Gold Price on 12th May: ಗ್ರಾಹಕರಿಗೆ ಬಿಸಿ ತುಪ್ಪುವಾದ ಬಂಗಾರ: ಚಿನ್ನ ಬೆಳ್ಳಿ ಬೆಲೆ ಮತ್ತೆ ಏರಿಕೆ!
ಅಕ್ಷಯ ತೃತೀಯ ಹಬ್ಬದಲ್ಲಿ ಕೊಂಚ ಕಡಿಮೆಯಾಗಿದ್ದ ಚಿನ್ನ ಬೆಳ್ಳಿ ಬೆಲೆ ಮತ್ತೆ ಗ್ರಾಹಕರಿಗೆ ಬಿಸಿ ತುಪ್ಪವಾಗಿದೆ. ವಾರಾಂತ್ಯದಲ್ಲಿ ಚಿನ್ನಾಭರಣಗಳ ಮಾರಾಟ ಸಾಮಾನ್ಯವಾಗಿ ಎಂದಿಗಿಂತ ತುಸು ಹೆಚ್ಚಾಗಿರುತ್ತದೆ. ಆದರೆ ಹಬ್ಬದ ಹೊರತಾಗಿ ಕಳೆದ ಹತ್ತು ದಿನಗಳಿಂದ ಬಂಗಾರ ಬೆಲೆ ಗಗನಕ್ಕೇರುತ್ತಲೇ ಇದ್ದರಿಂದ ಗ್ರಾಹಕರು ಬೇಸರಗೊಂಡಿದ್ದಾರೆ.
ಇದು ಸಾಮಾನ್ಯ ಜನರಿಗೆ ಕಷ್ಟವಾಗಿದೆ. ಇನ್ನೇನು ಮುಂದಿನ ದಿನಗಳಲ್ಲಿ ಮದುವೆ, ಶುಭ ಕಾರ್ಯಗಳು ಆರಂಭವಾಗುತ್ತವೆ. ಇದಕ್ಕಾಗಿ ತಯಾರಿಯಲ್ಲಿರುವ ಜನರಿಗೆ ಬಂಗಾರದ ಬೆಲೆ ಚಿಂತೆಗೀಡು ಮಾಡಿದೆ. ಚಿನ್ನದ ಬೆಲೆ ಕಡಿಮೆಯಾಗಿದ್ದಾಗ ಖರೀದಿ ಮಾಡಿಬಿಡುವುದಾ? ಅಥವಾ ಇನ್ನೂ ಕಡಿಮೆಯಾಗುವವರೆಗೂ ಕಾಯುವುದಾ ಎನ್ನುವ ಗೊಂದಲದಲ್ಲಿ ಗ್ರಾಹಕರು ಇದ್ದಾರೆ.

ಆದರೆ ನಿತ್ಯ ಚಿನ್ನದ ಬೆಲೆ ಕಡಿಮೆಯಾಗುವುದಕ್ಕಿಂತ ಹೆಚ್ಚಾಗುವುದು ಜಾಸ್ತಿಯಾಗಿದೆ. ಹೀಗಾಗಿ ಚಿನ್ನಾಭರಣ ಪ್ರಿಯರು ನಿರಾಸೆಗೊಂಡಿದ್ದಾರೆ. ಹಾಗಾದರೆ ಇವತ್ತಿನ (ಮೇ 12) ಚಿನ್ನ ಬೆಳ್ಳಿ ದರ ಹೇಗಿದೆ ಎಂದು ತಿಳಿಯೋಣ.
ಭಾರತದಲ್ಲಿ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 67,000 ರೂಪಾಯಿ ಇದ್ದರೆ, 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆ 73,090 ರೂಪಾಯಿ ಇದೆ. ಬೆಳ್ಳಿ ಬೆಲೆ 100 ಗ್ರಾಂಗೆ 8650 ರೂಪಾಯಿ ಇದೆ. ಇನ್ನೂ ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 67,000 ರೂಪಾಯಿ ಇದ್ದರೆ, ಬೆಳ್ಳಿ ಬೆಲೆ 100 ಗ್ರಾಂಗೆ 8,475 ರೂಪಾಯಿ ಇದೆ. ಹಾಗಾದರೆ ಇಂದು (ಮೇ 12) ಬೆಂಗಳೂರು ಸೇರಿದಂತೆ ಭಾರತದ ಹಲವೆಡೆ ಚಿನ್ನ ಬೆಳ್ಳಿ ಬೆಲೆ ಹೇಗಿದೆ ಎಂದು ತಿಳಿಯೋಣ.
*ಬೆಂಗಳೂರಿನಲ್ಲಿ ಚಿನ್ನ ಬೆಳ್ಳಿ ಬೆಲೆ ಮೇ 12ರಂದು ಹೇಗಿದೆ ಎಂದು ನೋಡುವುದಾದರೆ- ಬೆಂಗಳೂರಿನಲ್ಲಿ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 67,000 ರೂಪಾಯಿ ಇದೆ. ಇನ್ನೂ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 73,090 ರೂಪಾಯಿ ಇದೆ. ಜೊತೆಗೆ ಬೆಳ್ಳಿ ಬೆಲೆ 10 ಗ್ರಾಂಗೆ 847 ರೂಪಾಯಿ ಇದೆ.

*ಭಾರತದಲ್ಲಿ ಚಿನ್ನ ಬೆಳ್ಳಿ ಬೆಲೆ ಮೇ 12ರಂದು ಹೇಗಿದೆ ಎಂದು ನೋಡುವುದಾದರೆ- 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 67,000 ರೂಪಾಯಿ ಇದೆ. ಇನ್ನೂ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 73,090 ರೂಪಾಯಿ ಇದೆ. ಜೊತೆಗೆ ಬೆಳ್ಳಿ ಬೆಲೆ 10 ಗ್ರಾಂಗೆ 865 ರೂಪಾಯಿ ಇದೆ.
*ವಿವಿಧ ನಗರಗಳಲ್ಲಿ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ ಹೇಗಿದೆ ಎಂದು ತಿಳಿಯುವುದಾದರೆ- ದೆಹಲಿಯಲ್ಲಿ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 67,150 ರೂಪಾಯಿ ಇದ್ದರೆ, ಕೋಲ್ಕತಾದಲ್ಲಿ 67,000 ರೂಪಾಯಿ, ಕೇರಳದಲ್ಲಿ 67,000 ರೂಪಾಯಿ ಇದೆ. ಇನ್ನೂ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 67,000 ರೂಪಾಯಿ ಇದೆ.
ಚೆನ್ನೈನಲ್ಲಿ 67,050 ರೂಪಾಯಿ, ಮುಂಬೈನಲ್ಲಿ 67,000 ರೂಪಾಯಿ, ಅಹ್ಮದಾಬಾದ್‌ನಲ್ಲಿ 67,050 ರೂಪಾಯಿ, ಜೈಪುರದಲ್ಲಿ 67,150 ರೂಪಾಯಿ, ಲಕ್ನೋದಲ್ಲಿ 67,150 ರೂಪಾಯಿ ಇದ್ದರೆ, ಭುವನೇಶ್ವರದಲ್ಲಿ 67,000 ರೂಪಾಯಿ ಇದೆ.
*ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಹೇಗಿದೆ ಎಂದು ತಿಳಿಯುವುದಾದರೆ- ಮುಂಬೈನಲ್ಲಿ 8,650 ರೂ, ದೆಹಲಿಯಲ್ಲಿ 8,650 ರೂ, ಬೆಂಗಳೂರಿನಲ್ಲಿ 8,475 ರೂಪಾಯಿ, ಕೋಲ್ಕತಾ: 8,650 ರೂಪಾಯಿ ಇದ್ದರೆ, ಕೇರಳದಲ್ಲಿ 9,000 ರೂಪಾಯಿ ಇದೆ.
ಅಹ್ಮದಾಬಾದ್‌ನಲ್ಲಿ 8,650 ರೂಪಾಯಿ ಇದ್ದರೆ, ಚೆನ್ನೈನಲ್ಲಿ 9,000 ರೂಪಾಯಿ ಇದೆ, ಜೈಪುರದಲ್ಲಿ 8,650 ರೂಪಾಯಿ ಇದ್ದರೆ, ಲಕ್ನೋದಲ್ಲಿ 8,650 ರೂಪಾಯಿ ಹಾಗೂ ಭುವನೇಶ್ವರದಲ್ಲಿ 9,000 ರೂಪಾಯಿ ಇದೆ.
*ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಹೇಗಿದೆ ಎಂದು ತಿಳಿಯುವುದಾದರೆ- ಅಮೆರಿಕ: 715 ಡಾಲರ್ (59,699 ರುಪಾಯಿ), ಮಲೇಷ್ಯಾ: 3,410 ರಿಂಗಿಟ್ (60,070 ರುಪಾಯಿ), ದುಬೈ: 2,640 ಡಿರಾಮ್ (60,017 ರುಪಾಯಿ), ಓಮನ್: 286.50 ಒಮಾನಿ ರಿಯಾಲ್ (62,147 ರುಪಾಯಿ) ಇದೆ.
ಕುವೇತ್: 225.50 ಕುವೇತಿ ದಿನಾರ್ (61,230 ರುಪಾಯಿ), ಸಿಂಗಾಪುರ: 998 ಸಿಂಗಾಪುರ್ ಡಾಲರ್ (61,585 ರುಪಾಯಿ), ಕತಾರ್: 2,690 ಕತಾರಿ ರಿಯಾಲ್ (61,662 ರೂ), ಸೌದಿ ಅರೇಬಿಯಾ: 2,720 ಸೌದಿ ರಿಯಾಲ್ (60,554 ರುಪಾಯಿ) ಇದೆ.












Click it and Unblock the Notifications