ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ದರ ಮತ್ತೆ ಕುಸಿತ, ಗ್ರಾಹಕರಿಗೆ ಸಂತಸ

By Mahesh
|
Google Oneindia Kannada News

ನವದೆಹಲಿ, ಜೂ.30: ಹಳದಿ ಲೋಹ ಚಿನ್ನದ ಬೆಲೆ ಮತ್ತೆ ಕುಸಿತ ಕಂಡಿದೆ. ದೆಹಲಿಯ ಚಿನಿವಾರ ಪೇಟೆಯಲ್ಲಿ ಚಿನ್ನದ ದರ 55 ರು ಬೆಲೆ ಕಳೆದುಕೊಂಡು ಪ್ರತಿ 10 ಗ್ರಾಂಗೆ 28,745 ರು ಗೆ ಕುಸಿದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತ, ಷೇರುದಾರರಿಂದ ಚಿನ್ನ ಮಾರಾಟ ಸ್ಥಗಿತ ಎಲ್ಲವೂ ಬೆಲೆ ಇಳಿಕೆಗೆ ಕಾರಣವಾಗಿದೆ. ಚಿನ್ನದ ಮೇಲೆ ಹೂಡಿಕೆ ಮಾಡುವವರು ಮಾತ್ರ ಕಂಗಾಲಾಗಿದ್ದರೆ, ಗ್ರಾಹಕರು ಸಂತಸಗೊಂಡಿದ್ದಾರೆ.

ಇತ್ತೀಚೆಗೆ ಆರ್‌ಬಿಐನ ನೂತನ ಚಿನ್ನ ಆಮದು ನೀತಿ ಪ್ರಕಟಿಸಿದ ಬೆನ್ನಲ್ಲೆ ಚಿನ್ನದ ದರ ಕಳೆದ 9 ತಿಂಗಳುಗಳಲ್ಲಿ ಕಾಣದ ಪ್ರಮಾಣಕ್ಕೆ ಕುಸಿತ ಕಂಡಿತ್ತು. ಚಿನಿವಾರ ಪೇಟೆಯಲ್ಲಿ ಚಿನ್ನದ ದರದಲ್ಲಿ ಶೇ.3ರಷ್ಟು ಇಳಿಕೆ ಇಳಿಕೆ ಕಂಡು ಬಂದಿದ್ದು ಒಟ್ಟಾರೆ ಪ್ರತಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 800ರು. ಇಳಿಕೆಯಾಗಿತ್ತು. [ಮೇ ತಿಂಗಳ ಇಳಿಕೆ ವರದಿ]

Gold falls on stockists selling, global cues

ನವದೆಹಲಿಯಲ್ಲಿ ಮೇ.22ರಂದು 10 ಗ್ರಾಂ ಚಿನ್ನದ ಬೆಲೆ 28,550 ರು ನಷ್ಟಿದ್ದರೆ ಬೆಳ್ಳಿ ದರ 50 ರು ಇಳಿಕೆ ಕಂಡು ಪ್ರತಿ ಕೆ.ಜಿಗೆ 41,650 ರು ನಷ್ಟಿತ್ತು. ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ 27,140 ರು ನಷ್ಟಿತ್ತು. 24 ಕ್ಯಾರೆಟ್ ಚಿನ್ನದ ಬೆಲೆ 29,060 ರು ನಷ್ಟಿತ್ತು. ಬೆಂಗಳೂರಿನಲ್ಲಿ ಈ ಸಮಯಕ್ಕೆ ಚಿನ್ನದ ದರ 22 Karat ಪ್ರತಿ 10 ಗ್ರಾಂಗೆ 26,720 ಹಾಗೂ ಅಪರಂಜಿ ಪ್ರತಿ 10 ಗ್ರಾಂಗೆ 28,530 ರು ನಷ್ಟಿದೆ.

ಈಗ ದೆಹಲಿಯಲ್ಲಿ 10 ಗ್ರಾಂ ಅಪರಂಜಿ ಚಿನ್ನದ ಬೆಲೆ 28,475 ರು ಹಾಗೂ 1 ಕೆಜಿ ಬೆಳ್ಳಿ ಬೆಲೆ 44,800 ರು ಗೆ ಕುಸಿದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಲಂಡನ್ನಿನಲ್ಲಿ ಶೇ 0.1ರಷ್ಟು ಪ್ರತಿ ಔನ್ಸಿಗೆ 1,314.99 ಯುಎಸ್ ಡಾಲರ್ ಹಾಗೂ ಬೆಳ್ಳಿ ಬೆಲೆ 0.3 % ಪ್ರತಿ ಔನ್ಸಿಗೆ 20.91 ಯುಎಸ್ ಡಾಲರ್ ನಷ್ಟು ಇಳಿಕೆ ಕಂಡು ಬಂದಿದೆ. [ಓದಿ: ದೀಪಾವಳಿ ವೇಳೆಗೆ ಚಿನ್ನದ ಬೆಲೆ ಏಷ್ಟಿರಬಹುದು?]

ಎಲ್ಲರ ಚಿತ್ತ ಬಜೆಟ್ ನತ್ತ: ಜುಲೈ 10 ರಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಲಿರುವ ಬಜೆಟ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಮೂಲಗಳ ಪ್ರಕಾರ ಚಿನ್ನದ ಆಮದಿನ ಮೇಲಿನ ನಿರ್ಬಂಧಗೊಳಿಸಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಸ್ಥಳೀಯ ವರ್ತಕರ ಬೇಡಿಕೆ ಹಿನ್ನೆಲೆಯಲ್ಲಿ ಮೋದಿ ಸರ್ಕಾರ ಚಿನ್ನದ ಮೇಲಿನ ಆಮದು ಸುಂಕವನ್ನು ಶೇ 2ರಷ್ಟು ಕಡಿಮೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

English summary
Continuing its losing streak for the fourth session in a row, gold lost Rs 55 to Rs 28,475 per 10 grams in the national capital today on sustained selling by stockists amid a weak global trend.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X