ಮತ್ತಷ್ಟು ಅಗ್ಗವಾದ ಬಂಗಾರ: ಮಾರ್ಚ್ 24ರಂದು ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ

ಬೆಂಗಳೂರು, ಮಾರ್ಚ್ 24: ಸತತ ನಾಲ್ಕು ದಿನದಿಂದ ಅಲ್ಪ ಪ್ರಮಾಣದ ಇಳಿಕೆ ಕಂಡಿದ್ದ ಚಿನ್ನದ ದರ, ಭಾರತದ ಆಭರಣ ಮಾರುಕಟ್ಟೆಯಲ್ಲಿ ಬುಧವಾರ ದೊಡ್ಡ ಇಳಿಕೆ ಕಂಡಿದೆ. ಬುಧವಾರ ಪ್ರತಿ 100 ಗ್ರಾಂ ಬಂಗಾರದ ದರ 8,000 ರೂಪಾಯಿಯಷ್ಟು ಅಗ್ಗವಾಗಿದೆ. ಇತ್ತೀಚಿನ ದಿನಗಳಲ್ಲಿ ಇದು ಅತಿ ದೊಡ್ಡ ಕುಸಿತವಾಗಿದೆ. ಭಾರತದಲ್ಲಿ 10 ಗ್ರಾಂ ತೂಕದ ಚಿನ್ನದ ಬೆಲೆ 800 ರೂಪಾಯಿಯಷ್ಟು ಕುಸಿದಿದೆ.

ದೇಶದಲ್ಲಿ ಪ್ರತಿ ಗ್ರಾಂ ಚಿನ್ನದ ಬೆಲೆ 4,300 ರೂಪಾಯಿ ಇದೆ. ಹಿಂದಿನ ದರ 4,380 ರೂ ಇತ್ತು. 24 ಕ್ಯಾರಟ್‌ನ ಚಿನ್ನದ ಬೆಲೆ ಕೂಡ ಪ್ರತಿ 10 ಗ್ರಾಂಗೆ 800 ರೂಪಾಯಿ ಇಳಿಕೆಯಾಗಿದೆ. ಮಾರ್ಚ್ 19ರಿಂದಲೂ ಬಂಗಾರದ ಬೆಲೆ ದೇಶಿ ಮಾರುಕಟ್ಟೆಯಲ್ಲಿ ಇಳಿಕೆ ಕಾಣುತ್ತಿದೆ.

ಎಂಸಿಎಕ್ಸ್‌ನಲ್ಲಿ ಹಳದಿ ಲೋಹದ ಬೆಲೆ ಬುಧವಾರ ಪ್ರತಿ 10 ಗ್ರಾಂಗೆ 44,714 ರೂಪಾಯಿಗೆ ತಗ್ಗಿದೆ. ಚಿನ್ನದ ಜತೆಗೆ ಬೆಳ್ಳಿಯ ದರದಲ್ಲಿಯೂ ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ವಹಿವಾಟು ತೆರೆದಂತೆ ಭಾರತದಲ್ಲಿನ ಚಿನ್ನದ ದರದಲ್ಲಿಯೂ ಬದಲಾವಣೆಗಳಾಗಲಿವೆ. ಹೀಗಾಗಿ ದಿನದ ಚಿನ್ನ-ಬೆಳ್ಳಿ ದರದಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇದೆ.

ದೆಹಲಿಯಲ್ಲಿ ದರ

ದೆಹಲಿಯಲ್ಲಿ ದರ

ಬಂಗಾರದ ಬೆಲೆ ದೆಹಲಿಯಲ್ಲಿ ಪ್ರತಿ ಹತ್ತು ಗ್ರಾಂಗೆ 10 ರೂ ಇಳಿಕೆಯಾಗಿದೆ. 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 44,040 ರೂ. ಇದ್ದರೆ, 24 ಕ್ಯಾರಟ್ ಚಿನ್ನ ಬೆಲೆ ಪ್ರತಿ 10 ಗ್ರಾಂ ಚಿನ್ನದ ದರ 48,040 ರೂಪಾಯಿ ಇದೆ.

ಬೆಂಗಳೂರಲ್ಲಿ ಚಿನ್ನದ ದರ ಸ್ಥಿರ

ಬೆಂಗಳೂರಲ್ಲಿ ಚಿನ್ನದ ದರ ಸ್ಥಿರ

ಬೆಂಗಳೂರಿನಲ್ಲಿ ಚಿನ್ನದ ದರ ಸತತ ಎರಡು ದಿನ ಗಣನೀಯ ಪ್ರಮಾಣದ ಇಳಿಕೆ ಕಂಡಿತ್ತು. ಆದರೆ ಬುಧವಾರದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. 22 ಕ್ಯಾರಟ್ ಚಿನ್ನದ ಪ್ರತಿ ಹತ್ತು ಗ್ರಾಂ 41,900 ರೂಪಾಯಿ ದರದಲ್ಲಿದೆ. ಹಾಗೆಯೇ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ದರ 45,700 ರೂಪಾಯಿಯಲ್ಲಿ ನಿಂತಿದೆ. ಮೈಸೂರು ಮತ್ತು ಮಂಗಳೂರಿನಲ್ಲಿ ಕೂಡ ಇದೇ ದರವಿದೆ.

