ಮಾರ್ಚ್ 13ರಂದು ದೇಶದಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ?

ಬೆಂಗಳೂರು, ಮಾರ್ಚ್ 13: ಮದುವೆ, ಹಬ್ಬ ಹರಿದಿನದ ದಿನಗಳು ಸಮೀಪಿಸುತ್ತಿದ್ದಂತೆಯೇ ಆಭರಣಗಳಿಗೆ ಬೇಡಿಕೆ ಹೆಚ್ಚುವುದು ಸಹಜ. ಇದು ಶುಭ ಸಮಾರಂಭಗಳು ಹೆಚ್ಚಾಗಿ ನಡೆಯುವ ಸಮಯ. ಕೆಲವು ದಿನಗಳ ಹಿಂದೆ ಇಳಿಕೆಯತ್ತ ಸಾಗಿದ್ದ ಚಿನ್ನಾಭರಣಗಳ ಬೆಲೆ, ಈಗ ಮತ್ತೆ ಗಗನಮುಖಿಯಾಗುತ್ತಿದೆ. ಸುಡುಬೇಸಿಗೆಯಲ್ಲಿ ಗ್ರಾಹಕರನ್ನು ಮತ್ತಷ್ಟು ಬೆವರಿಳಿಸುವಂತೆ ಮಾಡುತ್ತಿದೆ.

ಆದರೆ, ವಾರಾಂತ್ಯದಲ್ಲಿ ಚಿನ್ನದ ಬೆಲೆಯಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಿದ್ದು, ರಜೆಯ ದಿನಗಳಂದು ಆಭರಣ ಖರೀದಿಗೆ ತೆರಳುವವರಿಗೆ ತುಸು ನೆಮ್ಮದಿ ನೀಡಿದೆ. ದೇಶದ ಎಲ್ಲ ಪ್ರಮುಖ ನಗರಗಳಲ್ಲಿ ಶನಿವಾರ ಚಿನ್ನದ ಬೆಲೆಯಲ್ಲಿ ಕೊಂಚ ಕಡಿಮೆಯಾಗಿದೆ.

ಎಂಸಿಎಕ್ಸ್‌ನಲ್ಲಿ ಚಿನ್ನದ ಬೆಲೆಯು ಶನಿವಾರ ಹತ್ತು ಗ್ರಾಂಗೆ 380 ರೂಪಾಯಿ ಇಳಿಕೆಯಾಗಿದ್ದು, 45,650 ರೂಪಾಯಿಗೆ ತಗ್ಗಿದೆ. ಆದರೆ ಬೆಂಗಳೂರು ನಗರದಲ್ಲಿ ಚಿನ್ನದ ಬೆಲೆ ಮುಂಜಾನೆಯ ಕುಸಿತದ ಬಳಿಕ ಮತ್ತೆ ಏರಿಕೆಯಾಗಿದೆ ಎಂದು ವರದಿಯಾಗಿದೆ.

ದೆಹಲಿಯಲ್ಲಿ ಬೆಲೆ

ದೆಹಲಿಯಲ್ಲಿ ಬೆಲೆ

ಹಳದಿ ಲೋಹದ ಬೆಲೆ ದೆಹಲಿಯಲ್ಲಿ ಇಳಿಕೆಯಾಗಿದೆ. 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 310 ರೂಪಾಯಿಯಷ್ಟು ತಗ್ಗಿದ್ದು, 44,300 ರೂ ದಿಂದ 43,990ಕ್ಕೆ ಅಗ್ಗವಾಗಿದೆ. ಹಾಗೆಯೇ 24 ಕ್ಯಾರಟ್ ಚಿನ್ನ ಬೆಲೆ ಗ್ರಾಂಗೆ 10 ರೂಪಾಯಿಯಂತೆ ಇಳಿದಿದ್ದು, ಪ್ರತಿ 10 ಗ್ರಾಂ ಚಿನ್ನದ ದರ 48,000 ರೂಪಾಯಿಯಿಂದ 47,990ಕ್ಕೆ ಕುಸಿದಿದೆ.

