Gold Price: ಚಿನ್ನ & ಬೆಳ್ಳಿ ಬೆಲೆ 29,900 ರೂಪಾಯಿ ಕುಸಿತ, ಬಜೆಟ್ ಎಫೆಕ್ಟ್ ಮುಂದೆ ಏನಾಗುತ್ತೆ?

ಚಿನ್ನ & ಬೆಳ್ಳಿ ಮೇಲಿನ ತೆರಿಗೆ ಇಳಿಸಲು ಕೇಂದ್ರ ಸರ್ಕಾರ ಇಂದಿನ ಬಜೆಟ್ ವೇಳೆ ಮಹತ್ವದ ನಿರ್ಧಾರ ಕೈಗೊಂಡ ನಂತರ, ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ. ಚಿನ್ನ & ಬೆಳ್ಳಿ ಬೆಲೆ ಭಾರಿ ಏರಿಕೆ ಕಾಣುತ್ತಿದ್ದು, ಆಕಾಶ ಮುಟ್ಟುತ್ತಿದೆ ಎಂದು ಭಾರತೀಯರು ಬೇಸರ ಹೊರ ಹಾಕುತ್ತಿದ್ದರು. ಹೀಗಿದ್ದಾಗ ಇಂದು 2024ರ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಚಿನ್ನ & ಬೆಳ್ಳಿ & ಪ್ಲಾಟಿನಂ ಮೇಲಿನ ಕಸ್ಟಮ್ಸ್ ಕಡಿತಕ್ಕೆ ಮುಂದಾದ ವಿಚಾರ ತಿಳಿಸಿದರು. ಹೀಗಾಗಿ ಚಿನ್ನ & ಬೆಳ್ಳಿ ಬೆಲೆ 29,900 ರೂಪಾಯಿ ಕುಸಿತ ಕಂಡಿದೆ.

ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, 3ನೇ ಬಾರಿಗೆ ರಚನೆ ಆದ ಸರ್ಕಾರದ ಮೊದಲ ಬಜೆಟ್ ಕಂಡು ಷೇರು ಮಾರುಕಟ್ಟೆ ಅಲ್ಲಾಡಿ ಹೋಗಿದೆ. ಅದರಲ್ಲೂ ಚಿನ್ನ & ಬೆಳ್ಳಿ ಕೂಡ ಭಾರಿ ಕುಸಿತ ಕಂಡಿದೆ. ಈ ಮೂಲಕ ಚಿನ್ನದ ಮೇಲೆ ಹೂಡಿಕೆ ಮಾಡಿದ್ದವರಿಗೆ ಈಗ ಆಘಾತ ಎದುರಾಗಿದೆ. ಇಂದು ಚಿನ್ನ & ಬೆಳ್ಳಿ ಮೇಲೆ ಕಸ್ಟಮ್ಸ್ ಕಡಿತ ಮಾಡುವ ಮಾಹಿತಿ ಸಿಗುತ್ತಿದ್ದಂತೆಯೆ ಆರಂಭದಲ್ಲಿ ಪ್ರತಿ 100 ಗ್ರಾಂ ಚಿನ್ನ 2700 ರೂಪಾಯಿ ಕಡಿತವಾಗಿತ್ತು. ಆ ನಂತರ ಕೆಲವೇ ಹೊತ್ತಲ್ಲಿ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 29,900 ರೂಪಾಯಿ ಕುಸಿತ ಕಂಡಿದೆ. ಹಾಗಾದರೆ ಇದೀಗ ಎಷ್ಟಿದೆ ಚಿನ್ನದ ಬೆಲೆ? ಬೆಳ್ಳಿ ಬೆಲೆ ಕಥೆ ಏನಾಯ್ತು? ಮುಂದೆ ಓದಿ.

Gold And Silver Price Decreased 29 900 Rupees After Budget 2024

ಬಂಗಾರದ ಬೆಲೆ ಭಾರಿ ಕುಸಿತ!