ಚೆನ್ನೈನಲ್ಲಿ ಬೆಲೆ ಏರಿಕೆ

ಚೆನ್ನೈನಲ್ಲಿ ಬೆಲೆ ಏರಿಕೆ

ನೆರೆಯ ಚೆನ್ನೈನಲ್ಲಿ ಚಿನ್ನದ ದರದಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡಿದೆ. ಪ್ರತಿ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 20 ರೂಪಾಯಿ ಹೆಚ್ಚಳದೊಂದಿಗೆ 42,300 ರೂ.ಗೆ ಮಾರಾಟವಾಗುತ್ತಿದೆ ಹಾಗೆಯೇ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 46,140 ರೂಪಾಯಿಗೆ ಏರಿಕೆ ಕಂಡಿದೆ.

ಮುಂಬೈನಲ್ಲಿ ಚಿನ್ನದ ಬೆಲೆ ಕೊಂಚ ಇಳಿಕೆ

ಮುಂಬೈನಲ್ಲಿ ಚಿನ್ನದ ಬೆಲೆ ಕೊಂಚ ಇಳಿಕೆ

ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 10 ರೂ ಇಳಿಕೆಯಾಗಿದ್ದು, 42,990 ರೂಪಾಯಿಯಿದೆ. 24 ಕ್ಯಾರಟ್ ಚಿನ್ನದ ಬೆಲೆ ಕೂಡ ಇಳಿದಿದ್ದು, 10 ಗ್ರಾಂ 43,990 ರೂ ದರಕ್ಕೆ ಮಾರಾಟವಾಗುತ್ತಿದೆ. ಕೇರಳದಲ್ಲಿ ಚಿನ್ನದ ಬೆಲೆ ಸ್ಥಿರವಾಗಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 41,900 ರೂ ಮತ್ತು 24 ಕ್ಯಾರಟ್ ಹಳದಿ ಲೋಹ 45,700 ರೂಪಾಯಿಯಲ್ಲಿ ನಿಂತಿದೆ.

ದೇಶದಲ್ಲಿ ಬೆಳ್ಳಿ ಬೆಲೆ

ದೇಶದಲ್ಲಿ ಬೆಳ್ಳಿ ಬೆಲೆ

ಬೆಳ್ಳಿ ದರದಲ್ಲಿ ಬುಧವಾರ ಸಹ ಇಳಿಕೆ ಕಂಡಿದೆ. ಒಟ್ಟಾರೆ ದೇಶಿ ಮಾರುಕಟ್ಟೆಯಲ್ಲಿ ಪ್ರಸ್ತುತ ಒಂದು ಕೆಜಿ ಬೆಳ್ಳಿ ದರ 700 ರೂ ಕುಸಿತದೊಂದಿಗೆ 65,300 ರೂ.ಗೆ ಇಳಿದಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 66,500 ರೂಪಾಯಿಯಲ್ಲಿದೆ. ಮಂಗಳವಾರದ ದರದಲ್ಲಿ ಬದಲಾವಣೆಯಾಗಿಲ್ಲ. ಚೆನ್ನೈನಲ್ಲಿ ಪ್ರತಿ ಕೆಜಿ ಬೆಳ್ಳಿ 700 ರೂ, ಅಗ್ಗವಾಗಿದ್ದು, ಒಂದು ಕೆಜಿಗೆ 69,700 ರೂಪಾಯಿ ಇದೆ. ಮುಂಬೈನಲ್ಲಿ ಬೆಳ್ಳಿ ದರ 65,300 ರೂಪಾಯಿ ಇದೆ.

* ಚಿನ್ನ ಮತ್ತು ಬೆಳ್ಳಿ ಬೆಲೆಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರ ಬದಲಾವಣೆ ಮತ್ತು ಸ್ಥಳೀಯ ತೆರಿಗೆ ನೀತಿಗಳಿಗೆ ಅನುಗುಣವಾಗಿ ಬದಲಾಗುತ್ತದೆ. ಈ ಮಾಹಿತಿ ಬೆಳಿಗ್ಗೆ 11 ಗಂಟೆಯವರೆಗಿನ ಮಾರುಕಟ್ಟೆ ದರ ಬದಲಾವಣೆಯನ್ನು ಆಧರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+