Gold Price on September 5: ಬಂಗಾರ ಕೊಳ್ಳಲು ಇದೇ ಹೇಳಿ ಮಾಡಿಸಿದ ಸಮಯ: ಸೆಪ್ಟೆಂಬರ್ 5ರ ಚಿನ್ನದ ದರಪಟ್ಟಿ
Gold Price on September 5: ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲೇ ಇರುತ್ತದೆ. ಅದರಲ್ಲೂ ಶ್ರಾವಣ ಮಾಸದ ಆರಂಭದಿಂದಲೂ ಕೊನೆವರೆಗೂ ಬೆಲೆ ಭರ್ಜರಿ ಇಳಿಕೆ ಆಗುತ್ತಲೇ ಬಂದಿತ್ತು. ಹಾಗಾದ್ರೆ, ಇಂದು (ಸೆಪ್ಟೆಂಬರ್ 5) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬಂಗಾರ ದರಗಳ ವಿವರ: ನಿನ್ನೆ (ಸೆಪ್ಟೆಂಬರ್ 4) ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಕಡೆಗಳಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 97,950 ರೂಪಾಯಿ ಇದ್ದರೆ, ಇಂದು (ಸೆಪ್ಟೆಂಬರ್ 5) 98,650 ರೂಪಾಯಿ ಆಗಿದೆ. 10 ಗ್ರಾ (24 ಕ್ಯಾರೆಟ್) ನಿನ್ನೆ ದರ 1,06,860 ರೂಪಾಯಿ ಇತ್ತು. ಇನ್ನು ಇಂದು 1,07,620 ರೂಪಾಯಿ ಇದೆ. ಹಾಗಾದ್ರೆ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ಉಳಿದ ದೇಶದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 78,920 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 86,096 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 98,650 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 1,07,620 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 98,650 ರೂಪಾಯಿ
* ಚೆನ್ನೈ - 98,650 ರೂಪಾಯಿ
* ಮುಂಬೈ - 98,650 ರೂಪಾಯಿ
* ಕೋಲ್ಕತ್ತಾ - 98,650 ರೂಪಾಯಿ
* ನವದೆಹಲಿ - 98,800 ರೂಪಾಯಿ
* ಹೈದರಾಬಾದ್ - 98,650 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 1,07,620 ರೂಪಾಯಿ
* ಚೆನ್ನೈ - 1,07,620 ರೂಪಾಯಿ
* ಮುಂಬೈ - 1,07,620 ರೂಪಾಯಿ
* ಕೋಲ್ಕತ್ತಾ - 1,07,620 ರೂಪಾಯಿ
* ನವದೆಹಲಿ - 1,07,770 ರೂಪಾಯಿ
* ಹೈದರಾಬಾದ್ - 1,07,620 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ)
* ಬೆಂಗಳೂರು - 1,26,000 ರೂಪಾಯಿ (1,000 ಇಳಿಕೆ)
* ಚೆನ್ನೈ - 1,36,000 ರೂಪಾಯಿ (1,000 ಇಳಿಕೆ)
* ಮುಂಬೈ - 1,26,000 ರೂಪಾಯಿ (1,000 ಇಳಿಕೆ)
* ಕೋಲ್ಕತ್ತಾ - 1,26,000 ರೂಪಾಯಿ (1,000 ಇಳಿಕೆ)
* ನವದೆಹಲಿ - 1,26,000 ರೂಪಾಯಿ (1,000 ಇಳಿಕೆ)
* ಹೈದರಾಬಾದ್ - 1,36,000 ರೂಪಾಯಿ (1,000 ಇಳಿಕೆ)
ಬಂಗಾರ, ಬೆಳ್ಳಿ ದರಪಟ್ಟಿ: ಹಬ್ಬಗಳು ಹತ್ತಿರ ಬರುತ್ತಿದ್ದಂತೆ ಬಂಗಾರ, ಬೆಳ್ಳಿ, ಕೊಳ್ಳುವವರ ಸಂಖ್ಯೆ ತುಸು ಹೆಚ್ಚಾಗಿರುತ್ತದೆ. ಇನ್ನೂ ಈಗಾಗಲೇ ಶ್ರಾವಣ ಮಾಸ ಮುಗಿದಿದ್ದು, ದಸರಾ, ದೀಪಾವಳಿ ಹಬ್ಬಗಳು ಎಂಟ್ರಿ ಕೊಡಲಿವೆ. ಈ ಹಿನ್ನೆಲೆ ಈ ವೇಳೆಯೇ ಬಂಗಾರ ಕೊಳ್ಳುವವರ ಸಂಖ್ಯೆ ತುಸು ಹೆಚ್ಚಾಗಿರುತ್ತದೆ. ಮುಂದಿನ ದಿನಗಳಲ್ಲಿ ಬಂಗಾರ ದರ ಮತ್ತಷ್ಟು ಏರಿಕೆಯಾದರೂ ಆಶ್ಚರ್ಯವಿಲ್ಲ. ಆದ್ದರಿಂದ ಈಗಲೇ ಕೊಂಡುಕೊಳ್ಳುವುದಕ್ಕೆ ಉತ್ತಮ ಸಮಯ.
ಸಾಮಾನ್ಯ ದಿನಗಳಲ್ಲೂ ಸಹ ಬಂಗಾರ ಕೊಳ್ಳುವವರ ಸಂಖ್ಯೆಯೇನು ಕಡಿಮೆ ಇರುವುದಿಲ್ಲ. ದರ ಕಡಿಮೆಯಿರಲಿ, ಬಿಡಲಿ ಆಭರಣಗಳನ್ನು ಕಷ್ಟದ ಕಾಲಕ್ಕೆ ಆಗುತ್ತವೆಂದು ಕೊಂಡುಕೊಳ್ಳುತ್ತಲಿರುತ್ತಾರೆ. ಹಬ್ಬ, ಹರಿ ದಿನಗಳಲ್ಲಂತೂ ತುಸು ಹೆಚ್ಚಿನ ಪ್ರಮಾಣದಲ್ಲಿ ಬಂಗಾರ ಕೊಳ್ಳುತ್ತಾರೆ. ಈಗಾಗಲೇ ಶ್ರಾವಣ ಮಾಸ ಆರಂಭದಲ್ಲಿ ದರ ಕಡಿಮೆಯಾಗುತ್ತಾ ಬಂದಿತ್ತು.












Click it and Unblock the Notifications