ಮಾರ್ಚ್ 20ರಂದು ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ

ಬೆಂಗಳೂರು, ಮಾರ್ಚ್ 20: ಸತತ ಎರಡು ದಿನಗಳ ದರ ಏರಿಕೆ ಬಳಿಕ ಹಳದಿ ಲೋಹದ ದರ ದೇಶದಲ್ಲಿ ಕೊಂಚ ಇಳಿಕೆಯಾಗಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಶುಕ್ರವಾರ ಹೆಚ್ಚಾಗಿತ್ತು. ಎಂಸಿಎಕ್ಸ್‌ನಲ್ಲಿ ಹಳದಿ ಲೋಹದ ಬೆಲೆ ಪ್ರತಿ ಗ್ರಾಂಗೆ 32 ರೂಪಾಯಿಯಂತೆ ಏರಿಕೆಯಾಗಿತ್ತು. ಎಂಸಿಎಕ್ಸ್‌ನಲ್ಲಿ ಪ್ರತಿ ಹತ್ತು ಗ್ರಾಂ ಚಿನ್ನದ ದರ 320 ರೂಪಾಯಿಯಷ್ಟು ಹೆಚ್ಚಳ ಕಂಡಿತ್ತು.

ಎಂಸಿಎಕ್ಸ್‌ನಲ್ಲಿ 22 ಕ್ಯಾರಟ್ ಮತ್ತು 24 ಕ್ಯಾರಟ್ ಎರಡರಲ್ಲಿಯೂ ಪ್ರತಿ 10 ಗ್ರಾಂಗೆ 10 ರೂಪಾಯಿಯಂತೆ ಇಳಿಕೆಯಾಗಿದ್ದು, 22 ಕ್ಯಾರಟ್‌ನ ಹತ್ತು ಗ್ರಾಂ ಚಿನ್ನದ ಬೆಲೆ 44,060 ರೂ. ತಲುಪಿದೆ. 24 ಕ್ಯಾರಟ್ ಚಿನ್ನದ ಹತ್ತು ಗ್ರಾಂ.ಗೆ 45,060 ರೂಪಾಯಿ ದರವಿದೆ.

ಈ ದರದಲ್ಲಿ ದೇಶದ ಪ್ರಮುಖ ನಗರದಿಂದ ನಗರಕ್ಕೆ ವ್ಯತ್ಯಾಸವಿದೆ. ಕೆಲವು ನಗರಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ದುಬಾರಿಯಾಗಿದೆ, ವಿವಿಧ ನಗರಗಳಲ್ಲಿ ಹಳೆಯ ದರ ಕಾಯ್ದುಕೊಂಡಿದೆ.

ದೆಹಲಿಯಲ್ಲಿ ದರ

ದೆಹಲಿಯಲ್ಲಿ ದರ

ಬಂಗಾರದ ಬೆಲೆ ದೆಹಲಿಯಲ್ಲಿ ಅಲ್ಪ ಕುಸಿತ ಕಂಡಿದೆ. ಶುಕ್ರವಾರ ಪ್ರತಿ ಹತ್ತು ಗ್ರಾಂಗೆ 200 ರೂ. ದುಬಾರಿಯಾಗಿದ್ದ ಚಿನ್ನದ ದರ 10 ರೂ ಇಳಿಕೆಯಾಗಿದೆ. 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 44,240 ರೂ. ಇದ್ದರೆ, 24 ಕ್ಯಾರಟ್ ಚಿನ್ನ ಬೆಲೆ =ಪ್ರತಿ 10 ಗ್ರಾಂ ಚಿನ್ನದ ದರ 48,260 ರೂಪಾಯಿ ಇದೆ.

ಬೆಂಗಳೂರಲ್ಲಿ ಚಿನ್ನದ ದರ

ಬೆಂಗಳೂರಲ್ಲಿ ಚಿನ್ನದ ದರ

ಆದರೆ ಬೆಂಗಳೂರಿನಲ್ಲಿ ಚಿನ್ನದ ದರ ಶನಿವಾರ ಮತ್ತೆ ತುಟ್ಟಿಯಾಗಿದೆ. 22 ಕ್ಯಾರಟ್ ಚಿನ್ನದ ಬೆಲೆ 10 ರೂಪಾಯಿ ಏರಿಕೆಯಾಗಿತ್ತು. ಆದರೆ ಶನಿವಾರ ಪ್ರತಿ ಹತ್ತು ಗ್ರಾಂ ಬಂಗಾರ 150 ರೂ ಹೆಚ್ಚಳವಾಗಿದ್ದು, 42,250 ರೂಪಾಯಿಗೆ ತಲುಪಿದೆ. ಹಾಗೆಯೇ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ದರ 160 ರೂ ಏರಿಕೆಯಾಗಿದೆ. ಶುದ್ಧ ಚಿನ್ನದ ದರ 46,090 ರೂಪಾಯಿಗೆ ಮುಟ್ಟಿದೆ.

