ಚಿನ್ನ-ಬೆಳ್ಳಿ ಖರೀದಿಗೆ ಪ್ಲಾನ್ ಮಾಡ್ತಿದ್ದೀರಾ? ಹಾಗಾದ್ರೆ ಜ್ಯುವೆಲ್ಲರಿ ಶಾಪ್‌ಗೆ ಹೋಗೋ ಮುನ್ನ ಇಲ್ಲಿ ನೋಡಿ

ಚಿನ್ನವೆಂದರೆ ಭಾರತೀಯರಿಗೆ, ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಎಲ್ಲಿಲ್ಲದ ಪ್ರೀತಿ ಮತ್ತು ವ್ಯಾಮೋಹ. ಹಬ್ಬ-ಹರಿದಿನಗಳು ಹತ್ತಿರ ಬರುತ್ತಿದ್ದಂತೆ ಅಥವಾ ಮನೆಯಲ್ಲಿ ಮದುವೆಯಂತಹ ಶುಭ ಸಮಾರಂಭಗಳು ಇದ್ದರಂತೂ ಎಲ್ಲರ ಕಣ್ಣು ಮೊದಲು ಹೋಗುವುದೇ ಆಭರಣದ ಅಂಗಡಿಗಳ ಕಡೆಗೆ.

ಬೆಳಗಾಗೆದ್ದು ಕಾಫಿ ಹೀರುತ್ತಾ ಇಂದಿನ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ಎಂದು ಪತ್ರಿಕೆ ಅಥವಾ ಡಿಜಿಟಲ್ ಮಾಧ್ಯಮಗಳಲ್ಲಿ ಹುಡುಕುವುದು ಬಹುತೇಕರ ದಿನಚರಿಯಾಗಿರುತ್ತದೆ.

gold-and-silver-rate

ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ಎಂಸಿಎಕ್ಸ್ ವಹಿವಾಟುಗಳ ಪ್ರಭಾವದಿಂದ ಪ್ರತಿದಿನ ಬದಲಾಗುವ ಈ ಹಳದಿ ಲೋಹದ ಬೆಲೆ, ಇಂದು ಖರೀದಿದಾರರಿಗೆ ಕೊಂಚ ರಿಲೀಫ್ ನೀಡಿದೆ. ನೀವು ಇಂದು ಆಭರಣ ಖರೀದಿಸುವ ಯೋಚನೆಯಲ್ಲಿದ್ದರೆ, ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳುವುದು ತುಂಬ ಮುಖ್ಯ.

ನಿನ್ನೆಯ ಮಾರುಕಟ್ಟೆ ದರಕ್ಕೆ ಹೋಲಿಸಿದರೆ ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ನಿನ್ನೆ (ಸೆಪ್ಟೆಂಬರ್ 25, 2026) 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 14,010 ರೂಪಾಯಿ ಆಸುಪಾಸಿನಲ್ಲಿದ್ದರೆ, ಇಂದು ಅದು ಇಳಿಕೆ ಕಂಡು 13,995 ರೂಪಾಯಿಗೆ ತಲುಪಿದೆ. ಅದೇ ರೀತಿ 24 ಕ್ಯಾರಟ್ ಶುದ್ಧ ಚಿನ್ನ ಕೂಡ ಇಳಿಕೆಯೊಂದಿಗೆ ವಹಿವಾಟು ನಡೆಸುತ್ತಿದೆ.

ಇನ್ನು ಬೆಳ್ಳಿಯ ವಿಚಾರಕ್ಕೆ ಬಂದರೆ, ನಿನ್ನೆ ಒಂದು ಗ್ರಾಂ ಬೆಳ್ಳಿಯ ಬೆಲೆ 245 ರೂಪಾಯಿ ಇತ್ತು, ಆದರೆ ಇಂದು ಅದು 10 ಪೈಸೆ ಕಡಿಮೆಯಾಗಿ 244.90 ರೂಪಾಯಿಗೆ ಅಂದರೆ 1 ಕೆಜಿಗೆ 2,44,900 ರೂಗೆ ಬಂದು ನಿಂತಿದೆ. ಇದು ಸಣ್ಣ ಬದಲಾವಣೆಯಾದರೂ, ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಮತ್ತು ಬೆಳ್ಳಿ ಖರೀದಿಸುವವರಿಗೆ ಈ ವ್ಯತ್ಯಾಸ ಗಣನೀಯ ಉಳಿತಾಯ ನೀಡಲಿದೆ.

ಪ್ರಮುಖ ನಗರಗಳಲ್ಲಿ ಇಂದಿನ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ಪಟ್ಟಿ

* ಬೆಂಗಳೂರು - 13,995 ರೂಪಾಯಿ

* ದೆಹಲಿ - 14,010 ರೂಪಾಯಿ

* ಚೆನ್ನೈ - 13,995 ರೂಪಾಯಿ

* ಮುಂಬೈ - 13,995 ರೂಪಾಯಿ

* ಹೈದರಾಬಾದ್ - 13,995 ರೂಪಾಯಿ

* ಅಹಮದಾಬಾದ್ - 14,000 ರೂಪಾಯಿ

* ಪುಣೆ - 13,995 ರೂಪಾಯಿ

* ಕೋಲ್ಕತ್ತಾ - 13,995 ರೂಪಾಯಿ

ಇಂದಿನ ಮಾರುಕಟ್ಟೆಯ ಪ್ರಕಾರ 22 ಕ್ಯಾರಟ್ ಚಿನ್ನವು ದೆಹಲಿ ಮತ್ತು ಅಹಮದಾಬಾದ್ ಹೊರತುಪಡಿಸಿ, ಬೆಂಗಳೂರು, ಮುಂಬೈ, ಚೆನ್ನೈ ಸೇರಿದಂತೆ ಬಹುತೇಕ ಮೆಟ್ರೋ ನಗರಗಳಲ್ಲಿ 13,995 ರೂ. ನಲ್ಲಿ ವಹಿವಾಟು ನಡೆಸುತ್ತಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 100 ರೂ. ನಷ್ಟು ಇಳಿಕೆಯಾಗಿರುವುದು ಗ್ರಾಹಕರಿಗೆ ತುಸು ನಿರಾಳತೆ ಒದಗಿಸಿದೆ.

ಗಮನಿಸಿ: ಈ ಮೇಲಿನ ಮೂಲ ದರದಲ್ಲಿ ಜಿಎಸ್‌ಟಿ ಮತ್ತು ಮೇಕಿಂಗ್‌ ಚಾರ್ಜ್‌ಸ್‌ ಸೇರಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+