Gold Silver Price: ದಾಖಲೆ ಬರೆದ ಚಿನ್ನದ ಬೆಲೆ- ಬೆಂಗಳೂರು, ದೆಹಲಿ ಸೇರಿದಂತೆ ದೇಶದಾದ್ಯಂತ ಬಂಗಾರದ ಬೆಲೆ ತಿಳಿಯಿರಿ

ಬೆಂಗಳೂರು, ಫೆಬ್ರವರಿ 05: ಕಳೆದ ಎರಡು ದಿನ ಚಿನ್ನದ ಬೆಲೆಯಲ್ಲಿ ಸತತ 1 ಸಾವಿರ ರೂ ಏರಿಕೆ ಆಗುವ ಮೂಲಕ ಚಿನ್ನ ಭಾರೀ ದುಬಾರಿಯಾಗಿದೆ. ಕೇಂದ್ರ ಬಜೆಟ್‌ ಬಳಿಕವೂ ಸಹ ಚಿನ್ನದ ಬೆಲೆ ಹೆಚ್ಚಾಗಿದೆ. 22 ಕ್ಯಾರೆಟ್ 10 ಗ್ರಾಂ ಬೆಲೆ 80 ಸಾವಿರ ರೂಪಾಯಿಯ ಸಮೀಪಿಸುತ್ತಿದ್ದರೆ, 24 ಕ್ಯಾರೆಟ್ ಬೆಲೆ ಈಗಾಗಲೇ 86,240 ರೂ ಆಗಿದೆ

ನಿನ್ನೆಯಷ್ಟೇ(ಮಂಗಳವಾರ) ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು(ಬುಧವಾರ) ಏರಿಕೆಯಾಗುವ ಮೂಲಕ ಆಭರಣ ಪ್ರಿಯರಿಕೆ ಶಾಕ್‌ ಎದುರಾಗಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ ಬೆಲೆ 1050 ರೂ. ಏರಿಕೆಯಾಗಿದ್ದು, ಇಂದಿನ ಬೆಲೆ 7810 ರೂ. ಆಗಿದೆ. ನಿನ್ನೆ 24 ಕ್ಯಾರೆಟ್ ಚಿನ್ನಕ್ಕೆ ಗ್ರಾಂಗೆ 44 ರೂ. ಹಾಗೂ 22 ಕ್ಯಾರೆಟ್ ಚಿನ್ನಕ್ಕೆ ಗ್ರಾಂಗೆ 40 ಇಳಿಕೆಯಾಗಿತ್ತು. ಆದರೆ ಇಂದು 22 ಕ್ಯಾರೆಟ್ ಚಿನ್ನಕ್ಕೆ 105 ಹಾಗೂ 24 ಕ್ಯಾರೆಟ್ ಚಿನ್ನಕ್ಕೆ 115 ರೂ. ಏರಿಕೆಯಾಗಿದೆ.

Gold And Silver Price Today Check Latest Gold Rate On february 5th

ದೇಶೀಯ ಮಾರುಕಟ್ಟೆಯಲ್ಲಿ (ಫೆಬ್ರವರಿ 5) ರಂದು ರಂದು 22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆಯಲ್ಲಿ 95 ರೂಪಾಯಿ ಏರಿಕೆ ಆಗಿದೆ. ಹೀಗಾಗಿ ಇಂದಿನ ಬೆಲೆ 1 ಗ್ರಾಂ ಗೆ 7,905 ರೂ ಇದೆ. 24 ಕ್ಯಾರೆಟ್ ಚಿನ್ನ ಕೂಡಾ ದರ 104 ರೂ ಏರಿಕೆ ಆಗಿದ್ದು, 1 ಗ್ರಾಂ ಚಿನ್ನದ ಬೆಲೆ 8624 ರೂಪಾಯಿ ಆಗಿದೆ.

ನಿನ್ನೆ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಗಣನೀಯ ಏರಿಕೆ ಕಂಡಿದ್ದು, 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 86,240 ರೂ ಆಗಿದೆ. ಮಂಗಳವಾರದಿಂದ ಬುಧವಾರಕ್ಕೆ ಚಿನ್ನದ ದರದಲ್ಲಿ ಏರಿಕೆ ಆಗಿದೆ. ಸೋಮವಾರ 10 ಗ್ರಾಂ ಚಿನ್ನದ ಬೆಲೆ 84,050 ರೂ.ಗಳಷ್ಟಿತ್ತು. ಆದರೆ, ಇಂದು 24 ಕ್ಯಾರೆಟ್​ 10 ಗ್ರಾಂ ಚಿನ್ನಕ್ಕೆ ದಾಖಲೆಯ ಗರಿಷ್ಠ ಮಟ್ಟದಲ್ಲಿ 1150 ರೂ. ಏರಿಕೆಯಾಗಿದೆ. ಇಂದಿನ ಮಾರುಕಟ್ಟೆಯಲ್ಲಿ 24 ಕ್ಯಾರೆಟ್​ನ 10 ಗ್ರಾಂ ಚಿನ್ನ ಬೆಲೆ 85,200 ರೂ. ಆಗಿದೆ.

ನವದೆಹಲಿಯಲ್ಲಿ ಪ್ರತಿ 10 ಗ್ರಾಂಗೆ 83,590 ರೂ.ಗಳಾಗಿದ್ದರೆ, ಮುಂಬೈನಲ್ಲಿ ಬೆಲೆ ರೂ. 83,730 ರೂ.ಗಳಷ್ಟಿತ್ತು. ಕೋಲ್ಕತ್ತಾದಲ್ಲಿ ದರ ರೂ. 83,620 ರಷ್ಟಿದ್ದರೆ, ಬೆಂಗಳೂರಿನಲ್ಲಿ ದರ ರೂ. 83,800 ದಾಟಿದೆ. ಚೆನ್ನೈ ನಲ್ಲಿ 83,980ರೂಪಾಯಿ ಬೆಲೆ ಇದ್ದು, ಚೆನ್ನೈ ಅತ್ಯಧಿಕ ದರವಿದೆ.

ದಿನದಿಂದ ದಿನಕ್ಕೆ ಬಂಗಾರದ ಬೆಲೆ ಏರಿಕೆಯಾಗುವ ಮೂಲಕ ಆಭರಣ ಪ್ರಿಯರಿಗೆ ಶಾಕ್‌ ಕೊಟ್ಟಿದೆ. ಜನವರಿ 1 ರಂದು 7,150 ರೂ ನಷ್ಟಿದ್ದ ಚಿನ್ನದ ಬೆಲೆ ಜನವರಿ 31 ಕ್ಕೆ 7,731 ರೂ ಆಗಿತ್ತು. ಫೆಬ್ರವರಿ ತಿಂಗಳಲ್ಲಿ ಮತ್ತೆ ಏರಿಕೆ ಪರ್ವ ಶುರುವಾಗಿದ್ದು, 8 ಸಾವಿರ ರೂ ದಾಟಲಿದೆ. ಚಿನ್ನದಲ್ಲಿ ಭಾರೀ ಬೆಲೆ ಏರಿಕೆ ಆಗುತ್ತಿದ್ದು,ಜನಸಾಮಾನ್ಯರಿಗೆ ಬಿಸಿ ತುಪ್ಪದಂತೆ ಪರಿಣಮಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+