ಮಾರ್ಚ್ 11ರಂದು ದೇಶದ ವಿವಿಧ ನಗರಗಳಲ್ಲಿ ಚಿನ್ನ, ಬೆಳ್ಳಿ ದರ

ಬೆಂಗಳೂರು, ಮಾರ್ಚ್ 11: ವಿವಿಧ ರಾಜ್ಯಗಳಲ್ಲಿ ಗುರುವಾರ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಗಳಿಲ್ಲದ ಸ್ಥಿರತೆ ಕಾಯ್ದುಕೊಂಡಿದೆ. ಆದರೆ ಬೆಂಗಳೂರು, ಹೈದರಾಬಾದ್ ಮುಂತಾದ ನಗರಗಳಲ್ಲಿ ಕೊಂಚ ಏರಿಕೆ ಕಂಡಿದೆ. 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ 43,430 ರೂ. ಇದ್ದರೆ, 24 ಕ್ಯಾರಟ್ ಚಿನ್ನವನ್ನು 44,430 ರೂ.ಗೆ ಖರೀದಿಸಬಹುದಾಗಿದೆ.

ನವದೆಹಲಿಯಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ 43,950 ರೂ ಇದ್ದು, ಗುರುವಾರ 150 ರೂ. ಏರಿಕೆಯಾಗಿದೆ. ಚೆನ್ನೈನಲ್ಲಿ ಚಿನ್ನದ ಬೆಲೆ 110 ರೂಪಾಯಿ ಹೆಚ್ಚಳ ಕಂಡಿದ್ದು, 22 ಕಾರೆಟ್‌ನ 10 ಗ್ರಾಂ ಚಿನ್ನ 42,950 ರೂ ಬೆಲೆ ಬಾಳುತ್ತಿದೆ. ಮುಂಬೈನಲ್ಲಿ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬುಧವಾರ 43,430 ರೂಪಾಯಿ ಇದ್ದು, ಅದೇ ದರ ಮುಂದುವರಿದಿದೆ. ಚೆನ್ನೈನಲ್ಲಿ 24 ಕ್ಯಾರಟ್ ಚಿನ್ನ ಬೆಲೆ ಪ್ರತಿ 10 ಗ್ರಾಂಗೆ 45,980 ರೂ. ಇದೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಭಾರಿ ಏರಿಕೆಯ ಬಳಿಕ ಕೊಂಚ ಇಳಿಕೆಯಾಗಿತ್ತು. ಆದರೆ ಸುಂಕ, ತಯಾರಿಕಾ ವೆಚ್ಚ ಮುಂತಾದ ಕಾರಣಗಳಿಂದ ಮತ್ತೆ ಹೆಚ್ಚಳದ ದಿಕ್ಕಿನತ್ತ ಸಾಗಿದೆ.

ಬೆಂಗಳೂರಿನಲ್ಲಿ ಹಳದಿ ಲೋಹದ ಬೆಲೆ

ಬೆಂಗಳೂರಿನಲ್ಲಿ ಹಳದಿ ಲೋಹದ ಬೆಲೆ

ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (ಎಂಸಿಎಕ್ಸ್) ಚಿನ್ನದ ಬೆಲೆಯಲ್ಲಿ ಗುರುವಾರ 160 ರೂ ಹೆಚ್ಚಾಗಿದ್ದು, ಪ್ರತಿ 10 ಗ್ರಾಂಗೆ 45,600 ರೂ ಇದೆ. ಬೆಂಗಳೂರಿನಲ್ಲಿ ಹಳದಿ ಲೋಹ 150 ರೂ.ದಷ್ಟು ದುಬಾರಿಯಾಗಿದೆ. ಇಂದು 22 ಕ್ಯಾರಟ್‌ನ 10 ಗ್ರಾಂ ಚಿನ್ನಕ್ಕೆ 41,800 ರೂ. ಇದ್ದರೆ, 24 ಕ್ಯಾರಟ್ ಚಿನ್ನವು ಪ್ರತಿ 10 ಗ್ರಾಂಗೆ 160 ರೂ ಹೆಚ್ಚಳದೊಂದಿಗೆ 45,600 ರೂ ತಲುಪಿದೆ.

