Gold Price: ಬಂಗಾರ & ಬೆಳ್ಳಿ ಬೆಲೆಯಲ್ಲಿ ಇಂದು ಭಾರಿ ಕುಸಿತ?

ಚಿನ್ನದ ಬೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಕುಸಿತ ಕಂಡುಬಂದಿದೆ. ಅದೇ ರೀತಿ, ಇಂದು ಕೂಡ ಮತ್ತೆ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಆಗುವ ನಿರೀಕ್ಷೆ ಇದೆ. ಮನುಷ್ಯರು ನಾಗರಿಕತೆ ಕಡೆಗೆ ಹೆಜ್ಜೆ ಹಾಕಿದ ನಂತರ ಚಿನ್ನ ಹೆಚ್ಚಾಗಿ ಬಳಸತೊಡಗಿದರು. ಅದ್ರಲ್ಲೂ ಚಿನ್ನದ ಬಳಕೆಗೆ ಸುಮಾರು 5000 ವರ್ಷಗಳ ಇತಿಹಾಸ ಇದೆ. ಹೀಗೆ ಚಿನ್ನವನ್ನ ಮನುಷ್ಯರು ಸಾವಿರಾರು ವರ್ಷಗಳಿಂದ ಬಳಕೆ ಮಾಡಿಕೊಂಡು ಬರುತ್ತಿದ್ದಾರೆ. ಹೀಗಿದ್ದಾಗ ಆಧುನಿಕ ಕಾಲದಲ್ಲಿ ಚಿನ್ನದ ಬೆಲೆ ಭಾರಿ ಏರಿಕೆ ಕಾಣುತ್ತಿತ್ತು. ಆದರೆ ಈಗ ಬಂಗಾರದ ಬೆಲೆ ಭಾರಿ ಕುಸಿತ ಕಾಣುತ್ತಿದೆ.

ಭಾರತೀಯರಿಗೆ ಸಾಮಾನ್ಯವಾಗಿ ಚಿನ್ನ ಅಂದ್ರೆ ತುಂಬಾ ಇಷ್ಟ, ಅದ್ರಲ್ಲೂ ಆಭರಣವನ್ನ ತಮ್ಮ ಮೈಮೇಲೆ ಹಾಕಲು ಭಾರತೀಯರು ತುಂಬಾ ಇಷ್ಟಪಡುತ್ತಾರೆ. ಹೀಗೆ ಭಾರತೀಯರಲ್ಲಿ ಚಿನ್ನದ ಬಗ್ಗೆ ತುಂಬಾ ಕುತೂಹಲ ಇರುತ್ತದೆ. ಇದೆಲ್ಲವನ್ನೂ ಮೀರಿ ಚಿನ್ನ ಅನ್ನೋದು ಕಷ್ಟದ ಸಮಯ ಬಂದಾಗ ಸಹಾಯಕ್ಕೆ ಬರುವ ಬಂಧು ಅಥವಾ ಸ್ನೇಹಿತ ಇದ್ದಂತೆ. ಹೀಗಿದ್ದಾಗ ಚಿನ್ನ ಬೆಲೆಯಲ್ಲಿ ಭಾರಿ ಏರಿಕೆ ಆಗಿದ್ದು ಜನರಿಗೆ ಕೂಡ ಬೇಸರ ತರಿಸಿತ್ತು. ಆದರೆ ಇದೀಗ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಕಾಣುತ್ತಿದ್ದು, ಇಂದು ಕೂಡ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬರುವ ಸಾಧ್ಯತೆ ದಟ್ಟವಾಗಿದೆ. ಹಾಗಾದ್ರೆ ಇದೀಗ ಎಷ್ಟಿದೆ ಬಂಗಾರ & ಬೆಳ್ಳಿ ಬೆಲೆ? ಮುಂದೆ ಓದಿ.

Gold And Silver Price On 12 August Of 2024

ಬಂಗಾರದ ಬೆಲೆ ಎಷ್ಟಿದೆ ತಿಳಿಯಿರಿ

ಕರ್ನಾಟಕ ಹಾಗೂ ಬೆಂಗಳೂರಲ್ಲಿ ಶನಿವಾರ ಚಿನ್ನದ ಬೆಲೆ ಏರಿಕೆ ಕಂಡಿತ್ತು. 24 ಕ್ಯಾರೆಟ್‌ ಶುದ್ಧ ಚಿನ್ನ ಬೆಲೆ ಏರಿಕೆ ಕಂಡಿತ್ತು. ಪ್ರತಿ 100 ಗ್ರಾಂಗೆ 2200 ರೂಪಾಯಿ ಏರಿಕೆ ಕಂಡಿದ್ದ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ, ಪ್ರತಿ 100 ಗ್ರಾಂಗೆ 7,03,100 ರೂಪಾಯಿ ಆಗಿತ್ತು. ಜೊತೆಗೆ ಶುದ್ಧ ಚಿನ್ನ ಬೆಲೆ ಪ್ರತಿ 10 ಗ್ರಾಂ 70,310 ರೂಪಾಯಿಗೆ ಏರಿಕೆ ಆಗಿತ್ತು. ಜೊತೆಯಲ್ಲೇ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯಲ್ಲಿ ಕೂಡ ಏರಿಕೆ ಕಂಡುಬಂದಿತ್ತು ಹೀಗಿದ್ದಾಗ ಇಂದು ಚಿನ್ನದ ಬೆಲೆ ಕುಸಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕುಸಿತ ಕಂಡರೆ ಚಿನ್ನದ ಬೆಲೆ 60,000 ರೂಪಾಯಿಗಿಂತ ಕಡಿಮೆ ಬೆಲೆಗೆ ಸಿಗಬಹುದಾ? ಎಂಬ ಚರ್ಚೆ ಶುರುವಾಗಿದೆ.

ಬೆಳ್ಳಿಯ ಬೆಲೆ ಕೆಜಿಗೆ ಎಷ್ಟಿದೆ?

22 ಕ್ಯಾರೆಟ್ ಚಿನ್ನದ ಬೆಲೆ ಏರಿಕೆ ಬಳಿಕ ಕೈಗೆ ಸಿಗದಾಗಿದೆ. 100 ಗ್ರಾಂಗೆ 2000 ರೂಪಾಯಿ ಏರಿಕೆ ಕಂಡಿತ್ತು 22 ಕ್ಯಾರೆಟ್ ಚಿನ್ನ. ಆಭರಣ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 6,44,500 ರೂಪಾಯಿ ಆಗಿತ್ತು. ಜೊತೆಗೆ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 64,450 ರೂಪಾಯಿ ತಲುಪಿತ್ತು. ಆದರೆ ಮತ್ತೊಂದ್ಕಡೆ ಬೆಳ್ಳಿ ಬೆಲೆಯಲ್ಲಿ ಮಾತ್ರ ಇಳಿಕೆ ಕಂಡುಬಂದಿದ್ದು. ಈಗ, ಬೆಳ್ಳಿ ಬೆಲೆ ಪ್ರತಿ ಕೆಜಿಗೆ 80,650 ರೂಪಾಯಿ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+