ಗೋ ಏರ್ ನಿಂದ 1,099ಗೆ ಟಿಕೆಟ್ ಖರೀದಿಸಿ, ಸುಖ ಪ್ರಯಾಣ ನಿಮ್ಮದಾಗಲಿ

ಬೆಂಗಳೂರು, ಆಗಸ್ಟ್ 06: ಅತಿ ಕಡಿಮೆ ಬೆಲೆಗೆ ವಿಮಾನಯಾನ ಒದಗಿಸುವ ಬಜೆಟ್ ಏರ್ ಲೈನ್ಸ್ ಗೋ ಏರ್ ಈಗ ತನ್ನ ಗ್ರಾಹಕರಿಗೆ ಹೊಸ ಆಫರ್ ನೀಡುತ್ತಿದೆ. 1, 099 ರೂಪಾಯಿಯಿಂದ ಆರಂಭಗೊಂಡು ಟಿಕೆಟ್ ಖರೀದಿಸಿ, ಪ್ರಯಾಣಿಸಬಹುದಾಗಿದೆ.

ಆದರೆ, ಟಿಕೆಟ್ ಖರೀದಿ ಒನ್ ವೇ ಪ್ರಯಾಣ ದರಕ್ಕೆ ಮಾತ್ರ ಅನ್ವಯವಾಗಲಿದ್ದು, ಡಿಜಿಟಲ್ ವ್ಯಾಲೆಟ್ ಗಳಾದ ಪೇಟಿಯಂ, ಸಂಸ್ಥೆಯ ವೆಬ್ ಸೈಟ್ ಅಥವಾ ಮೊಬೈಲ್ ಆಪ್ಲಿಕೇಷನ್ ಮೂಲಕ ಟಿಕೆಟ್ ಖರೀದಿಸಿರಬೇಕು. ಪೇಟಿಯಂ ಮೂಲಕ ಖರೀದಿಗೆ 250 ರು ತನಕ ಕ್ಯಾಶ್ ಬ್ಯಾಕ್ ಕೂಡಾ ಸಿಗಲಿದೆ. ಗೋ ಏರ್ ವೆಬ್ ಸೈಟ್ ಮೂಲಕ ಖರೀದಿಗೆ 3,000 ರು ತನಕ ಆಫರ್ ಸಿಗಲಿದೆ. ಒಟ್ಟಾರೆ, ಶೇ 20 ರಷ್ಟು ಅಥವಾ 3,000 ರು ತನಕ ರಿಯಾಯಿತಿ ಸಿಗಲಿದೆ.

ಆಗಸ್ಟ್ 04ರಿಂದಲೇ ಈ ಆಫರ್ ಆರಂಭವಾಗಿದ್ದು, ಆಗಸ್ಟ್ 9 ರವರೆಗೆ ಯೋಜನೆ ಲಭ್ಯವಿರಲಿದೆ. ಆಗಸ್ಟ್ 04 ರಿಂದ ಡಿಸೆಂಬರ್ 31,2018ರ ತನಕ ಪ್ರಯಾಣಿಕರು ಈ ಸೌಲಭ್ಯದಲ್ಲಿ ಪಡೆದ ಟಿಕೆಟ್ ಮೂಲಕ ಪ್ರಯಾಣಿಸಬಹುದಾಗಿದೆ.

GoAir puts 10 lakh seats up for sale at Rs 1,099 starting fare

ಒಟ್ಟಾರೆ, 'ಗ್ರೇಟ್ ಫೆಸ್ಟಿವಲ್ಸ್ ಸೇಲ್' ಹೆಸರಿನ ಈ ಕೊಡುಗೆ ಮೂಲಕ 10 ಲಕ್ಷಕ್ಕೂ ಅಧಿಕ ಸೀಟುಗಳನ್ನು ಭರ್ತಿ ಮಾಡಲು ಗೋ ಏರ್ ಯೋಜನೆ ಹಾಕಿಕೊಂಡಿದೆ.

23 ದೇಶಿ ತಾಣಗಳಾದ ಅಹಮದಾಬಾದ್, ಬಾಗ್ದೊಗ್ರಾ, ಬೆಂಗಳೂರು, ಭುವನೇಶ್ವರ್, ಚಂದೀಗಢ, ಜಮ್ಮು ಮತ್ತು ಕಾಶ್ಮೀರ, ಚೆನ್ನೈ,ದೆಹಲಿ, ಗೋವಾ, ಗುವಾಹತಿ, ಜೈಪುರ, ಕೊಚ್ಚಿ, ಕೋಲ್ಕತಾ, ಲೆಹ್, ಲಕ್ನೋ, ಮುಂಬೈ, ನಾಗ್ಪುರ್, ಪಾಟ್ನ, ಪೋರ್ಟ್ ಬ್ಲೇರ್, ಪುಣೆ, ರಾಂಚಿ, ಶ್ರೀನಗರ ಹಾಗೂ ಹೈದರಾಬಾದ್ ಗಳಲ್ಲಿ ವಾರಕ್ಕೆ 1,544 ವಿಮಾನಗಳು ಸಂಚಾರ ನಡೆಸುತ್ತವೆ.(ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+