ಚಿನ್ನಕ್ಕೆ ಎಂದಿಗೂ ಅದರದ್ದೇ ಆದ ಗತ್ತು & ಬೆಲೆ ಇದ್ದೇ ಇರುತ್ತದೆ. ಆದರೂ ಇಂದು ಚಿನ್ನ ಭಾರಿ ಕುಸಿತ ಕಂಡಿದೆ. ಅಂದಹಾಗೆ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಇಂದು ಬಜೆಟ್ ಹಿನ್ನೆಲೆಯಲ್ಲಿ ಕುಸಿತ ಕಂಡ ನಂತರ ಪ್ರತಿ 100 ಗ್ರಾಂಗೆ 7,08,600 ರೂಪಾಯಿಗೆ ಬಂದು ತಲುಪಿದೆ. ಹೀಗೆ ಚಿನ್ನ ಭಾರಿ ಕುಸಿತ ಕಂಡಿದೆ, ಹಾಗೇ ಶುದ್ಧ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 70,860 ರೂಪಾಯಿಗೆ ಇಳಿಕೆ ಆಗಿದೆ. ಹಾಗಾದ್ರೆ ಆಭರಣ ಚಿನ್ನ ಅಂದ್ರೆ 22 ಕ್ಯಾರೆಟ್ ಚಿನ್ನ ಈಗ ಎಷ್ಟಿದೆ & ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಮುಂದೆ ಓದಿ.

ಚಿನ್ನ ಖರೀದಿಗೆ ಶುಭ ಸಮಯ?

ಆಭರಣ ಚಿನ್ನ ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಭರ್ಜರಿ ಕುಸಿತ ಕಂಡಿದ್ದು 100 ಗ್ರಾಂ ಆಭರಣ ಚಿನ್ನದ ಬೆಲೆ ಈಗ 27,500 ರೂಪಾಯಿ ಇಳಿಕೆ ಆಗಿದೆ. ಹೀಗಾಗಿ ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ 2,750 ರೂಪಾಯಿ ಇಳಿಕೆ ಕಂಡಿದೆ. ಆಭರಣ ಚಿನ್ನದ ಬೆಲೆ ಇಳಿಕೆ ನಂತರ ಪ್ರತಿ 10 ಗ್ರಾಂಗೆ 64,950 ರೂಪಾಯಿಗೆ ಮಾರಾಟ ಆಗುತ್ತಿದೆ. ಒಟ್ನಲ್ಲಿ ಇದೇ ರೀತಿ ಬೆಳ್ಳಿ ಬೆಲೆ ಕೂಡ ಭಾರಿ ಇಳಿಕೆ ಕಂಡಿದ್ದು, ಬೆಳ್ಳಿ ಬೆಲೆ ಇದೀಗ ಕೆಜಿಗೆ 3,500 ರೂಪಾಯಿ ಕುಸಿತ ಕಂಡಿದೆ. ಈ ಮೂಲಕ ಈಗ ಬೆಂಗಳೂರಲ್ಲಿ ಬೆಳ್ಳಿ ಪ್ರತಿ ಕೆಜಿಗೆ 88,000 ರೂಪಾಯಿ ಲೆಕ್ಕದಲ್ಲಿ ಮಾರಾಟ ಆಗುತ್ತಿದೆ.

ಬೆಳ್ಳಿ ಬೆಲೆಯಲ್ಲಿ ದಿಢೀರ್ ಇಳಿಕೆ!

