ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಬಜೆಟ್ ನಂತರ ಚಿನ್ನದ ಬೆಲೆ ಇಳಿಕೆ?

By Mahesh
|
Google Oneindia Kannada News

ನವದೆಹಲಿ, ಜನವರಿ 31: ವಿಶ್ವದಲ್ಲಿ ಎರಡನೇ ಅತಿ ಹೆಚ್ಚು ಚಿನ್ನ ಬಳಕೆ ಮಾಡುವ ರಾಷ್ಟ್ರವಾಗಿರುವ ಭಾರತದಲ್ಲಿ ಚಿನ್ನದ ಬೆಲೆ ಮೇಲೆ ನಿಯಂತ್ರಣ ಮಾತ್ರ ಸಾಧ್ಯವಾಗುತ್ತಿಲ್ಲ. ಆದರೆ, ಈಗ ಕೇಂದ್ರ ಬಜೆಟ್ ನಂತರ ಚಿನ್ನದ ಬೆಲೆ ಇಳಿಕೆಯಾಗುವ ಮುನ್ಸೂಚನೆ ಸಿಕ್ಕಿದೆ.

31 ಸಾವಿರ ರು ಗಡಿ ದಾಟಿ, ಕಳೆದ 17 ತಿಂಗಳಿನಿಂದ ಏರಿಕೆ ಮುಖ ಮಾಡಿರುವ ಹಳದಿ ಲೋಹದ ಮೇಲಿನ ಆಮದು ತೆರಿಗೆಯನ್ನು ಇಳಿಸುವ ಸಾಧ್ಯತೆ ನಿಚ್ಚಳವಾಗಿದೆ.

Gold Demand Wanes As Jewellers Expect Import Tax Cut In Union Budget

ಆಮದು ತೆರಿಗೆ ಇಳಿಕೆ ಮಾಡಿ, ದೇಶದಲ್ಲಿನ ಚಿನ್ನದ ಬೇಡಿಕೆ ಹೆಚ್ಚಳ ಮಾಡುವುದು ಇದರಿಂದ ಜಾಗತಿಕ ದರ ಏರಿಕೆಗೆ ಹೊಂದಿಕೆ ಮಾಡಿಕೊಳ್ಳುವುದು ಮುಂತಾದ ಕ್ರಮಗಳನ್ನು ಕೈಗೊಳ್ಳುವಂತೆ ಇಂಡಿಯನ್‌ ಬುಲಿಯನ್‌ ಅಂಡ್ ಜ್ಯೂವೆಲರ್ಸ್‌ ಅಸೋಸಿಯೇಷನ್‌ ನ ಸದಸ್ಯರು, ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಚಿನ್ನದ ಆಮದು ಸುಂಕ ಬಜೆಟ್ ನಲ್ಲಿ ಕಡಿಮೆಯಾದರೆ, ಪ್ರತಿ ಗ್ರಾಮ್ ನ ಮೇಲೆ ಚಿನ್ನದ ದರ 600-1200 ರು ತನಕ ಇಳಿಕೆ ಸಾಧ್ಯತೆಯಿದೆ. ಚಿನ್ನದ ಮೇಲಿನ ಆಮದು ಸುಂಕ ಶೇಕಡಾ 2-4ರಷ್ಟು ಕಡಿಮೆಯಾಗುವ ಸಾಧ್ಯತೆಯಿದೆ.

ಮೋದಿ ಸರ್ಕಾರದ ಕೇಂದ್ರ ಬಜೆಟ್ 2018 ಲೈವ್ಮೋದಿ ಸರ್ಕಾರದ ಕೇಂದ್ರ ಬಜೆಟ್ 2018 ಲೈವ್

ನಿರಂತರವಾಗಿ ಏರುತ್ತಿರುವ ಚಿನ್ನದ ಬೆಲೆಗೆ ಕಡಿವಾಣ ಹಾಕಬೇಕಿದೆ. ಚಿನ್ನ ಖರೀದಿದಾರರಿಗೂ ಇದರಿಂದ ಲಾಭವಾಗಲಿದೆ ಎಂದು ಅಸೋಸಿಯೇಷನ್ ನ ಉಪಾಧ್ಯಕ್ಷ ಸೌರಭ್ ಗಾಡ್ಗಿಲ್ ಪ್ರತಿಕ್ರಿಯಿಸಿದ್ದಾರೆ.

14 ತಿಂಗಳಲ್ಲೇ ಗರಿಷ್ಠ ಮಟ್ಟ ತಲುಪಿದ ಚಿನ್ನದ ದರ14 ತಿಂಗಳಲ್ಲೇ ಗರಿಷ್ಠ ಮಟ್ಟ ತಲುಪಿದ ಚಿನ್ನದ ದರ

ಭಾರತದಲ್ಲಿ ಶೇಕಡಾ 95ರಷ್ಟು ಚಿನ್ನವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. 2016ರಲ್ಲಿ ಸುಮಾರು 120 ಟನ್ ಗಳಷ್ಟು ಚಿನ್ನವನ್ನು ಆಮದು ಮಾಡಿಕೊಳ್ಳಲಾಗಿತ್ತು. ಈ ನಡುವೆ ಸ್ಮಗ್ಲಲಿಂಗ್ ಮೂಲಕ ಬರುತ್ತಿರುವ ಚಿನ್ನದಿಂದ ಜಿಎಸ್ ಟಿ ಕೂಡಾ ಸಿಗುತ್ತಿಲ್ಲ. ಈ ಬಗ್ಗೆ ಸರ್ಕಾರ ಕ್ರಮ ಜರುಗಿಸುವ ನಿರೀಕ್ಷೆಯಿದೆ.

English summary
Gold prices in the country, the world's second-biggest user of the precious metal, were at discounts as jewellers were postponing purchases on the expectation that the government will announce an import tax cut in its annual Budget on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X