Gold Price: ಆಭರಣ ಪ್ರಿಯರೇ ಗಮನಿಸಿ... 91 ಸಾವಿರ ರೂಪಾಯಿ ಏರಿಕೆ ಕಂಡ ಚಿನ್ನದ ಬೆಲೆ!
ಚಿನ್ನ, ಬೆಳ್ಳಿ ಖರೀದಿ ಮಾಡಲು & ಮದುವೆ ಸೀಸನ್ ಆರಂಭಕ್ಕೆ ಮೊದಲು ಚಿನ್ನದ ಆರ್ಡರ್‌ನ ಕೊಡಲು ಕಾಯುತ್ತಿದ್ದವರಿಗೆ ಇಂದು ಶಾಕ್ ಸಿಕ್ಕಿದೆ. ಆಭರಣ ಪ್ರಿಯರಿಗೆ ಚಿನ್ನದ ಮಾರುಕಟ್ಟೆ ಇಂದು ಆಘಾತ ನೀಡಿದೆ. ಸತತವಾಗಿ ಇಳಿಕೆ ಕಾಣುತ್ತಿದ್ದ ಚಿನ್ನ & ಬೆಳ್ಳಿ ಬೆಲೆ ಇಂದು ದಿಢೀರ್ 91 ಸಾವಿರ ರೂಪಾಯಿ ಏರಿಕೆ ಕಂಡಿದೆ. ಹಾಗಾದ್ರೆ ಚಿನ್ನದ ಬೆಲೆ ಏರಿಕೆ ಬಳಿಕ ಇಂದು ಬೆಲೆ ಎಷ್ಟಿದೆ? ಹಾಗೇ ಬೆಳ್ಳಿ ಬೆಲೆ ಏರಿಕೆ ನಂತರ ಎಷ್ಟು ರೂಪಾಯಿ ಆಗಿದೆ? ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ಚಿನ್ನದ ಬೆಲೆ ಮತ್ತೆ ದಿಢೀರ್ ಆಕಾಶಕ್ಕೆ ಮುಟ್ಟುತ್ತಿದೆ, ಕಳೆದ ಕೆಲವು ದಿನಗಳಿಂದ ಚಿನ್ನವು ನಿರಂತರವಾಗಿ ಕುಸಿತ ಕಾಣುತ್ತಿತ್ತು. ಆದರೆ ಇದೀಗ ದಿಢೀರ್ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ದಸರಾ & ದೀಪಾವಳಿ ಹಬ್ಬ ಮುಗಿದಿದ್ದು, ಮತ್ತೊಮ್ಮೆ ಮದುವೆ ಸೀಸನ್ ಆರಂಭ ಆಗಲಿದೆ. ಯಾಕಂದ್ರೆ ಧನುರ್ಮಾಸ ಆರಂಭಕ್ಕೆ ಮೊದಲೇ ಲಕ್ಷಾಂತರ ಮದುವೆಗಳು ನಡೆಯುತ್ತವೆ. ಹೀಗಾಗಿ ಜನರು ಕೂಡ ಮದುವೆಗೆ ಮೊದಲೇ ಬಂಗಾರ ಆರ್ಡರ್ ಮಾಡಲು, ದೊಡ್ಡ ಪ್ಲಾನ್ ಮಾಡಿದ್ದರು. ಆದರೆ ಇಂದು ಒಂದೇ ದಿನ ಚಿನ್ನ ಬೆಲೆ, 91 ಸಾವಿರ ರೂಪಾಯಿ ಏರಿಕೆ ಕಂಡು....

ಚಿನ್ನ & ಬೆಳ್ಳಿ ಬೆಲೆ ಎಷ್ಟಿದೆ?
ಬಂಗಾರಕ್ಕೆ ಭರ್ಜರಿ ಬೆಲೆ ಬಂದಿದ್ದು, ಅದರಲ್ಲೂ 2024ರ ಆರಂಭದಲ್ಲಿ ಬಂಗಾರದ ಬೆಲೆ ಏರಿಕೆ ಕಾಣುತ್ತಿದ್ದ ರೀತಿ ನೋಡಿದರೆ ಶೀಘ್ರದಲ್ಲೇ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 1,00,000 ರೂಪಾಯಿ ತಲುಪಲಿದೆ ಎನ್ನಲಾಗಿತ್ತು. ಆದರೆ ನಂತರ ಕುಸಿತ ಕಂಡ ಚಿನ್ನ & ಬೆಳ್ಳಿ ಬೆಲೆ ದೀಪಾವಳಿಗೆ ಮತ್ತೆ ಭಾರಿ ಏರಿಕೆ ಕಂಡಿತ್ತು. 80 ಸಾವಿರ ರೂಪಾಯಿಗೆ ತಲುಪಿದ್ದ 24 ಕ್ಯಾರೆಟ್ ಚಿನ್ನದ ಬೆಲೆ ಕೆಲವು ದಿನಗಳಿಂದ ಮತ್ತೆ ಕುಸಿತ ಕಾಣುತ್ತಿತ್ತು. ಆದರೆ ಇಂದು ಒಂದೇ ದಿನ ಚಿನ್ನದ ಬೆಲೆ, ಬರೋಬ್ಬರಿ 91 ಸಾವಿರ ರೂಪಾಯಿ ಏರಿಕೆ ಕಂಡು....
ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ!
ಹೌದು, ಇದೀಗ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 1 ಕೆ.ಜಿ.ಗೆ 91 ಸಾವಿರ ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 910 ರೂಪಾಯಿ ಏರಿಕೆ ಕಂಡಿದೆ. ಹೀಗಾಗಿ ಇದೀಗ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 79,470 ರೂ. ಆಗಿದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ ಬರೋಬ್ಬರಿ 7,94,700 ರೂಪಾಯಿ ಆಗಿದೆ. ಈ ಮೂಲಕ ಚಿನ್ನದ ಬೆಲೆಯಲ್ಲಿ ಇಂದು ಒಂದೇ ದಿನ ಭಾರಿ ದೊಡ್ಡ ಪ್ರಮಾಣದ ಏರಿಕೆ ಕಂಡು ಬಂದಿದೆ.
94,000 ರೂಪಾಯಿ ತಲುಪಿದ ಬೆಳ್ಳಿ!
ಆಭರಣ ಚಿನ್ನ ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಏರಿಕೆಯನ್ನ ಕಂಡು ಪ್ರತಿ 100 ಗ್ರಾಂ ಆಭರಣ ಚಿನ್ನದ ಬೆಲೆ ಇದೀಗ 8,500 ರೂಪಾಯಿ ಏರಿಕೆ ಆಗಿದೆ. ಈ ಮೂಲಕ ಪ್ರತಿ 10 ಗ್ರಾಂ ಆಭರಣ ಚಿನ್ನ ಬೆಲೆ ಈಗ 850 ರೂಪಾಯಿ ಏರಿಕೆ ಆಗಿದೆ. ಆಭರಣ ಚಿನ್ನ ಬೆಲೆ ಏರಿಕೆ ಬಳಿಕ ಈಗ ಪ್ರತಿ 10 ಗ್ರಾಂಗೆ 72,850 ರೂಪಾಯಿಗೆ ಮಾರಾಟ ಆಗ್ತಿದೆ. ಮತ್ತೊಂದು ಕಡೆ ಬೆಳ್ಳಿಯ ಬೆಲೆಯಲ್ಲಿ 1000 ರೂಪಾಯಿ ಏರಿಕೆ ಕಂಡು 94,000 ರೂಪಾಯಿ ಪ್ರತಿ ಕೆಜಿಗೆ ಮಾರಾಟ ಆಗುತ್ತಿದೆ.
ಚಿನ್ನ ಬಳಕೆಗೆ 5000 ವರ್ಷಗಳ ಇತಿಹಾಸ!
ಮನುಷ್ಯ ನಾಗರಿಕತೆ ಕಡೆಗೆ ಹೆಜ್ಜೆ ಹಾಕಿದ ನಂತರ ಚಿನ್ನ ಹೆಚ್ಚಾಗಿ ಬಳಸತೊಡಗಿದ. ಅದ್ರಲ್ಲೂ ಚಿನ್ನ ಬಳಕೆಗೆ ಸುಮಾರು 5000 ವರ್ಷಗಳ ದೊಡ್ಡ ಇತಿಹಾಸವಿದೆ. ಹೀಗೆ ಚಿನ್ನವನ್ನ ಮನುಷ್ಯ ಸಾವಿರಾರು ವರ್ಷಗಳಿಂದ ಬಳಕೆ ಮಾಡಿಕೊಂಡು ಬರುತ್ತಿದ್ದಾನೆ. ಹೀಗಾಗಿ ಈ ಹೊತ್ತಿಗು ಚಿನ್ನಕ್ಕೆ ಭಾರಿ ದೊಡ್ಡ ಗೌರವ & ಬೆಲೆ ಇದೆ. ಈ ರೀತಿ ಯಾವುದೇ ಲೋಹಕ್ಕೆ ಕೂಡ ಚಿನ್ನದಷ್ಟು ಮಾನ್ಯತೆ ನೀಡುವುದಿಲ್ಲ. ಆದರೆ ಚಿನ್ನಕ್ಕೆ ಮಾತ್ರ ಅತೀ ಹೆಚ್ಚು ಬೆಲೆ ಇದ್ದು, ಚಿನ್ನ ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿ ಆಗುವುದು ಗ್ಯಾರಂಟಿ ಎನ್ನುತ್ತಾರೆ ತಜ್ಞರು.












Click it and Unblock the Notifications