Gold Price: ಚಿನ್ನದ ಬೆಲೆಯಲ್ಲಿ ದಿಢೀರ್ ಕುಸಿತ, ಬಂಗಾರ & ಬೆಳ್ಳಿ ಬೆಲೆ ಈಗ ಎಷ್ಟಿದೆ?
ಚಿನ್ನದ ಬೆಲೆ ಕುಸಿತ ಕಾಣುವುದು ಮತ್ತೆ ಮುಂದುವರಿದಿದೆ, ಈ ಮೂಲಕ ಬಂಗಾರದ ಬೆಲೆ ಇಂದು ಮತ್ತಷ್ಟು ಕಡಿಮೆ ಆಗಿದೆ. ಚಿನ್ನದ ಬೆಲೆ ಸ್ಥಿರತೆ ಕಳೆದುಕೊಂಡು, ಸತತವಾಗಿ ಕುಸಿತದ ಹಾದಿಗೆ ಬಂದಿದೆ ಕಳೆದ ಕೆಲ ದಿನದಿಂದ ಚಿನ್ನದ ಬೆಲೆ ಕುಸಿತ ಕಂಡಿತ್ತು. ನಿನ್ನೆ ಒಂದಷ್ಟು ಏರಿಕೆ ಕಂಡ ಚಿನ್ನದ ಬೆಲೆ ಇಂದು ಮತ್ತೆ ಕುಸಿತ ಕಂಡಿದೆ. ಹಾಗಾದ್ರೆ ಇಂದು ಚಿನ್ನ & ಬೆಳ್ಳಿ ಬೆಲೆ ಎಷ್ಟಿದೆ? ಬನ್ನಿ ತಿಳಿಯೋಣ.
ಚಿನ್ನ ಮಾರುಕಟ್ಟೆಯಲ್ಲಿ ಸತತವಾಗಿ ಕುಸಿತ ಕಾಣುತ್ತಿದ್ದು, ಇದರಿಂದ ಹೂಡಿಕೆದಾರರಿಗೆ ಹೊಸ ಆತಂಕ ಶುರುವಾಗಿದೆ. ಯಾಕಂದ್ರೆ ಚಿನ್ನ ಕೂಡ ಆರ್ಥಿಕತೆಯ ಒಂದು ಭಾಗ ಆಗಿದೆ. ಹೀಗಿದ್ದಾಗ ಚಿನ್ನದ ಬೆಲೆಯಲ್ಲಿ ಸತತ ಕುಸಿತ ದಾಖಲಾಗುತ್ತಿದೆ ಎಂಬುದು ಚಿಂತೆಗೆ ದೂಡುತ್ತಿದೆ. ಅದರಲ್ಲೂ ಕಳೆದ ಒಂದು ವಾರದಿಂದ ಚಿನ್ನ ದೊಡ್ಡ ಪ್ರಮಾಣದಲ್ಲಿ ತನ್ನ ಬೆಲೆಯನ್ನ ಕಳೆದುಕೊಂಡಿದೆ. ಬಜೆಟ್-2024 ಮಂಡನೆಯಾದ ನಂತರ ಸತತವಾಗಿ ಚಿನ್ನ ಕುಸಿತ ಕಾಣುತ್ತಿದ್ದು, ನಿನ್ನೆಯಷ್ಟೇ ಅಲ್ಪ ಪ್ರಮಾಣದಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿತ್ತು. ಆದರೆ ಇಂದು ಮತ್ತೆ ಕುಸಿದು ಬಿದ್ದಿದೆ ಚಿನ್ನದ ಬೆಲೆ. ಚಿನ್ನ & ಬೆಳ್ಳಿ ಬೆಲೆ ಎಷ್ಟಿದೆ ಎಂದು ಮುಂದೆ ಓದಿ ತಿಳಿಯಿರಿ.

ಚಿನ್ನದ ಬೆಲೆ ಎಷ್ಟಿದೆ ತಿಳಿಯಿರಿ!
