Gold price today: ಮಾರುಕಟ್ಟೆಯಲ್ಲಿ ದಿಢೀರ್ ಏರಿಕೆ ಕಂಡ ಚಿನ್ನ, ಬೆಳ್ಳಿ ಬೆಲೆ, ಇಂದಿನ ರೇಟ್ ಎಷ್ಟು?
ಹಬ್ಬಗಳ ಸೀಸನ್ ಹತ್ತಿರ ಬರುತ್ತಿದ್ದಂತೆ ಆಭರಣ ಪ್ರಿಯರಿಗೆ ಈ ಹೆಣ್ಣುಮಕ್ಕಳಿಗೆ ಪ್ರತಿದಿನದ ಚಿನ್ನ ಮತ್ತು ಬೆಳ್ಳಿಯ ಬೆಲೆಗಳ ಮೇಲೆ ಕಣ್ಣಿಡುವುದು ಒಂದು ಅಭ್ಯಾಸವಾಗಿ ಬಿಟ್ಟಿರುತ್ತದೆ. ಮಾರುಕಟ್ಟೆಯಲ್ಲಿ ನಿರಂತರವಾಗಿ ಏರಿಳಿತ ಕಾಣುತ್ತಿರುವ ಬೆಲೆಬಾಳುವ ಲೋಹಗಳ ದರಗಳು ಇಂದು ಮತ್ತೊಂದು ತಿರುವು ಪಡೆದುಕೊಂಡಿವೆ.
ಚಿನ್ನದ ಅಂಗಡಿಗಳತ್ತ ಹೆಜ್ಜೆ ಹಾಕುವ ಮುನ್ನ ಅಥವಾ ಆಭರಣಗಳ ಮೇಲೆ ಹೂಡಿಕೆ ಮಾಡುವ ಮುನ್ನ ಇಂದಿನ ಬೆಲೆಗಳನ್ನ ತಿಳಿದುಕೊಳ್ಳಿ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವ ಹಾಗೂ ದೇಶೀಯ ಬೇಡಿಕೆಯ ಪರಿಣಾಮವಾಗಿ ಇಂದು ಚಿನ್ನದ ದರದಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ.

ವಿಶೇಷವಾಗಿ, ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆಯನ್ನು ಗಮನಿಸುವುದಾದರೆ, ಆಭರಣ ಖರೀದಿದಾರರಿಗೆ ತುಸು ನಿರಾಸೆ ಮೂಡಿಸುವಂತಹ ಏರಿಕೆ ಕಂಡುಬಂದಿದೆ.
ನಿನ್ನೆಯ ದರಗಳಿಗೆ ಹೋಲಿಸಿದರೆ ಇಂದು ಚಿನ್ನದ ದರದಲ್ಲಿ ಸ್ಪಷ್ಟ ಏರಿಕೆ ದಾಖಲಾಗಿದೆ. ನಿನ್ನೆ (ಸೆಪ್ಟೆಂಬರ್ 18) ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 14,155 ರೂಪಾಯಿ ಇತ್ತು, ಆದರೆ ಇಂದು (ಸೆಪ್ಟೆಂಬರ್ 19) ಅದು 14,285 ರೂಪಾಯಿಗೆ ಏರಿಕೆಯಾಗಿದೆ. ಅಂದರೆ ಕೇವಲ ಒಂದೇ ದಿನದಲ್ಲಿ ಪ್ರತಿ ಗ್ರಾಂಗೆ 130 ರೂಪಾಯಿಗಳಷ್ಟು ದುಬಾರಿಯಾಗಿದೆ. ಅದೇ ರೀತಿ, 24 ಕ್ಯಾರಟ್ ಚಿನ್ನವು ಕೂಡ ನಿನ್ನೆ 15,442 ರೂ. ಗಳಿಂದ ಇಂದು 15,584 ರೂ. ಗಳಿಗೆ ಏರಿಕೆಯಾಗಿದೆ.
ಇನ್ನೂ, ಈ ಬೆಳ್ಳಿ ವಿಚಾರಕ್ಕೆ ಬಂದರೆ, ಬೆಳ್ಳಿ ಕೂಡ ಮಾರುಕಟ್ಟೆಯಲ್ಲಿ ತನ್ನ ಹೊಳಪನ್ನು ಹೆಚ್ಚಿಸಿಕೊಂಡಿದ್ದು, ಇಂದು ಪ್ರತಿ ಗ್ರಾಂಗೆ 255 ರೂಪಾಯಿಯಂತೆ, 1 ಕೆಜಿ ಬೆಳ್ಳಿಗೆ 2,55,000 ರೂಪಾಯಿಗಳಿಗೆ ವಹಿವಾಟು ನಡೆಸುತ್ತಿದೆ. ನಿನ್ನೆಗೆ ಹೋಲಿಸಿದರೆ ಬೆಳ್ಳಿ ಮಾರುಕಟ್ಟೆಯಲ್ಲಿ ದೃಢವಾದ ಬೇಡಿಕೆಯನ್ನು ಕಾಯ್ದುಕೊಂಡಿದೆ.
ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲೂ ಸಹ ಚಿನ್ನ ಮತ್ತು ಬೆಳ್ಳಿ ವಹಿವಾಟು ಸಕಾರಾತ್ಮಕವಾಗಿ ಸಾಗುತ್ತಿದ್ದು, ಹೂಡಿಕೆದಾರರು ಜಾಗತಿಕ ವಿದ್ಯಮಾನಗಳ ಮೇಲೆ ಕಣ್ಣಿಟ್ಟಿದ್ದಾರೆ. ಡಾಲರ್ ಮೌಲ್ಯದಲ್ಲಿನ ಏರಿಳಿತ ಹಾಗೂ ಅಂತಾರಾಷ್ಟ್ರೀಯ ಆರ್ಥಿಕ ನೀತಿಗಳು MCX ನಲ್ಲಿ ವಹಿವಾಟಿನ ದಿಕ್ಕನ್ನು ನಿರ್ಧರಿಸುತ್ತಿವೆ.
ದೇಶದ ಪ್ರಮುಖ ನಗರಗಳಲ್ಲಿ ಇಂದಿನ (ಸೆಪ್ಟೆಂಬರ್ 19, 2026) 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆಗಳ ಪಟ್ಟಿ ಈ ಕೆಳಗಿನಂತಿದೆ:
* ಬೆಂಗಳೂರು - 14,285 ರೂಪಾಯಿ
* ದೆಹಲಿ - 14,300 ರೂಪಾಯಿ
* ಚೆನ್ನೈ - 14,285 ರೂಪಾಯಿ
* ಮುಂಬೈ - 14,285 ರೂಪಾಯಿ
* ಹೈದರಾಬಾದ್ - 14,285 ರೂಪಾಯಿ
* ಅಹಮದಾಬಾದ್ - 14,290 ರೂಪಾಯಿ
* ಪುಣೆ - 14,285 ರೂಪಾಯಿ
* ಕೋಲ್ಕತ್ತಾ - 14,285 ರೂಪಾಯಿ
ಇಂದಿನ ಮಾರುಕಟ್ಟೆ ವರದಿಯ ಪ್ರಕಾರ ಚಿನ್ನದ ದರದಲ್ಲಿ ಮತ್ತೆ ಏರಿಕೆ ಕಂಡುಬಂದಿರುವುದು ಆಭರಣ ಖರೀದಿದಾರರಿಗೆ ಸ್ವಲ್ಪ ಹೊರೆಯಾಗಿ ಪರಿಣಮಿಸಿದೆ. ದೇಶದ ಬಹುತೇಕ ಎಲ್ಲಾ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 14,285 ರಿಂದ 14,300 ರೂಪಾಯಿ. ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ.
ವಿಶೇಷವಾಗಿ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆಯ ಏರಿಕೆಯು ಸ್ಥಳೀಯ ಮಾರುಕಟ್ಟೆಯಲ್ಲಿನ ಬೇಡಿಕೆ ಮತ್ತು ಜಾಗತಿಕ ಆರ್ಥಿಕ ಬದಲಾವಣೆಗಳ ಸ್ಪಷ್ಟ ಪ್ರತಿಬಿಂಬವಾಗಿದೆ. ಹಬ್ಬದ ದಿನಗಳು ಹತ್ತಿರವಿರುವುದರಿಂದ ಮುಂದಿನ ದಿನಗಳಲ್ಲಿ ಈ ಬೆಲೆಗಳು ಮತ್ತಷ್ಟು ಬದಲಾವಣೆಗಳಾಗುವ ಸಾಧ್ಯತೆ ಹೆಚ್ಚಿದೆ.
ಗಮನಿಸಿ: ಈ ಮೇಲೆ ನೀಡಿರುವ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಜಿಎಸ್‌ಟಿ ಮತ್ತು ಮೇಕಿಂಗ್ ಜಾರ್ಜ್ಸ್ ಸೇರಿಸಿಲ್ಲ. ಆಭರಣಗಳನ್ನ ಖರೀದಿಸಿದಾಗ ಈ ಮೂಲ ಬೆಲೆಯಲ್ಲಿ ಸ್ವಲ್ಪ ಬದಲಾವಣೆಯಾಗಬಹುದು.


Click it and Unblock the Notifications
