ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಹಕರಿಗೆ ತುಸು ನೆಮ್ಮದಿ ನೀಡಿತು ಚಿನ್ನ, ಬೆಳ್ಳಿ ಬೆಲೆ ಕುಸಿತ

|
Google Oneindia Kannada News

ನವದೆಹಲಿ, ಅಕ್ಟೋಬರ್ 5: ಸ್ಥಳೀಯ ಆಭರಣ ವರ್ತಕರಿಂದ ಬೇಡಿಕೆ ಕಡಿಮೆಯಾಗಿದ್ದು, ವಿದೇಶಿ ಮಾರುಕಟ್ಟೆಯಲ್ಲಿ ಜಡವಾಗಿದ್ದರ ನಡುವೆಯೇ, ಚಿನ್ನದ ಬೆಲೆಯಲ್ಲಿ ಶುಕ್ರವಾರ 250 ರೂ.ನಷ್ಟು ಇಳಿಕೆಯಾಗಿದ್ದು, 10 ಗ್ರಾಂ ಚಿನ್ನ 31,850 ರೂ.ಗೆ ಕುಸಿದಿದೆ.

ಬೆಳ್ಳಿ ಬೆಲೆಯಲ್ಲಿಯೂ 100 ರೂ. ಕುಸಿತವಾಗಿದ್ದು, ಕೆ.ಜಿ.ಗೆ 39,250 ರೂ.ಗೆ ತಗ್ಗಿದೆ. ಕೈಗಾರಿಕಾ ಘಟಕಗಳು ಮತ್ತು ಕಾಯಿನ್ ತಯಾರಕರು ಖರೀದಿ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ದರ ಕುಸಿತವಾಗಿದೆ.

ಪಿತೃಪಕ್ಷದಲ್ಲೂ ಏರಿತು ಚಿನ್ನದ ಬೆಲೆ, ಏರಿಕೆಯಲ್ಲೂ ದಾಖಲೆಪಿತೃಪಕ್ಷದಲ್ಲೂ ಏರಿತು ಚಿನ್ನದ ಬೆಲೆ, ಏರಿಕೆಯಲ್ಲೂ ದಾಖಲೆ

ವರ್ತಕರ ಪ್ರಕಾರ, ಸ್ಥಳೀಯ ಚಿನಿವಾರ ಪೇಟೆಯಲ್ಲಿನ ಬೇಡಿಕೆ ಕುಸಿತ ಹಾಗೂ ವಿದೇಶಗಳಲ್ಲಿನ ದುರ್ಬಲಗೊಂಡ ವಹಿವಾಟು ಚಿನ್ನದ ಬೆಲೆಯ ಕುಸಿತಕ್ಕೆ ಕಾರಣ.

gold and silver prices fall on weak cues, low demand

ಎರಡು ದಿನಗಳ ಹಿಂದಷ್ಟೇ ಚಿನ್ನದ ಬೆಲೆಯಲ್ಲಿ ಹೆಚ್ಚಳವಾಗಿತ್ತು. ಆದರೆ, ಈಗ ದಿಢೀರ್ ಕುಸಿತ ಕಂಡಿದೆ.

ಸಿಂಗಪುರದಲ್ಲಿ ಶುಕ್ರವಾರ ಔನ್ಸ್‌ಗೆ 1,199.40 ಡಾಲರ್ ನಿಂದ ಶೇ 0.16ರಷ್ಟು ಇಳಿಕೆಯಾಗಿದೆ. ಬೆಳ್ಳಿ ಬೆಲೆಯೂ ಶೇ 0.03ರಷ್ಟು, ಅಂದರೆ 14.64 ಡಾಲರ್‌ನಷ್ಟು ಕುಸಿದಿದೆ.

ಡಾಲರ್‌ ಮೌಲ್ಯ ಏರಿಕೆ, ಚಿನ್ನದ ಬೆಲೆಯಲ್ಲಿ ಭಾರಿ ಕುಸಿತಡಾಲರ್‌ ಮೌಲ್ಯ ಏರಿಕೆ, ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ

ರಾಜಧಾನಿ ದೆಹಲಿಯಲ್ಲಿ 99.9% ಹಾಗೂ 99.5% ಶುದ್ಧತೆಯ ಚಿನ್ನದ ಬೆಲೆಯಲ್ಲಿ 250 ರೂಪಾಯಿ ಇಳಿಕೆಯಾಗಿ, ಪ್ರತಿ 10 ಗ್ರಾಮ್ ಗೆ ಕ್ರಮವಾಗಿ 31,850 ಮತ್ತು 31,700 ರೂಪಾಯಿ ತಲುಪಿದೆ. ಎರಡು ದಿನಗಳ ಹಿಂದೆ ಚಿನ್ನದ ಬೆಲೆಯಲ್ಲಿ 625 ರೂಪಾಯಿ ಏರಿಕೆಯಾಗಿತ್ತು.

ರೈತರು ಖುಷ್, ವರ್ಷದ ದ್ವಿತೀಯಾರ್ಧದಲ್ಲಿ ಚಿನ್ನಕ್ಕೆ ಭರ್ಜರಿ ಬೇಡಿಕೆರೈತರು ಖುಷ್, ವರ್ಷದ ದ್ವಿತೀಯಾರ್ಧದಲ್ಲಿ ಚಿನ್ನಕ್ಕೆ ಭರ್ಜರಿ ಬೇಡಿಕೆ

ಸವರನ್ ಚಿನ್ನ (ಎಂಟು ಗ್ರಾಂ) 24,600ರಲ್ಲಿ ಸ್ಥಿರವಾಗಿದೆ.

ರಾಜಧಾನಿಯಲ್ಲಿ ಸಿದ್ಧ ಬೆಳ್ಳಿ ಮತ್ತು ವಾರ ಆಧಾರಿತ ಬೆಳ್ಳಿ ತಲಾ 100 ರೂ. ಮೌಲ್ಯ ಕಳೆದುಕೊಂಡಿದ್ದು, ಕೆ.ಜಿ. ತೂಕಕ್ಕೆ ಕ್ರಮವಾಗಿ 39,250 ರೂ. ಮತ್ತು 38,845 ರೂ. ಇದೆ.

ಬೆಳ್ಳಿ ನಾಣ್ಯಗಳಲ್ಲಿ ಬದಲಾವಣೆಯಾಗಿಲ್ಲ. 100 ನಾಣ್ಯಗಳಿಗೆ 73,000 ರೂ. ಖರೀದಿ ಹಾಗೂ 74,000 ರೂ. ಮಾರಾಟ ದರ ಹೊಂದಿದೆ.

English summary
Gold prices fell by Rs 250 per gram and silver prices by Rs 100 per KG on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X