ಚಿನ್ನ ಬಹು ಬೇಡಿಕೆಯ ವಸ್ತು, ಹೀಗಾಗಿಯೇ ಚಿನ್ನಕ್ಕೆ ಭಾರಿ ಡಿಮ್ಯಾಂಡ್ ಬಂದಿದೆ. ಹೀಗೆ ಚಿನ್ನ ಕೊಳ್ಳಲು ಜನಗಳು ಕೂಡ ಮುಗಿಬಿದ್ದು ಮುಂದೆ ಬರುತ್ತಿದ್ದಾರೆ. ಹೀಗಿದ್ದಾಗ ಚಿನ್ನದ ಜೊತೆ ಬೆಳ್ಳಿ ಬೆಲೆ ಕೂಡ ಭಾರಿ ಏರಿಕೆ ಕಾಣುತ್ತಿತ್ತು. ನೋಡ ನೋಡುತ್ತಲೇ ಬೆಳ್ಳಿ ಬೆಲೆ, ಹತ್ತಿರ ಹತ್ತಿರ 1 ಲಕ್ಷ ರೂಪಾಯಿ ತಲುಪಿತ್ತು, ಇಂತಹ ಸ್ಥಿತಿಯಲ್ಲಿ ದಿಢೀರ್ ಬೆಳ್ಳಿ ಬೆಲೆಯಲ್ಲಿ ದೊಡ್ಡ ಕುಸಿತವಾಗಿದೆ. ಮುಂದಿನ ದಿನಗಳಲ್ಲಿ ಬೆಳ್ಳಿ ಬೆಲೆ ಮತ್ತಷ್ಟು ಕುಸಿತ ಕಾಣುವ ನಿರೀಕ್ಷೆ ಇದೆ. ಈ ನಡುವೆ ಚಿನ್ನದ ಜೊತೆ ಬೆಳ್ಳಿ ಬೆಲೆ ಕೂಡ ಭಾರಿ ಇಳಿಕೆ ಕಂಡಿರುವುದು ಬೆಳ್ಳಿ ಇಷ್ಟಪಡುವವರಿಗೆ ಖುಷಿ ಕೊಟ್ಟಿದೆ.

ಹಳದಿ ಲೋಹ ಎಲ್ಲರಿಗೂ ಇಷ್ಟ!

ಚಿನ್ನ ಭಾರತೀಯರ ಪಾಲಿಗೆ ತುರ್ತು ಹಣ ಇದ್ದಂತೆ, ಯಾಕಂದ್ರೆ ಯಾವುದೇ ತುರ್ತು ಸ್ಥಿತಿ ಎದುರಾಗಿ ಪರದಾಟ ಶುರುವಾದರೂ ಭಾರತೀಯರು ಮೊದಲು ತಮ್ಮ ಬಳಿ ಇರುವ ಚಿನ್ನ, ಮತ್ತು ಬೆಳ್ಳಿ ಮೊರೆ ಹೋಗುತ್ತಾರೆ. ಯಾಕಂದ್ರೆ ತುರ್ತು ಪರಿಸ್ಥಿತಿಯಲ್ಲಿ, ಎಲ್ಲಿಯೂ ಹಣ ಸಿಗದೇ ಇದ್ದರೆ ನಮ್ಮ ಬಳಿ ಇರುವ ಚಿನ್ನ & ಬೆಳ್ಳಿಗೆ ಬೇಡಿಕೆ ಬಂದೇ ಬರುತ್ತದೆ. ಹೀಗಾಗಿಯೇ ಬಹುತೇಕ ಭಾರತೀಯರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾ ಬಂದಿದ್ದಾರೆ. ಮತ್ತೊಂದು ಕಡೆ ಚಿನ್ನದ ಮೇಲೆ ಹೂಡಿಕೆ ಮಾಡುವ ಪ್ರತಿಯೊಬ್ಬರಿಗೂ, ಹಳದಿ ಲೋಹ ಬೆನ್ನೆಲುಬಾಗಿ ನಿಂತಿದೆ. ಮುಂದಿನ ದಿನಗಳಲ್ಲಿ ಹಳದಿ ಲೋಹ ಅಂದ್ರೆ ಚಿನ್ನ ಮತ್ತಷ್ಟು ಎತ್ತರಕ್ಕೆ ಹೋಗುವ ನಿರೀಕ್ಷೆ ದಟ್ಟವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+