ಚಳಿಗಾಲದಲ್ಲಿ ಬಿಸಿ ವಾಶ್ ನೀಡಲು ಗೋದ್ರೆಜ್ ವಾಷಿಂಗ್ ಮಷಿನ್ಸ್
ಬೆಂಗಳೂರು, ಡಿಸೆಂಬರ್ 4, 2020: ಕೋವಿಡ್-19 ಸಂದರ್ಭದಲ್ಲಿ ಬಟ್ಟೆ ಒಗೆತದ ಅಗತ್ಯತೆ ಹಿಂದೆಂದಿಗಿಂತಲೂ ಹೆಚ್ಚಿದ್ದು, ಗ್ರಾಹಕರು ಮನೆಯಿಂದ ಹೊರ ಹೋಗಿ ಬಂದಾಗಲೆಲ್ಲ ಬಟ್ಟೆ ತೊಳೆಯುವುದು ಅನಿವಾರ್ಯವಾಗಿದೆ. ಗೋದ್ರೇಜ್ ಬ್ರಾಂಡ್ 5-ಸ್ಟಾರ್ ವರ್ಗದ ಅತ್ಯಧಿಕ ಕ್ಷಮತೆಯ ಗೋದ್ರೇಜ್ ವಾಷಿಂಗ್ ಮಷಿನ್‍ಗಳನ್ನು ಬಿಡುಗಡೆ ಮಾಡಿದೆ.
12 ಹೊಸ ಎಸ್‍ಕೆಯುಗಳಲ್ಲಿ ಪ್ರಮುಖವಾಗಿ ಇಯಾನ್ ಅಲ್ಯೂರ್, ಇಯಾನ್ ಅಲ್ಯೂರ್ ಕ್ಲಾಸಿಕ್ ಮತ್ತು ಇಯಾನ್ ಔದ್ರಾ ಸಂಪೂರ್ಣ ಸ್ವಯಂಚಾಲಿತ ವಾಷಿಂಗ್ ಮಷಿನ್ ವರ್ಗದಲ್ಲಿ ಸೇರಿದ್ದರೆ, ಎಡ್ಜ್ ಡಿಜಿ ಮತ್ತು ಎಡ್ಜ್ ಅಲ್ಟಿಮಾ ಸ್ಟೀಲ್‍ನಾಕ್ಸ್ ಅರೆ- ಸ್ವಯಂಚಾಲಿತ ವರ್ಗದಲ್ಲಿ ಸೇರಿವೆ. ಇದು ಹೊಸ ಶ್ರೇಣಿಯ ಉತ್ಪನ್ನ ಪ್ರತಿಯೊಬ್ಬರಿಗೂ ಲಭ್ಯವಾಗುವಂತೆ ಮಾಡಿದೆ.
ಪ್ರಿಮಿಯಂ ಎಂಡ್ ಗೋದ್ರೇಜ್ ಅಯಾನ್ ಅಲ್ಯೂರ್ ಮಾಡೆಲ್‍ಗಳು ಮೂರು ಉಷ್ಣತಾ ವಿಧಗಳನ್ನು ಹೊಂದಿದ್ದು, ಬಳಕೆದಾರರು ತಮ್ಮ ಅಗತ್ಯತೆಗೆ ಅನುಗುಣವಾಗಿ ಉಷ್ಣತಾ ಸೆಟ್ಟಿಂಗ್ ಬದಲಾವಣೆ ಮಾಡಿಕೊಳ್ಳಲು ಅವಕಾಶ ಇರುತ್ತದೆ.
* ಜೆರ್ಮ್‍ಶೀಲ್ಡ್ ಮೋಡ್: ಇದು ಶೇಕಡ 99.9ರಷ್ಟು ಅಲರ್ಜಿಕಾರಕ ಕಣಗಳು ಮತ್ತು ಬ್ಯಾಕ್ಟೀರಿಯಾಗಳನ್ನು ನಿರ್ಮೂಲನೆ ಮಾಡುತ್ತವೆ. ಜತೆಗೆ ನೀರನ್ನು 60 ಡಿಗ್ರಿ ಸೆಂಟಿಗ್ರೇಡ್‍ವರೆಗೆ ಬಿಸಿ ಮಾಡುತ್ತದೆ ಹಾಗೂ ಸ್ಮಾರ್ಟ್ ವಾಶ್ ಅಲ್ಗರಿಥಮ್‍ನೊಂದಿಗೆ ಕಾರ್ಯ ನಿರ್ವಹಿಸುತ್ತದೆ.

* ಹಾಟ್ ಮೋಡ್: ಇದು ಅಧಿಕ ಕೊಳೆ ಹೊಂದಿದ ಬಟ್ಟೆಗಳಿಗೆ ಸೂಕ್ತವಾಗಿದ್ದು, ಇದು ನೀರನ್ನು 55ಡಿಗ್ರಿ ಸೆಂಟಿಗ್ರೇಡ್‍ನಷ್ಟು ಬಿಸಿಯಾಗಿಸುತ್ತದೆ.
