ಪುನಃ ಕುಸಿತ ಕಂಡ ಬಂಗಾರದ ಬೆಲೆ: ಮಾರ್ಚ್ 22ರಂದು ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ

ಬೆಂಗಳೂರು, ಮಾರ್ಚ್ 22: ಭಾರತದ ಮಾರುಕಟ್ಟೆಯಲ್ಲಿ ಸೋಮವಾರ ಬಳಿಕ ಹಳದಿ ಲೋಹದ ದರದಲ್ಲಿ ಮತ್ತಷ್ಟು ಇಳಿಕೆ ಕಂಡಿದೆ. ಶನಿವಾರ ಮತ್ತು ಭಾನುವಾರ ಕೂಡ ಬಂಗಾರದ ಬೆಲೆ ತಕ್ಕಮಟ್ಟಿಗೆ ಕುಸಿತವಾಗಿತ್ತು. ಈಗ ಸತತ ಇಳಿಕೆಯಿಂದ ಆಭರಣ ಖರೀದಿದಾರರಿಗೆ ಸ್ವಲ್ಪ ಖುಷಿ ಮೂಡಿದೆ. ಟರ್ಕಿಯ ಸೆಂಟ್ರಲ್ ಬ್ಯಾಂಕ್‌ನ ಗವರ್ನರ್‌ ನಸಿ ಅಗ್ಬಲ್ ಅವರನ್ನು ದಿಢೀರನೆ ಬದಲಿಸಿರುವುದು ಒಟ್ಟಾರೆ ಜಾಗತಿಕ ಚಿನ್ನ, ಬೆಳ್ಳಿ ದರದ ಮೇಲೆ ಪರೋಕ್ಷ ಪರಿಣಾಮ ಬೀರುವಲ್ಲಿ ಪ್ರಮುಖ ಕಾರಣಗಳಲ್ಲಿ ಒಂದು ಎನ್ನಲಾಗಿದೆ.

ಎಂಸಿಎಕ್ಸ್‌ನಲ್ಲಿ ಹಳದಿ ಲೋಹದ ಬೆಲೆ ಸೋಮವಾರ ಶೇ 0.07ರಷ್ಟು ಕುಸಿತಕಂಡಿದೆ. ಪ್ರತಿ ಹತ್ತು ಗ್ರಾಂಗೆ 32 ರೂಪಾಯಿಯಂತೆ ಇಳಿಕೆಯಾಗಿದೆ. ಎಂಸಿಎಕ್ಸ್‌ನಲ್ಲಿ ಪ್ರತಿ ಹತ್ತು ಗ್ರಾಂ ಚಿನ್ನದ ದರ 44,989 ರೂಪಾಯಿ ಇದೆ. ಬೆಳ್ಳಿ ದರ ಕೂಡ ಶೇ 1.38ರಂತೆ ಪ್ರತಿ ಕೆ.ಜಿಗೆ 929 ರೂ ಇಳಿಕೆಯಂತೆ 66,598 ರೂಪಾಯಿಗೆ ಇಳಿಕೆಯಾಗಿದೆ.

ದೇಶದಲ್ಲಿ ಸರಾಸರಿ ಚಿನ್ನದ ಬೆಲೆ 10 ಗ್ರಾಂಗೆ 10 ರೂಪಾಯಿ ಇಳಕೆಯಾಗಿದ್ದು, 22 ಕ್ಯಾರಟ್ ಚಿನ್ನಕ್ಕೆ 43,910 ರೂಪಾಯಿ ಇದೆ. ಹಾಗೆಯೇ 24 ಕ್ಯಾರಟ್ ಚಿನ್ನವು 44,910 ರೂಪಾಯಿ ಬೆಲೆ ಬಾಳುತ್ತಿದೆ.

ದೆಹಲಿಯಲ್ಲಿ ದರ

ದೆಹಲಿಯಲ್ಲಿ ದರ

ಬಂಗಾರದ ಬೆಲೆ ದೆಹಲಿಯಲ್ಲಿ ತಕ್ಕಮಟ್ಟಿಗೆ ಕುಸಿತ ಕಂಡಿದೆ. ಪ್ರತಿ ಹತ್ತು ಗ್ರಾಂಗೆ 10 ರೂ ಇಳಿಕೆಯಾಗಿದೆ. 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 44,380 ರೂ. ಇದ್ದರೆ, 24 ಕ್ಯಾರಟ್ ಚಿನ್ನ ಬೆಲೆ ಪ್ರತಿ 10 ಗ್ರಾಂ ಚಿನ್ನದ ದರ 48,380 ರೂಪಾಯಿ ಇದೆ.