ಹೈದರಾಬಾದ್, ಕೇರಳದಲ್ಲಿ ಚಿನ್ನದ ದರ

ಹೈದರಾಬಾದ್, ಕೇರಳದಲ್ಲಿ ಚಿನ್ನದ ದರ

ಹೈದರಾಬಾದ್ ಕಾಸ್ಮೊಪಾಲಿಟನ್ ನಗರದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ 41,800 ರೂ ಇದ್ದರೆ, 24 ಕ್ಯಾರಟ್ ಹಳದಿ ಲೋಹ 160 ರೂ ಹೆಚ್ಚಳದೊಂದಿಗೆ 45,600 ರೂ ಇದೆ. ಕೇರಳದಲ್ಲಿ 150 ರೂ ಅಲ್ಪ ಏರಿಕೆಯೊಂದಿಗೆ 22 ಕ್ಯಾರಟ್‌ನ 10 ಗ್ರಾಂ ಚಿನ್ನ 41,800 ರೂ ದರಕ್ಕೆ ಮಾರಾಟವಾಗುತ್ತಿದೆ. 22 ಕ್ಯಾರಟ್ ಚಿನ್ನಕ್ಕೆ 160 ರೂ ಹೆಚ್ಚಳದೊಂದಿಗೆ 45,600 ರೂ. ದರವಿದೆ.

ಪ್ರಮುಖ ನಗರಗಳಲ್ಲಿ ಬೆಳ್ಳಿ ದರ

ಪ್ರಮುಖ ನಗರಗಳಲ್ಲಿ ಬೆಳ್ಳಿ ದರ

ಬೆಳ್ಳಿ ಕೂಡ ದಿನದಿಂದ ದಿನಕ್ಕೆ ತುಟ್ಟಿಯಾಗುತ್ತಿದೆ. 1 ಕೆಜಿ ಬೆಳ್ಳಿ ಬೆಂಗಳೂರಿನಲ್ಲಿ 67,000 ರೂ. ದರಕ್ಕೆ ಮಾರಾಟವಾಗುತ್ತಿದೆ. ಹೈದರಾಬಾದ್‌ ಮತ್ತು ಚೆನ್ನೈ ನಗರಗಳಲ್ಲಿ 71,400 ರೂ ದರವಿದೆ. ಕೇರಳ, ದೆಹಲಿ, ಕೋಲ್ಕತಾ ಮತ್ತು ಮುಂಬೈಗಳಲ್ಲಿ ಬೆಳ್ಳಿ ಬೆಲೆ 67,000 ರೂ. ಇದೆ. ಕೆಲವು ನಗರಗಳಲ್ಲಿ ಬೆಳ್ಳಿ ಬೆಲೆ ಕೊಂಚ ಇಳಿಕೆ ಕಂಡಿದೆ.

ವಿಶಾಖಪಟ್ಟಣ, ಕೋಲ್ಕತಾದಲ್ಲಿ ಚಿನ್ನದ ದರ

ವಿಶಾಖಪಟ್ಟಣ, ಕೋಲ್ಕತಾದಲ್ಲಿ ಚಿನ್ನದ ದರ

ಕೋಲ್ಕತಾದಲ್ಲಿ 10 ಗ್ರಾಂನ 22 ಕ್ಯಾರಟ್ ಚಿನ್ನಕ್ಕೆ 44,150 ರೂ ದರವಿದೆ. ಹಾಗೆಯೇ 24 ಕ್ಯಾರಟ್ ಚಿನ್ನದ ದರ 46,790ಕ್ಕೆ ಏರಿಕೆಯಾಗಿದೆ. ವಿಶಾಖಪಟ್ಟಣದಲ್ಲಿ 22 ಕ್ಯಾರಟ್ ಚಿನ್ನ 41,800 ರೂ ಇದ್ದು, 24 ಕ್ಯಾರಟ್ ಚಿನ್ನ 10 ಗ್ರಾಂ.ಗೆ 45,600 ರೂ ದರವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+