Error! ಜಿಮೇಲ್ ಇ ಮೇಲ್ ಸೌಲಭ್ಯ ವರ್ಕ್ ಆಗ್ತಿಲ್ಲ
ಬೆಂಗಳೂರು, ಆ. 20: ಸರ್ಚ್ ಇಂಜಿನ್ ದೈತ್ಯ ಗೂಗಲ್ ಸಂಸ್ಥೆಯ ಇ ಮೇಲ್ ಸೌಲಭ್ಯವಾದ ಜೀಮೇಲ್ ಇಂದು ಸರಿಯಾಗಿ ವರ್ಕ್ ಆಗುತ್ತಿಲ್ಲ. ಅನೇಕ ಬಳಕೆದಾರರು ತಾವು ಕಳಿಸಿದ ಇ ಮೇಲ್ ಸೆಂಡ್ ಆಗುತ್ತಿಲ್ಲ ಎರರ್ ಸಂದೇಶ ಬರುತ್ತಿದೆ ಎಂದು ಹೇಳಿಕೊಂಡಿದ್ದಾರೆ.
Recommended Video
ಅದರಲ್ಲೂ ಅಟ್ಯಾಚ್ಮೆಂಟ್ ಇರುವ ಇಮೇಲ್ ಸಂದೇಶಗಳಂತೂ ಮುಂದಕ್ಕೆ ಹೋಗುತ್ತಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರು ಬೊಬ್ಬೆ ಹಾಕುತ್ತಿದ್ದಂತೆ ಎಚ್ಚೆತ್ತುಕೊಂಡ ಗೂಗಲ್ ಸಂಸ್ಥೆ ಪ್ರತಿಕ್ರಿಯೆ ನೀಡಿದೆ.
ಈ ಸಮಸ್ಯೆ ಬಗ್ಗೆ ಈಗಾಗಲೇ ನಾವು ಕಾರ್ಯೋನ್ಮುಖರಾಗಿದ್ದೇವೆ. ಶೀಘ್ರದಲ್ಲೇ ಇಮೇಲ್ ಸೇವೆ ಪುನರ್ ಸ್ಥಾಪಿಸಲಾಗುವುದು ಎಂದು ಗೂಗಲ್ ಹೇಳಿದೆ. ಆದರೆ, ಯಾವುದೇ ಫಲಿತಾಂಶ ಇಲ್ಲಿ ತನಕ ಸಿಕ್ಕಿಲ್ಲ.

ಗೂಗಲ್ ಅನೇಕ ಉತ್ಪನ್ನಗಳು ವರ್ಕ್ ಆಗ್ತಿಲ್ಲ
ಗೂಗಲ್ ಆಪ್ ಬಳಸಿ ಇಮೇಲ್ ಕಳಿಸಲು ಯತ್ನಿಸಿದರೆ ಅದು ಕೂಡಾ ಸಾಧ್ಯವಾಗುತ್ತಿಲ್ಲ, ಅಟ್ಯಾಚ್ಮೆಂಟ್ ಇರುವ ಹಳೆ ಇಮೇಲ್ ಗಳಿಗೆ ರಿಪ್ಲೇ ಕೊಡಲು ಹೋದರೂ ಸಂದೇಶ ಹೋಗುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಇದಲ್ಲದೆ, ಗೂಗಲ್ ಡ್ರೈವ್, ಗೂಗಲ್ ಡಾಕ್, ಚಾಟ್, ಗ್ರೂಪ್, ಕೀಪ್, ವಾಯ್ಸ್ ಬಳಕೆಯಲ್ಲೂ ವ್ಯತ್ಯಯ ಉಂಟಾಗಿದೆ.

ಗೂಗಲ್ ನಲ್ಲಿ Undo send ಆಯ್ಕೆ
ಮುರ್ನಾಲ್ಕು ವರ್ಷಗಳ ಹಿಂದೆ ಗೂಗಲ್ ನಲ್ಲಿ Undo send ಆಯ್ಕೆಯನ್ನು ಪರಿಚಯಿಸಲಾಗಿತ್ತು. ಹೀಗಾಗಿ ಆತುರಕ್ಕೆ ಕಳಿಸಿದ ಇಮೇಲ್ ನಲ್ಲಿ ಏನಾದರೂ ತಪ್ಪಾಗಿದ್ದರೆ ಅದನ್ನು ತಿದ್ದು ಮತ್ತೊಮ್ಮೆ ಕಳಿಸಬಹುದಾಗಿದೆ. ಈ ಆಯ್ಕೆ ಬಳಸಿಕೊಳ್ಳಲು ಸುಮಾರು 6 ರಿಂದ 30 ಸೆಕೆಂಡುಗಳ ಕಾಲ ಅವಕಾಶ ಕಲ್ಪಿಸಲಾಗಿತ್ತು. ಇದರಲ್ಲಿ ಸಮಸ್ಯೆ ಉಂಟಾಗಿ ಇಮೇಲ್ ಹೋಗುವುದು ವಿಳಂಬವಾಗಿರಬಹುದು ಎಂದು ಅನೇಕ ಮಂದಿ ಮತ್ತೆ ಮತ್ತೆ ಪ್ರಯತ್ನಿಸಿ ವಿಫಲರಾಗಿದ್ದಾರೆ.
|
ಅತಿಕ್ರಮಿಗಳ ಕಾಟವೇ?
ಗೂಗಲ್ ಇ ಮೇಲ್ ಸೇವೆಯ ಮೇಲೆ ಅತಿಕ್ರಮಿಗಳ ಕಣ್ಣು ಬಿದ್ದಿರುವ ಸುದ್ದಿ ಆಗಾಗ ಬರುತ್ತಿರುತ್ತದೆ, 2015ರಿಂದ ಹ್ಯಾಕರ್ಸ್ ಕಾಟ ಹೆಚ್ಚಾಗಿದೆ.
ಗೂಗಲ್ ನ ಎರಡು ಮಟ್ಟದ ಸೆಕ್ಯುರಿಟಿ ಪಾಸ್ ವರ್ಡ್ ಬದಲಾವಣೆ ಮಾರ್ಗ ಅನುಸರಿಸಿ ನಿಮ್ಮ ಖಾತೆಯ ಪಾಸ್ ವರ್ಡ್ ತಕ್ಷಣವೇ ಬದಲಾಯಿಸಿಕೊಳ್ಳಿ ಎಂದು ಸೈಬರ್ ಸೆಕ್ಯುರಿಟಿ ತಜ್ಞರು ಹೇಳಿದ್ದಾರೆ.
|
ಯಾವ ಯಾವ ದೇಶದಲ್ಲಿ ಹೆಚ್ಚು ಸಮಸ್ಯೆ
ಇದ್ದಕ್ಕಿದ್ದಂತೆ ಗೂಗಲ್ ಇಮೇಲ್ ಸೇವೆಯಲ್ಲಿ ವ್ಯತ್ಯಯವಾಗಿರುವುದರಿಂದ ವಿಶ್ವದಲ್ಲೆಡೆ ಅನೇಕ ಬಳಕೆದಾರರು ಸಮಸ್ಯೆ ಎದುರಿಸಿದ್ದಾರೆ. ಯಾವ ಯಾವ ದೇಶದಲ್ಲಿ ಹೆಚ್ಚು ಸಮಸ್ಯೆ ಉಂಟಾಗಿದೆ ಎಂಬುದನ್ನು ಭೂಪಟದ ಮೂಲಕ ತೋರಿಸಲಾಗಿದೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications