ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುಭ ಶುಕ್ರವಾರ, ಚಿನ್ನ, ಬೆಳ್ಳಿ ಬೆಲೆ ಇಳಿಕೆಯಾದರೂ ತಾತ್ಕಾಲಿಕ

|
Google Oneindia Kannada News

ಬೆಂಗಳೂರು, ನವೆಂಬರ್ 02: ದೀಪಾವಳಿ ಹಬ್ಬಕ್ಕೂ ಮುನ್ನ ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತ ಶುರುವಾಗಿದೆ. ಕಳೆದ ಕೆಲ ದಿನಗಳಿಂದ ಚಿನ್ನ, ಬೆಳ್ಳಿ ಬೆಲೆ ಮೇಲ್ಮುಖವಾಗಿ ಚಲಿಸುತ್ತಿತ್ತು, ಆದರೆ, ಶುಕ್ರವಾರವಂದು ಶುಭ ಸುದ್ದಿ ಬಂದಿದ್ದು, ಬೆಲೆಯಲ್ಲಿ ಇಳಿಕೆ ಕಂಡಿದೆ.

ನವರಾತ್ರಿ ಹಬ್ಬದ ಸೀಸನ್ ಮುಗಿದ ಬಳಿಕ ಚಿನ್ನ, ಬೆಳ್ಳಿಯ ಬೇಡಿಕೆ ತಗ್ಗಿದ್ದರಿಂದ ಚಿನ್ನ ಪ್ರಿಯರಿಗೆ ಶುಭ ಸುದ್ದಿ ಸಿಕ್ಕಿತ್ತು. ಬಂಗಾರ, ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿತ್ತು. ಆದರೆ, ಕಳೆದ ಕೆಲ ದಿನಗಳಿಂದ ಚಿನ್ನ, ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡು ಬಂದಿತ್ತು. ದೀಪಾವಳಿ ಸಂದರ್ಭದಲ್ಲಿ ಬೆಲೆ ಏರಿಕೆಯಾಗದೆ ಸ್ಥಿರವಾಗಿದ್ದರೆ ಸಾಕು ಎಂದು ಗ್ರಾಹಕರು ಹೇಳುತ್ತಿದ್ದಾರೆ.

ಆಭರಣ ಚಿನ್ನ ಗ್ರಾಮ್ ಗೆ 3 ಸಾವಿರ ರುಪಾಯಿ, ದೀಪಾವಳಿಗೆ ಏನು ಕಥೆ? ಆಭರಣ ಚಿನ್ನ ಗ್ರಾಮ್ ಗೆ 3 ಸಾವಿರ ರುಪಾಯಿ, ದೀಪಾವಳಿಗೆ ಏನು ಕಥೆ?

ಜಾಗತಿಕ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಬೆಳವಣಿಗೆ ಹಾಗೂ ನಾಣ್ಯ ತಯಾರಿಕರಿಂದ ಬೇಡಿಕೆ ಹೆಚ್ಚಾದ ಕಾರಣ ಚಿನ್ನ, ಬೆಳ್ಳಿ ಬೆಲೆಯಲ್ಲಿ ಹೆಚ್ಚಳ ಕಂಡು ಬಂದಿತ್ತು. ಆದರೆ, ಈಗ ಖರೀದಿದಾರರು ಮುಂದಿನ ವಾರಕ್ಕೆ ಖರೀದಿಯನ್ನು ಮುಂದೂಡಿದ್ದಾರೆ. ಹೀಗಾಗಿ, ಈ ಬೆಲೆ ಇಳಿಕೆ ತಾತ್ಕಾಲಿಕ ಎನ್ನಬಹುದು.

Gold and silver lose charm on Friday

ಶುಕ್ರವಾರದಂದು ಎಂಸಿಎಕ್ಸ್ ನಲ್ಲಿ ಚಿನ್ನದ ಬೆಲೆಯಲ್ಲಿ 141 ರೂಪಾಯಿ ಅಥವಾ ಶೇಕಡಾ 0.44 ರಷ್ಟು ಇಳಿಕೆ ಕಂಡು ಬಂದಿದೆ. ಪ್ರತಿ ಹತ್ತು ಗ್ರಾಂ ಚಿನ್ನದ ಬೆಲೆ 31,751 ರೂಪಾಯಿಯಾಗಿದೆ.

ಎಂಸಿಎಕ್ಸ್ ನಲ್ಲಿ ಬೆಳ್ಳಿ 182 ರೂಪಾಯಿ ಅಂದ್ರೆ ಶೇಕಡಾ 0.47 ರಷ್ಟು ಇಳಿಕೆ ಕಂಡು ಒಂದು ಕೆ.ಜಿ. ಗೆ 38,588 ರೂಪಾಯಿಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದ್ದು, ಚಿನ್ನದ ಬೆಲೆ ಶೇಕಡಾ 0.03 ರಷ್ಟು ಇಳಿಕೆಯಾಗಿ ಪ್ರತಿ ಔನ್ಸ್ ಗೆ 1,233.50 ಯುಎಸ್ ಡಾಲರ್ ನಷ್ಟಿತ್ತು. ಬೆಳ್ಳಿ ಬೆಲೆ ಅಷ್ಟೇ ಪ್ರಮಾಣದಲ್ಲಿ ಇಳಿಕೆಯಾಗಿದ್ದು, 14.82 ಯುಎಸ್ ಡಿ ಪ್ರತಿ ಔನ್ಸ್ ನಷ್ಟಿತ್ತು.

ನವರಾತ್ರಿಯಲ್ಲಿ ಇಳಿದ ಚಿನ್ನ, ದೀಪಾವಳಿಯಲ್ಲಿ ರಾಕೆಟ್ ನಂತೆ ಏರಲಿದೆ? ನವರಾತ್ರಿಯಲ್ಲಿ ಇಳಿದ ಚಿನ್ನ, ದೀಪಾವಳಿಯಲ್ಲಿ ರಾಕೆಟ್ ನಂತೆ ಏರಲಿದೆ?

ದೆಹಲಿಯಲ್ಲಿ 99.9% ಚಿನ್ನದ ಬೆಲೆ 150ರು ನಷ್ಟು ತಗ್ಗಿದ್ದು 32,630ರು(10 ಗ್ರಾಂ) ಹಾಗೂ 99.5% ಚಿನ್ನದ ಬೆಲೆ 32480ರು ನಷ್ಟಿತ್ತು. ಸವರನ್ ಚಿನ್ನದ ಬೆಲೆ 8ಗ್ರಾಮ್ ಗೆ 24900ರು ನಷ್ಟಿದೆ.

ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 29,750ರು(29830 ರು ನಿನ್ನೆ ದರ) ಹಾಗೂ 24 ಕ್ಯಾರೆಟ್ 10 ಗ್ರಾಂ ಬೆಲೆ 31,560(31620 ರು ನಿನ್ನೆ ದರ). ಬೆಳ್ಳಿ 1 ಕೆಜಿ ಬೆಲೆ 41,250 ರು (41,200 ಗುರುವಾರದ ಬೆಲೆ) ನಷ್ಟಿತ್ತು.

English summary
Gold and silver prices looked listless on Friday as market participants tiptoed into riskier assets amid recovery in domestic equity markets. Silver futures were down 0.54 per cent at Rs 38,560 per kg.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X