* ಬೆಚ್ಚನೆಯ ಮೋಡ್: ಇದು ಸಾಮಾನ್ಯ ಕೊಳೆ ಹೊಂದಿದ ಬಟ್ಟೆಗಳಿಗೆ ಅನುಕೂಲವಾಗಲಿದ್ದು, ಇದು 40 ಡಿಗ್ರಿ ಸೆಂಟಿಗ್ರೇಡ್‍ವರೆಗೆ ನೀರನ್ನು ಬಿಸಿ ಮಾಡುತ್ತದೆ.
ಗೋದ್ರೇಜ್ ಅಪ್ಲಯನ್ಸಸ್‍ನ ಪರಿಸರ ಬಗೆಗಿನ ಬದ್ಧತೆಗೆ ಅನುಸಾರವಾಗಿ, ಈ ವಾಷಿಂಗ್ ಮೆಷಿನ್ ಎಕೋ ಮೋಡ್‍ನೊಂದಿಗೆ ಲಭ್ಯವಿದ್ದು, ಇದು ಇತರ ಸಾಮಾನ್ಯ ತೊಳೆಯುವ ಆವರ್ತಕ್ಕೆ ಹೋಲಿಸಿದರೆ 44 ಲೀಟರ್‍ನಷ್ಟು ಕಡಿಮೆ ನೀರು ಬಳಸುತ್ತದೆ. ಅಂತರ್ಜಲ ಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ನೀರು ಅತಿ ಹೆಚ್ಚಿನ ಬೆಲೆಯ ವಸ್ರಯವಾಗುತ್ತಿದ್ದು, ನೀರಿನ ಸಂರಕ್ಷಣೆಯು ಉತ್ಕೃಷ್ಟ ಒಗೆಯುವ ಕ್ಷಮತೆಯ ಹೃದಯ ಎನಿಸಿದೆ. ಗೋದ್ರೇಜ್, ಪ್ರಿಮಿಯಂ ಅಲ್ಯೂರ್ ವಾಷಿಂಗ್ ಮೆಷಿನ್‍ಗಳ ಹಲವು ಅವತರಣಿಕೆಗಳನ್ನು ಬಿಡುಗಡೆ ಮಾಡಿದೆ

ಇಯಾನ್ ಅಲ್ಯೂರ್ ಕ್ಲಾಸಿಕ್ ಹಾಗೂ ಇಯಾನ್ ಔದ್ರಾ, ಎಲ್ಲವೂ ಬಿಸಿ ನೀರಿನ ವಾಷಿಂಗ್‍ಗೆ ಅವಕಾಶವನ್ನು ಹೊಂದಿದ್ದು, ಹಲವು ವಿಶಿಷ್ಟತೆಗಳ ಸಂಯೋಜನೆಯು 100% ವಾಶ್ ರೆಸಿಸ್ಟೆನ್ಸ್ ಡಿಜಿಟಲ್ ಪ್ಯಾನೆಲ್, ಅಂತರ್ಗತ ಒಗೆತ, ಕಠಿಣ ಕಲೆ ನಿರ್ಮೂಲನೆ, ವಿಶೇಷ ಅಗತ್ಯದ ವಾಷ್ ಪ್ರೋಗ್ರಾಂಗಳು ಇದರಲ್ಲಿ ಮುಖ್ಯವಾದವುಗಳು. ಇದು ಗ್ರಾಹಕರಿಗೆ ಸಾಕಷ್ಟು ವೈವಿಧ್ಯತೆ ಮತ್ತು ಆಯ್ಕೆಗಳನ್ನು ಈ ಹಬ್ಬದ ಋತುವಿನಲ್ಲಿ ನೀಡುತ್ತವೆ.
Recommended Video
ಶೇಕಡ 55ರಷ್ಟು ಅರೆ ಸ್ವಯಂಚಾಲಿತ ವಾಷಿಂಗ್ ಮೆಷಿನ್ ಬಳಕೆದಾರರಿದ್ದು, ಸೆಮಿ ಆಟೊಮ್ಯಾಟಿಕ್ ವಾಷಿಂಗ್ ಮೆಷಿನ್‍ಗೆ 60 ಡಿಗ್ರಿ ಬಿಸಿಯಲ್ಲಿ ಬಟ್ಟೆ ತೊಳೆಯುವ ತಂತ್ರಜ್ಞಾನವನ್ನು ಎಡ್ಜ್ ಡಿಜಿ ವಾಷಿಂಗ್ ಮೆಷಿನ್ ಮೂಲಕ ಪರಿಚಯಿಸಿದೆ. ಇದು ಭಾರತದ ಮೊಟ್ಟಮೊದಲ ಸೆಮಿ ಆಟೊಮ್ಯಾಟಿಕ್ ವಾಷಿಂಗ್ ಮಷಿನ್ ಆಗಿದ್ದು, ಡಿಜಿಟಲ್ ಕಂಟ್ರೋಲ್ ಮತ್ತು ಎಲ್‍ಇಡಿ ಪ್ರದರ್ಶಕವನ್ನು ಹೊಂದಿದೆ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications