Gold Price: ಆಭರಣ ಪ್ರಿಯ ಮಹಿಳೆಯರೆ, ಹೂಡಿಕೆ ಪ್ರಿಯ ಪುರುಷರೇ: ಚಿನ್ನ ಖರೀದಿಗೆ ಇದು ಸೂಕ್ತ ಸಮಯವೇ?

ಚಿನ್ನ.. ಚಿನ್ನ.. ಬೆಳ್ಳಿ.. ಬೆಳ್ಳಿ.. ಹೀಗೆ ಆಭರಣ ಇಷ್ಟಪಡುವ ಮಹಿಳೆಯರಿಗೆ ಚಿನ್ನ & ಬೆಳ್ಳಿ ಅಂದ್ರೆ ಸಖತ್ ಆಸೆ. ಅದ್ರಲ್ಲೂ ಹಬ್ಬಗಳು ಬಂದಾಗ ಚಿನ್ನ & ಬೆಳ್ಳಿ ಖರೀದಿ ಮಾಡಬೇಕು ಅಂತಾ ಸದಾ ಇಷ್ಟಪಡ್ತಾರೆ. ಹಾಗೇ ಮತ್ತೊಂದು ಕಡೆ ಹೂಡಿಕೆಯನ್ನ ಮಾಡಲು ಕೂಡ ಚಿನ್ನ & ಬೆಳ್ಳಿ ಸೂಕ್ತವಾದ ವೇದಿಕೆ ಎನ್ನಬಹುದು. ಯಾಕಂದ್ರೆ ಜಗತ್ತಿನಲ್ಲಿ ಚಿನ್ನ ಮತ್ತು ಬೆಳ್ಳಿ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹಾಗಾದ್ರೆ ಈಗಿನ ಪರಿಸ್ಥಿತಿಯಲ್ಲಿ ಚಿನ್ನ & ಬೆಳ್ಳಿ ಮೇಲೆ ಹೂಡಿಕೆ ಮಾಡುವುದು ಸರಿಯಾದ ನಿರ್ಧಾರ ಆಗಿದೆಯೇ?

ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಸಾಕಷ್ಟು ಏರಿಳಿತ ಕಂಡುಬರುತ್ತಿದೆ, ಅದರಲ್ಲೂ ಕಳೆದ 5 ತಿಂಗಳಿಂದ ಚಿನ್ನ & ಬೆಳ್ಳಿ ಗರಿಷ್ಠ ಬೆಲೆಯನ್ನೂ ತಲುಪಿದೆ. ಇದರ ಜೊತೆಗೆ ಸಾಕಷ್ಟು ಕುಸಿತ ಕೂಡ ಕಂಡಿದೆ. ಹೀಗಿದ್ದಾಗ ಇದೀಗ ಮತ್ತೆ ಚಿನ್ನದ ಬೆಲೆ ಕುಸಿತದ ಹಾದಿಗೆ ಮರಳುವ ಸೂಚನೆ ಕೂಡ ಸಿಗುತ್ತಿದೆ. ಹಾಗೇ ಶ್ರಾವಣದ ಸಮಯದಲ್ಲಿ ಶುಭಕಾರ್ಯ ನಡೆಯುತ್ತಿದ್ದವು, ಈಗ ಆ ಶುಭ ಕಾರ್ಯ ಮುಕ್ತಾಯದ ಹಂತಕ್ಕೆ ತಲುಪುತ್ತಿದ್ದು ಚಿನ್ನ & ಬೆಳ್ಳಿ ಬೆಲೆಯಲ್ಲಿ ಮತ್ತೊಮ್ಮೆ ಭಾರಿ ಕುಸಿತ ಆಗುತ್ತಾ? ಎಂಬ ಕುತೂಹಲ ಕೆರಳಿದೆ.

Gold And Silver Price Will Be Witness Some More Big Changes In Upcoming Days

ಬಂಗಾರ ಖರೀದಿಗೆ ಸೂಕ್ತ ಸಮಯ?

