ್ಥಳೀಯ ಆಭರಣ ತಯಾರಕರಿಂದ ಬೇಡಿಕೆ, ಜಾಗತಿಕ ಟ್ರೆಂಡ್ ಗೆ ತಕ್ಕಂತೆ ದಾಖಲೆ ಏರಿಕೆ ಕಂಡಿದ್ದ ಚಿನ್ನದ ದರವು ಮಂಗಳವಾರ(ಜುಲೈ 22)ದಂದು 250 ರು ಇಳಿಕೆ ಕಂಡಿದೆ.

"ಸ್ಥಳೀಯ ಆಭರಣ ತಯಾರಕರಿಂದ ಬೇಡಿಕೆ, ಹೂಡಿಕೆದಾರರು ಈಕ್ವಿಟಿ ಮಾರುಕಟ್ಟೆಗಳಿಗಿಂತ ಚಿನ್ನದ ಮೇಲೆ ಹೆಚ್ಚಿನ ನಂಬಿಕೆ ಇರಿಸಿ ಹೂಡಿಕೆ ಮಾಡುತ್ತಿದ್ದರಿಂದ ಬೆಲೆ ಏರಿಕೆ ಕಂಡಿತ್ತು. ಆದರೆ, ಜಾಗತಿಕವಾಗಿ ಬೇಡಿಕೆ ತಗ್ಗಿದ್ದರಿಂದ ಮಂಗಳವಾರ(ಜುಲೈ 23)ದಂದು ಕೊಂಚ ಇಳಿಕೆಯಾಗಿದೆ.

ಚಿನ್ನದ ಬೆಲೆಯಲ್ಲಿ ದಿಢೀರ್ ಏರಿಕೆ, ಒಂದೇ ದಿನ 930 ರು ಹೆಚ್ಚಳ

"ಸೋಮವಾರದಂದು 100 ರೂ. ಗಳ ಹೆಚ್ಚಳವಾಗಿತ್ತು, ಚಿನಿವಾರ ಪೇಟೆಯಲ್ಲಿ 10 ಗ್ರಾಂಗೆ 35,970 ರೂ ನಂತೆ ವ್ಯಾಪಾರ ನಡೆಸಿತ್ತು. ಬೆಳ್ಳಿ ದರದಲ್ಲಿ 260 ರು ಏರಿಕೆಯಾಗಿದ್ದು, ಪ್ರತಿ ಕೆ.ಜಿ.ಗೆ 41,960 ರೂ.ಗಳಷ್ಟಿತ್ತು. ಮಂಗಳವಾರದಂದು 10ಗ್ರಾಂ ಚಿನ್ನದ ಬೆಲೆ 35,720 ರು ಹಾಗೂ ಬೆಳ್ಳಿ ಬೆಲೆ 10 ರು ಇಳಿಕೆಯಾಗಿ 1 ಕೆಜಿಗೆ 41,950 ರು ನಂತೆ ವಹಿವಾಟು ನಡೆಸಿದೆ" ಎಂದು ಅಖಿಲ ಭಾರತ ಸರಫಾ ಅಸೋಸಿಯೇಷನ್ ಉಪಾಧ್ಯಕ್ಷ ಸುರೇಂದ್ರ ಜೈನ್ ಹೇಳಿದ್ದಾರೆ.

ಜಾಗತಿಕವಾಗಿ ನ್ಯೂಯಾರ್ಕಿನಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸಿಗೆ 1,418.20 ಯುಎಸ್ ಡಾಲರ್ ನಂತೆ ಹಾಗೂ ಬೆಳ್ಳಿ ಬೆಲೆ ಪ್ರತಿ ಔನ್ಸಿಗೆ 16.47 ಯುಎಸ್ ಡಾಲರ್ ನಂತೆ ವ್ಯವಹಾರ ಕಂಡಿದೆ.

ಅಖಿಲ ಭಾರತ ಸರಾಫಾ ಅಸೋಸಿಯೇಷನ್ ವರದಿಯಂತೆ, ಶೇ 99.9 ಪರಿಶುದ್ಧ ಚಿನ್ನ ಹಾಗೂ ಶೇ 99.5 ಪರಿಶುದ್ಧ ಚಿನ್ನದ ಬೆಲೆ 250 ರು ಏರಿಕೆ ಕಂಡು, ಕ್ರಮವಾಗಿ 35,720 ಪ್ರತಿ 10 ಗ್ರಾಂ ಹಾಗೂ 35,550 ರು ಪ್ರತಿ 10 ಗ್ರಾಂನಂತೆ ದೆಹಲಿ ಚಿನಿವಾರ ಪೇಟೆಯಲ್ಲಿ ವ್ಯಾಪಾರ ಕಂಡಿದೆ.

ಸವರನ್ ಚಿನ್ನ 100 ರು ಏರಿಕೆ ಕಂಡು 8 ಗ್ರಾಂಗೆ 27,400 ರು ನಂತೆ ಮಾರಾಟವಾಗುತ್ತಿದೆ. ಬೆಳ್ಳಿ ಬೆಲೆ 10ರು ಇಳಿಕೆ ಕಂಡು ಪ್ರತಿ 1 ಕೆಜಿಗೆ 41,950 ರು ಆಗಿದೆ. ಆದರೆ, ಬೆಳ್ಳಿ ನಾಣ್ಯಗಳಿಗೆ ಬೇಡಿಕೆ ಹೆಚ್ಚಳವಾಗಿಲ್ಲ, 100 ಕ್ಕೆ 84,000 ರು ಖರೀದಿಗೆ ಹಾಗೂ 85,000ರು ಮಾರಾಟದ ಬೆಲೆ ಪಡೆದುಕೊಂಡಿದೆ.(ಪಿಟಿಐ)

English summary
After touching an all-time high in the previous session, gold prices on Tuesday fell Rs 250 to Rs 35,720 per 10 gram in the national capital amid weak trend overseas and fall in domestic demand, according to the All India Sarafa Association.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X