Gold Price: ಚಿನ್ನ & ಬೆಳ್ಳಿ ಬೆಲೆ ಇಂದು ಏನಾಗಬಹುದು?
ಚಿನ್ನ & ಬೆಳ್ಳಿ ಬೆಲೆ ಒಂದೇ ಸಮನೆ ಕುಸಿತದ ಹಾದಿಯಲ್ಲಿ ಸಾಗುತ್ತಿದೆ. ಅದರಲ್ಲೂ ಚಿನ್ನದ ಬೆಲೆ ಬಜೆಟ್-2024 ಮುಗಿದ ನಂತರ ನಿರಂತರವಾಗಿ ಕುಸಿದು ಕುಸಿದು ಬೀಳುತ್ತಿದೆ. ನಿನ್ನೆಯು ಕೂಡ ಇದೇ ರೀತಿ ಚಿನ್ನದ ಬೆಲೆ ಇಳಿಕೆ ಕಂಡಿದೆ. ಹಾಗಾದ್ರೆ ಇಂದಿನ ದಿನ ಚಿನ್ನ & ಬೆಳ್ಳಿಯ ಬೆಲೆ ಏನಾಗಬಹುದು? ಸಂಪೂರ್ಣ ಮಾಹಿತಿ ತಿಳಿಯಲು ಮುಂದೆ ಓದೋಣ ಬನ್ನಿ.
ಚಿನ್ನ & ಬೆಳ್ಳಿಗೆ ಆಷಾಢ ಮುಗಿದ ನಂತರ ಮತ್ತಷ್ಟು ಡಿಮ್ಯಾಂಡ್ ಬಂದಿದೆ. ಯಾಕಂದ್ರೆ ಈ ಸಮಯದಲ್ಲಿ ಶುಭ ಕಾರ್ಯಗಳು ಹೆಚ್ಚಾಗಿ ನಡೆಯುವ ಕಾರಣಕ್ಕೆ ಜನ ಕೂಡ ಚಿನ್ನ & ಬೆಳ್ಳಿ ಖರೀದಿ ಮಾಡುತ್ತಾರೆ. ಹೀಗಾಗಿಯೇ ಮಾರುಕಟ್ಟೆಯಲ್ಲಿ ಈ ಸಮಯದಲ್ಲಿ ಚಿನ್ನದ ಬೆಲೆಯು ಏರಿಕೆ ಕಾಣುವುದು ವಾಡಿಕೆ. ಆದರೆ ಇದೀಗ ಚಿನ್ನದ ಬೆಲೆಯಲ್ಲಿ ಕುಸಿತ ಆರಂಭವಾಗಿದ್ದು, ಸತತವಾಗಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬರುತ್ತಿದೆ. ಅದರಲ್ಲೂ ಬಜೆಟ್ ಬಳಿಕ ಚಿನ್ನ & ಬೆಳ್ಳಿ ಬೆಲೆಯಲ್ಲಿ ಭಾರಿ ಇಳಿಕೆ ಆಗುತ್ತಿದ್ದು, ಚಿನ್ನ & ಬೆಳ್ಳಿ ಬೆಲೆ ಎಷ್ಟಿದೆ ಈಗ ಎಂಬುದರ ಬಗ್ಗೆ ಮಾಹಿತಿಗೆ ಮುಂದೆ ಓದಿ. ಹಾಗೇ ಇಂದು ಚಿನ್ನದ ಬೆಲೆಯಲ್ಲಿ ಏರಿಕೆ ಆಗುತ್ತಾ? ಇಲ್ಲ ಇಳಿಕೆ ಆಗುತ್ತಾ? ಬನ್ನಿ ಮುಂದೆ ಓದೋಣ.

ಚಿನ್ನದ ಬೆಲೆಯಲ್ಲಿ ದಿಢೀರ್ ಕುಸಿತ
ಒಡವೆ ಚಿನ್ನ ಅಂದ್ರೆ 22 ಕ್ಯಾರೆಟ್ ಚಿನ್ನ ನಿನ್ನೆ, ಪ್ರತಿ 100 ಗ್ರಾಂಗೆ 2000 ರೂಪಾಯಿ ಕುಸಿತವನ್ನ ಕಂಡಿದೆ. ಹಾಗೇ ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ನಿನ್ನೆ 200 ರೂ. ಕಡಿತವಾಗಿದೆ. ಆಭರಣ ಚಿನ್ನದ ಬೆಲೆ ಕುಸಿತದ ಬಳಿಕ ಪ್ರತಿ 10 ಗ್ರಾಂಗೆ 63,200 ರೂಪಾಯಿ ಇದ್ದು. 24 ಕ್ಯಾರೆಟ್ ಚಿನ್ನದ ಬೆಲೆ ಕೂಡ ಕುಸಿದು ಬಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 2,100 ರೂಪಾಯಿ ಇಳಿಕೆ ಕಂಡಿದೆ.
ಬೆಳ್ಳಿ ಬೆಲೆ ಎಷ್ಟಿದೆ?
24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 2,100 ರೂಪಾಯಿ ಕುಸಿದು ಬಿದ್ದ ನಂತರ, ಪ್ರತಿ 100 ಗ್ರಾಂಗೆ 6,89,500 ರೂಪಾಯಿಗೆ ತಲುಪಿದೆ. ಅಲ್ಲದೆ 24 ಕ್ಯಾರೆಟ್ ಚಿನ್ನದ ಬೆಲೆ ಇದೀಗ ಪ್ರತಿ 10 ಗ್ರಾಂಗೆ 68,950 ರೂಪಾಯಿಗೆ ಮಾರಾಟ ಆಗ್ತಿದೆ. ಮತ್ತೊಂದು ಕಡೆ, ಬೆಳ್ಳಿ ಬೆಲೆಯಲ್ಲಿ 500 ರೂಪಾಯಿ ಏರಿಕೆ ಕಂಡು ಬಂದಿತ್ತು. ನಿನ್ನೆ ಬೆಳ್ಳಿ ಕೆಜಿಗೆ 84,500 ರೂಪಾಯಿ ಲೆಕ್ಕದಲ್ಲಿ ಮಾರಾಟ ಆಗಿತ್ತು. ಹಾಗಾದ್ರೆ ಇಂದು ಚಿನ್ನ & ಬೆಳ್ಳಿ ಬೆಲೆ ಮಾರುಕಟ್ಟೆಯಲ್ಲಿ ಏನಾಗಬಹುದು?
ಚಿನ್ನದ ಬೆಲೆ ಮತ್ತೆ ಇಳಿಕೆ?
ಈಗಿನ ಪರಿಸ್ಥಿತಿ ನೋಡುತ್ತಿದ್ದರೆ ಇಂದು ಕೂಡ ಚಿನ್ನದ ಬೆಲೆ ಮತ್ತೆ ಇಳಿಕೆ ಕಾಣುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಬಜೆಟ್-2024 ಮಂಡನೆ ಸಮಯದಲ್ಲಿ ಚಿನ್ನದ ಮೇಲಿನ ಕಸ್ಟಮ್ಸ್ ತೆರಿಗೆ ವಿನಾಯಿತಿ ಘೋಷಣೆ ಮಾಡಿದೆ. ಆ ನಂತರ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯನ್ನ ಕಾಣಲಾಗುತ್ತಿದೆ. ಕಳೆದ 1 ವಾರ ಅವಧಿಯಲ್ಲಿ ಚಿನ್ನ ಭಾರಿ ಕುಸಿತ ಕಂಡಿದೆ. ಈಗಲೂ ಆ ರೀತಿಯೇ ಚಿನ್ನ ಇಂದು ಮತ್ತೆ ಕುಸಿತ ಕಾಣುವ ನಿರೀಕ್ಷೆ ಇದೆ. ಆದರೆ ಚಿನ್ನ & ಬೆಳ್ಳಿ ಬೆಲೆ ಏನಾಯ್ತು? ಅನ್ನೋದನ್ನ ತಿಳಿಯಲು ಸ್ವಲ್ಪ ಹೊತ್ತು ಕಾದು ನೋಡಬೇಕಿದೆ.
ವರ್ಷದಿಂದ ವರ್ಷಕ್ಕೆ ಚಿನ್ನದ ಬೆಲೆ ಏರಿಕೆ!
ಕಳೆದ 15 ವರ್ಷಕ್ಕೆ ಹೋಲಿಕೆ ಮಾಡಿದರೆ ಚಿನ್ನದ ಬೆಲೆಯಲ್ಲಿ ಸಾಕಷ್ಟು ಬದಲಾವಣೆ ಆಗಿ ದೊಡ್ಡ ಮಟ್ಟದಲ್ಲಿ ಚಿನ್ನ ಏರಿಕೆ ಕಂಡಿದೆ. ಹಾಗೇ ಮುಂದಿನ ದಿನಗಳಲ್ಲಿ ಚಿನ್ನಕ್ಕೆ ಇನ್ನೂ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆಲ್ಲಾ ಕಾರಣ ಏನೆಂದರೆ ಭೂಮಿಯ ಒಳಗೆ ಸಿಗುತ್ತಿದ್ದ ಚಿನ್ನ ಭಾಗಶಃ ಕಡಿಮೆ ಆಗುತ್ತಾ ಬರುತ್ತಿದೆ. ಹೀಗಾಗಿ ಗಣಿಗಾರಿಕೆ ನಡೆಸುವ ಸಾಧ್ಯತೆ ಕೂಡ ಕ್ಷೀಣಿಸುತ್ತಿದೆ. ಇದು ಕೂಡ ಚಿನ್ನದ ಮೇಲೆ ಸಾಕಷ್ಟು ದೊಡ್ಡ ಪ್ರಮಾಣದ ಪರಿಣಾಮ ಬೀರುವ ಸಾಧ್ಯತೆ ಇದೆ.












Click it and Unblock the Notifications