ಒಡವೆ ಚಿನ್ನ ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 2000 ರೂಪಾಯಿ ಕುಸಿತವನ್ನು ಕಂಡಿದೆ. ಹಾಗೇ ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ಈಗ 200 ರೂ. ಕಡಿತವಾಗಿದೆ. ಆಭರಣ ಚಿನ್ನದ ಬೆಲೆ ಕುಸಿತದ ಬಳಿಕ ಪ್ರತಿ 10 ಗ್ರಾಂಗೆ 63,200 ರೂಪಾಯಿ ಇದ್ದು. 24 ಕ್ಯಾರೆಟ್ ಚಿನ್ನದ ಬೆಲೆ ಕೂಡ ಕುಸಿದು ಬಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 2,100 ರೂಪಾಯಿ ಇಳಿಕೆ ಕಂಡಿದೆ.
ಬೆಳ್ಳಿ ಬೆಲೆ ಇಂದು ಎಷ್ಟಿದೆ?
24 ಕ್ಯಾರೆಟ್ ಚಿನ್ನದ ಬೆಲೆಯು 2,100 ರೂಪಾಯಿ ಕುಸಿದು ಬಿದ್ದ ನಂತರ, ಪ್ರತಿ 100 ಗ್ರಾಂಗೆ 6,89,500 ರೂಪಾಯಿಗೆ ತಲುಪಿದೆ. ಅಲ್ಲದೆ 24 ಕ್ಯಾರೆಟ್ ಚಿನ್ನದ ಬೆಲೆ ಇದೀಗ ಪ್ರತಿ 10 ಗ್ರಾಂಗೆ 68,950 ರೂಪಾಯಿಗೆ ಮಾರಾಟ ಆಗ್ತಿದೆ. ಮತ್ತೊಂದು ಕಡೆ, ಬೆಳ್ಳಿ ಬೆಲೆಯಲ್ಲಿ 500 ರೂಪಾಯಿ ಏರಿಕೆ ಕಂಡುಬಂದಿದೆ. ಹೀಗೆ ಬೆಳ್ಳಿ ಪ್ರತಿ ಕೆಜಿಗೆ 84,500 ರೂಪಾಯಿ ಲೆಕ್ಕದಲ್ಲಿ ಈಗ ಮಾರಾಟ ಆಗುತ್ತಿದೆ. ಅದರಲ್ಲೂ ಆಷಾಢ ಮುಗಿದ ಬೆನ್ನಲ್ಲೇ ಚಿನ್ನಕ್ಕೆ ಭಾರಿ ಡಿಮ್ಯಾಂಡ್ ಬಂದಿದ್ದು, ಹೀಗಿದ್ದರೂ ಚಿನ್ನದ ಬೆಲೆ ಕುಸಿತ ಕಾಣುತ್ತಿದೆ.
ವರ್ಷದಿಂದ ವರ್ಷಕ್ಕೆ ಚಿನ್ನದ ಬೆಲೆ ಏರಿಕೆ!
ಕಳೆದ 15 ವರ್ಷಕ್ಕೆ ಹೋಲಿಕೆ ಮಾಡಿದರೆ ಚಿನ್ನದ ಬೆಲೆಯಲ್ಲಿ ಸಾಕಷ್ಟು ಬದಲಾವಣೆ ಆಗಿ ದೊಡ್ಡ ಮಟ್ಟದಲ್ಲಿ ಚಿನ್ನ ಏರಿಕೆ ಕಂಡಿದೆ. ಹಾಗೇ ಮುಂದಿನ ದಿನಗಳಲ್ಲಿ ಚಿನ್ನಕ್ಕೆ ಇನ್ನೂ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆಲ್ಲಾ ಕಾರಣ ಏನೆಂದರೆ ಭೂಮಿಯ ಒಳಗೆ ಸಿಗುತ್ತಿದ್ದ ಚಿನ್ನ ಭಾಗಶಃ ಕಡಿಮೆ ಆಗುತ್ತಾ ಬರುತ್ತಿದೆ. ಹೀಗಾಗಿ ಗಣಿಗಾರಿಕೆ ನಡೆಸುವ ಸಾಧ್ಯತೆ ಕೂಡ ಕ್ಷೀಣಿಸುತ್ತಿದೆ. ಇದು ಕೂಡ ಚಿನ್ನದ ಮೇಲೆ ಸಾಕಷ್ಟು ದೊಡ್ಡ ಪ್ರಮಾಣದ ಪರಿಣಾಮ ಬೀರುವ ಸಾಧ್ಯತೆ ಇದೆ.












Click it and Unblock the Notifications