ಬೆಂಗಳೂರಲ್ಲಿ ತುಟ್ಟಿ

ಬೆಂಗಳೂರಲ್ಲಿ ತುಟ್ಟಿ

ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ತುಟ್ಟಿಯಾಗಿದೆ. ಬೆಳಿಗ್ಗೆ 300 ರಷ್ಟು ಇಳಿಕೆ ಕಂಡಿದ್ದ 22 ಕ್ಯಾರಟ್ ಚಿನ್ನದ ಬೆಲೆ, 10 ಗ್ರಾಂಗೆ 150 ರೂ ಮತ್ತೆ ಏರಿಕೆ ಕಂಡಿದೆ. ಇದರಿಂದ 41,850 ರೂಪಾಯಿಯಿಂದ 42,000ಕ್ಕೆ ಹೆಚ್ಚಳ ಕಂಡಿದೆ. ಹಾಗೆಯೇ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ದರ 170 ರೂಪಾಯಿ ಏರಿಕೆಯಾಗಿದೆ. ಅದು 45,650 ರೂಪಾಯಿಯಿಂದ 45,920 ರೂಪಾಯಿಗೆ ತಲುಪಿದೆ.

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ದರ ಪ್ರತಿ 10 ಗ್ರಾಂಗೆ 10 ರೂಪಾಯಿಯಷ್ಟು ಅತ್ಯಲ್ಪ ಇಳಿಕೆ ಕಂಡಿದೆ. ಶುಕ್ರವಾರ 41,800 ರೂಪಾಯಿಗೆ ಮಾರಾಟವಾಗುತ್ತಿದ್ದ 10 ಗ್ರಾಂ ತೂಕದ 22 ಕ್ಯಾರಟ್ ಚಿನ್ನದ ಬೆಲೆ ಶನಿವಾರ 41,790 ರೂ.ಗೆ ಇಳಿಕೆಯಾಗಿದೆ. ಹಾಗೆಯೇ 24 ಕ್ಯಾರೆಟ್ ಚಿನ್ನದ ಬೆಲೆ 45,600 ರೂ ದಿಂದ 45,590ಕ್ಕೆ ಇಳಿದಿದೆ.

ಮುಂಬೈನಲ್ಲಿ ಚಿನ್ನದ ದರ

ಮುಂಬೈನಲ್ಲಿ ಚಿನ್ನದ ದರ

ಮುಂಬೈನಲ್ಲಿ ಶುಕ್ರವಾರ 43,530 ರೂಪಾಯಿ ಇದ್ದ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ, ಶನಿವಾರ 44,520ಕ್ಕೆ ಇಳಿದಿದೆ. 24 ಕ್ಯಾರಟ್ ಚಿನ್ನದ ಬೆಲೆ 44,530 ದಿಂದ 44,520ಕ್ಕೆ ಇಳಿಕೆಯಾಗಿದೆ. ಕೇರಳದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ 41,840 ರೂ ದರವಿದ್ದರೆ, 24 ಕ್ಯಾರಟ್ ಹಳದಿ ಲೋಹ 45,640 ರೂಗೆ ಮಾರಾಟವಾಗುತ್ತಿದೆ.

Recommended Video

    ಅಬ್ಬಾ ! ಬೆಲೆ ಎಷ್ಟು ಕಡಿಮೆ ಆಗಿದೆ ಗೊತ್ತಾ !! | Oneindia Kannada
    ದೇಶದಲ್ಲಿ ಬೆಳ್ಳಿ ಬೆಲೆ

    ದೇಶದಲ್ಲಿ ಬೆಳ್ಳಿ ಬೆಲೆ

    ದೇಶದಲ್ಲಿ ಒಟ್ಟಾರೆಯಾಗಿ ಬೆಳ್ಳಿ ಬೆಲೆ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 700 ರೂಪಾಯಿಯಷ್ಟು ತಗ್ಗಿದ್ದು, 66,900 ರೂಪಾಯಿ ಇದೆ. ಬೆಂಗಳೂರು ಮತ್ತು ಮೈಸೂರಿನಲ್ಲಿ 1 ಕೆಜಿ ಬೆಳ್ಳಿ ದರ 66,900 ರೂಪಾಯಿ ಇದೆ ಎಂದು ಗುಡ್‌ ರಿಟರ್ನ್ಸ್ ವೆಬ್‌ಸೈಟ್ ಮಾಹಿತಿ ನೀಡಿದೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+