ಬೆಂಗಳೂರಲ್ಲಿ ಚಿನ್ನದ ದರ ಇಳಿಕೆ

ಬೆಂಗಳೂರಲ್ಲಿ ಚಿನ್ನದ ದರ ಇಳಿಕೆ

ಬೆಂಗಳೂರಿನಲ್ಲಿ ಚಿನ್ನದ ದರ ಸೋಮವಾರ ಇಳಿಕೆ ಕಂಡಿದೆ. 22 ಕ್ಯಾರಟ್ ಚಿನ್ನದ ಪ್ರತಿ ಹತ್ತು ಗ್ರಾಂಗೆ 190 ರೂ ಇಳಿಕೆಯಾಗಿದ್ದು, 42,050 ರೂಪಾಯಿಗೆ ತಲುಪಿದೆ. ಹಾಗೆಯೇ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ದರ 200 ರೂ ಇಳಿಕೆಯಾಗಿದೆ. ಶುದ್ಧ ಚಿನ್ನದ ದರ 45,880 ರೂಪಾಯಿಗೆ ಮುಟ್ಟಿದೆ.

ಚೆನ್ನೈನಲ್ಲಿ ಬೆಲೆ ಸ್ಥಿರ

ಚೆನ್ನೈನಲ್ಲಿ ಬೆಲೆ ಸ್ಥಿರ

ಚೆನ್ನೈನಲ್ಲಿ ಚಿನ್ನದ ದರದಲ್ಲಿ ಸೋಮವಾರ ಬದಲಾವಣೆಯಾಗಿಲ್ಲ. ಪ್ರತಿ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 42,490 ರೂ.ಗೆ ಮಾರಾಟವಾಗುತ್ತಿದೆ ಹಾಗೆಯೇ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 46,350 ರೂ.ನಲ್ಲಿ ನಿಂತಿದೆ.

ಮುಂಬೈನಲ್ಲಿ ಚಿನ್ನದ ದರ ಇಳಿಕೆ

ಮುಂಬೈನಲ್ಲಿ ಚಿನ್ನದ ದರ ಇಳಿಕೆ

ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 10 ರೂ ಇಳಿಕೆಯಾಗಿದ್ದು, 43,910 ರೂ ದರದಲ್ಲಿದೆ. 24 ಕ್ಯಾರಟ್ ಚಿನ್ನದ ಬೆಲೆ ಕೂಡ 10 ಗ್ರಾಂ 44,910 ರೂ ದರಕ್ಕೆ ಮಾರಾಟವಾಗುತ್ತಿದೆ. ಕೇರಳದಲ್ಲಿ ಸಹ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. 22 ಕ್ಯಾರೆಟ್ ಚಿನ್ನವು 190 ರೂ.ದಂತೆ ತಗ್ಗಿದ್ದು, 10 ಗ್ರಾಂಗೆ 42,050 ರೂ ಮತ್ತು, 24 ಕ್ಯಾರಟ್ ಹಳದಿ ಲೋಹ 200 ರೂ ಇಳಿಕೆಯೊಂದಿಗೆ 45,880 ರೂ.ಗೆ ಮಾರಾಟವಾಗುತ್ತಿದೆ.

ದೇಶದಲ್ಲಿ ಬೆಳ್ಳಿ ಬೆಲೆ

ದೇಶದಲ್ಲಿ ಬೆಳ್ಳಿ ಬೆಲೆ

ಬೆಳ್ಳಿ ದರದಲ್ಲಿ ಸೋಮವಾರ ಪುನಃ ಇಳಿಕೆ ಕಂಡಿದೆ. ಒಟ್ಟಾರೆ ದೇಶಿ ಮಾರುಕಟ್ಟೆಯಲ್ಲಿ ಪ್ರಸ್ತುತ ಒಂದು ಕೆಜಿ ಬೆಳ್ಳಿ ದರ 900 ರೂ ಕುಸಿತದೊಂದಿಗೆ 66,600 ರೂ.ಗೆ ತಲುಪಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಸ್ಥಿರವಾಗಿದೆ. ನಗರದಲ್ಲಿ ಬೆಳ್ಳಿ ದರ ಒಂದು ಕೆಜಿಗೆ 67,500 ರೂ.ದರಲ್ಲಿ ನಿಂತಿದೆ. ಮೈಸೂರಿನಲ್ಲಿ ಬೆಳ್ಳಿ ದರ ಪ್ರತಿ ಕೆ.ಜಿ.ಗೆ 900 ರೂ ಇಳಿಕೆಯಾಗಿದ್ದು, 66,600 ರೂ ದರವಿದೆ ಮತ್ತು ಮಂಗಳೂರಿನಲ್ಲಿಯೂ 66,600 ರೂ ದರವಿದೆ.

* ಚಿನ್ನ ಮತ್ತು ಬೆಳ್ಳಿ ಬೆಲೆಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರ ಬದಲಾವಣೆ ಮತ್ತು ಸ್ಥಳೀಯ ತೆರಿಗೆ ನೀತಿಗಳಿಗೆ ಅನುಗುಣವಾಗಿ ಬದಲಾಗುತ್ತದೆ. ಈ ಮಾಹಿತಿ ಬೆಳಿಗ್ಗೆ 11 ಗಂಟೆಯವರೆಗಿನ ಮಾರುಕಟ್ಟೆ ದರ ಬದಲಾವಣೆಯನ್ನು ಆಧರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+