ಚಿನ್ನದ ಮೇಲೆ ಹೂಡಿಕೆ ಮಾಡುವಲ್ಲಿ ಭಾರತೀಯರು ಮೊದಲಿಗರು ಎನ್ನಬಹುದು. ಯಾಕೆ ಅಂದ್ರೆ ಚಿನ್ನ ಹೂಡಿಕೆ ಮಾಡುವವರಿಗೆ ನಂಬಿಕೆಯ ವಸ್ತು ಆಗಿದೆ. ಈವರೆಗೂ ಚಿನ್ನದ ಬೆಲೆ ನಿರಂತರ ಏರಿಕೆ ಕೂಡ ಕಾಣುತ್ತಿದೆ. ಅದರಲ್ಲೂ, ಕಳೆದ 20 ವರ್ಷದಲ್ಲಿ ಚಿನ್ನದ ಬೆಲೆಯಲ್ಲಿ ಹಾಗೂ ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಇಂತಹ ಸಮಯದಲ್ಲೇ, ಮತ್ತೊಮ್ಮೆ ಚಿನ್ನ ಹಾಗೂ ಬೆಳ್ಳಿ ಮೇಲೆ ಹೂಡಿಕೆ ಮಾಡುವ ಬಗ್ಗೆ ಚರ್ಚೆ ಶುರುವಾಗಿದೆ. ಒಂದು ಕಡೆ, ಮಾರುಕಟ್ಟೆ ತಜ್ಞರು ಚಿನ್ನದ ಮೇಲೆ ಹೂಡಿಕೆ ಮಾಡುವುದು ಸೂಕ್ತ ಎನ್ನುತ್ತಿದ್ದರೆ. ಇನ್ನೊಂದು ಕಡೆ ಚಿನ್ನದ ಬೆಲೆ ಕುಸಿದು ಬೀಳಬಹುದು ಎಂಬ ಅಭಿಪ್ರಾಯ ಕೂಡ ಕೇಳಿಬರುತ್ತಿದೆ. ಹೀಗೆ ಬೆಳ್ಳಿ ಲೋಹದ ಮೇಲೂ ಹೂಡಿಕೆ ಮಾಡುವ ಬಗ್ಗೆ ಇದೀಗ ಮಿಶ್ರ ಪ್ರತಿಕ್ರಿಯೆ ಸಿಗುತ್ತಿದೆ.

ಚಿನ್ನದ ಬೆಲೆ ಇದೀಗ ಎಷ್ಟಿದೆ?

ಒಟ್ನಲ್ಲಿ ಚಿನ್ನದ ಬೆಲೆ ಇಳಿಕೆ ಕಾಣುವ ನಿರೀಕ್ಷೆಯಲ್ಲಿ ಆಭರಣ ಪ್ರಿಯರು ಇದ್ದಾರೆ. ಇನ್ನೊಂದು ಕಡೆ ಹೂಡಿಕೆದಾರರು ಚಿನ್ನದ ಬೆಲೆ & ಬೆಳ್ಳಿ ಬೆಲೆ ಏರಿಕೆ ಆಗಲಿ ಅಂತಾ ಕಾಯುತ್ತಿದ್ದಾರೆ. ಈ ಕಾಯುವಿಕೆ ನಡುವೆ ಇದೀಗ ಬೆಂಗಳೂರಲ್ಲಿ 22 ಕ್ಯಾರೆಟ್ ಬಂಗಾರದ ಬೆಲೆ 67,150 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕೂಡ ಸರಿಸುಮಾರು ಇಷ್ಟೇ ಬೆಲೆಯಲ್ಲಿ, ಇದೀಗ ಮಾರಾಟ ಆಗುತ್ತಿದೆ ಚಿನ್ನ. ಮತ್ತೊಂದು ಕಡೆ ಇಂದು ಬೆಳ್ಳಿ ಬೆಲೆಯಲ್ಲಿ ಒಂದಷ್ಟು ಇಳಿಕೆ ಕಂಡುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+