ಚೆನ್ನೈನಲ್ಲಿ ಬೆಲೆ ಎಷ್ಟು?

ಚೆನ್ನೈನಲ್ಲಿ ಬೆಲೆ ಎಷ್ಟು?

ಚೆನ್ನೈನಲ್ಲಿ ಚಿನ್ನದ ದರ ಪ್ರತಿ 10 ಗ್ರಾಂಗೆ 10 ರೂಪಾಯಿಯಷ್ಟು ಅಗ್ಗವಾಗಿದೆ. 10 ಗ್ರಾಂ ತೂಕದ 22 ಕ್ಯಾರಟ್ ಚಿನ್ನದ ಬೆಲೆ 42,480 ರೂ.ಗೆ ಮಾರಾಟವಾಗುತ್ತಿದೆ ಹಾಗೆಯೇ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 46,360 ರೂ. ತಲುಪಿದೆ.

ಮುಂಬೈನಲ್ಲಿ ಚಿನ್ನದ ದರ

ಮುಂಬೈನಲ್ಲಿ ಚಿನ್ನದ ದರ

ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 10 ರೂ ಇಳಿಕೆಯಾಗಿದ್ದು, 44,060 ರೂ ದರದಲ್ಲಿದೆ. 24 ಕ್ಯಾರಟ್ ಚಿನ್ನದ ಬೆಲೆ ಕೂಡ 10 ಗ್ರಾಂ 45,060 ರೂ ದರಕ್ಕೆ ಮಾರಾಟವಾಗುತ್ತಿದೆ. ಕೇರಳದಲ್ಲಿ ಸಹ ಚಿನ್ನದ ಬೆಲೆಯಲ್ಲಿ ಹೆಚ್ಚಳವಾಗಿದೆ. 22 ಕ್ಯಾರೆಟ್ ಚಿನ್ನವು 150 ರೂ.ದಂತೆ ಏರಿಕೆಯಾಗಿದ್ದು, 10 ಗ್ರಾಂಗೆ 42,250 ರೂ ಮತ್ತು, 24 ಕ್ಯಾರಟ್ ಹಳದಿ ಲೋಹ 160 ರೂ ಏರಿಕೆಯೊಂದಿಗೆ 46,090 ರೂ.ಗೆ ಮಾರಾಟವಾಗುತ್ತಿದೆ.

ದೇಶದಲ್ಲಿ ಬೆಳ್ಳಿ ಬೆಲೆ

ದೇಶದಲ್ಲಿ ಬೆಳ್ಳಿ ಬೆಲೆ

ಬೆಳ್ಳಿ ದರದಲ್ಲಿ ಶುಕ್ರವಾರ ಸ್ವಲ್ಪ ಏರಿಕೆಯಾಗಿದೆ. ಎಂಸಿಎಕ್ಸ್‌ನಲ್ಲಿ ಪ್ರತಿ ಕೆಜಿ ಬೆಳ್ಳಿ ದರ 200 ರೂಪಾಯಿಯಷ್ಟು ತುಟ್ಟಿಯಾಗಿದೆ. ಪ್ರಸ್ತುತ ಒಂದು ಕೆಜಿ ಬೆಳ್ಳಿಗೆ 67,500 ರೂ ದರವಿದೆ. ಬೆಂಗಳೂರಿನಲ್ಲಿಯೂ ಬೆಳ್ಳಿ ಬೆಲೆ ಏರಿಕೆಯಾಗಿದೆ. ನಗರದಲ್ಲಿ ಬೆಳ್ಳಿ ದರ ಒಂದು ಕೆಜಿಗೆ 200 ರೂಪಾಯಿ ಹೆಚ್ಚಳವಾಗಿದ್ದು, 67,500ಕ್ಕೆ ತಲುಪಿದೆ. ಮೈಸೂರು ಮತ್ತು ಮಂಗಳೂರಿನಲ್ಲಿಯೂ 67,500 ರೂ ದರವಿದೆ.

* ಚಿನ್ನ ಮತ್ತು ಬೆಳ್ಳಿ ಬೆಲೆಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರ ಬದಲಾವಣೆ ಮತ್ತು ಸ್ಥಳೀಯ ತೆರಿಗೆ ನೀತಿಗಳಿಗೆ ಅನುಗುಣವಾಗಿ ಬದಲಾಗುತ್ತದೆ. ಈ ಮಾಹಿತಿ ಬೆಳಿಗ್ಗೆ 11 ಗಂಟೆಯವರೆಗಿನ ಮಾರುಕಟ್ಟೆ ದರ ಬದಲಾವಣೆಯನ್ನು ಆಧರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+