Whatsappನಲ್ಲೇ ಕ್ರೆಡಿಟ್ ಸ್ಕೋರ್, ಇನ್ನೂ ಏನೇನು ಬರುತ್ತೋ?

ಕ್ರೆಡಿಟ್ ಸ್ಕೋರ್ ಎಂಬ ಪದ ಹೆಜ್ಜೆಹೆಜ್ಜೆಗೂ ಎದುರಾಗಿ ಬ್ಯಾಂಕ್ ಮತ್ತಿತರ ಕಡೆ ಸಾಲ ಮಾಡಲು ಮುಂದಾಗುವವರಿಗೆ ಅದರ ಮಹತ್ವ ಗೊತ್ತಾಗಿರುತ್ತದೆ. ಅಂದಹಾಗೆ ಭಾರತದಲ್ಲಿ ಕ್ರೆಡಿಟ್ ಸ್ಕೋರ್ ಅಳೆಯುವ ಸಾಕಷ್ಟು ಕಂಪೆನಿಗಳು ಇದ್ದು, ಹಲವು ಆರ್ಥಿಕ ಸಂಸ್ಥೆಗಳ ಜತೆಗೆ ಒಪ್ಪಂದ ಮಾಡಿಕೊಂಡು, ಗ್ರಾಹಕರಿಗೆ ಕ್ರೆಡಿಟ್ ಸ್ಕೋರ್ಸ್, ಸಾಲದ ವರದಿ, ತಿಂಗಳ ವರದಿಗಳನ್ನು ಬೇಡಿಕೆಗೆ ಅನುಗುಣವಾಗಿ ನೀಡುತ್ತವೆ.

ಇದೀಗ Wishfin ಎಂಬ ಸ್ಟಾರ್ಟ್ ಅಪ್ ಕಂಪೆನಿಯೊಂದು ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಟ್ರಾನ್ಸ್ ಯೂನಿಯನ್- ಸಿಬಿಲ್ ಜತೆ ಸೇರಿ ವಾಟ್ಸ್ ಆಪ್ ಮೂಲಕ ಕ್ರೆಡಿಟ್ ಸ್ಕೋರ್ಸ್ ನೀಡಲಿದೆ.

ಇಎಂಐಗಳು ಮತ್ತು ಕ್ರೆಡಿಟ್ ಕಾರ್ಡ್ ಬಾಕಿ, ನಿಮ್ಮ ಸಾಲದ ಇತಿಹಾಸ ಇತರ ಅಂಶಗಳು ಆಧರಿಸಿ ಕ್ರೆಡಿಟ್ ಸ್ಕೋರ್ ನೀಡಲಾಗುತ್ತದೆ. ಉತ್ತಮ ಕ್ರೆಡಿಟ್ ಸ್ಕೋರ್ ಸಾಲದ ವಿಚಾರದಲ್ಲಿ ಅನುಕೂಲ ಮಾಡಿಕೊಡುತ್ತದೆ. ಕೆಲ ಬ್ಯಾಂಕ್ ಗಳು ಹೆಚ್ಚು ಕ್ರೆಡಿಟ್ ಸ್ಕೋರ್ ಇರುವವರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತವೆ.

Get your credit score free of cost on WhatsApp

ವಾಟ್ಸ್ ಆಪ್ ನಲ್ಲಿ ಕ್ರೆಡಿಟ್ ಸ್ಕೋರ್ ತಿಳಿಯುವುದಕ್ಕೆ ಒಂದೋ ಮಿಸ್ಡ್ ಕಾಲ್ ನೀಡಬೇಕು. ಅಥವಾ Wishfin ವೆಬ್ ಸೈಟ್ ನಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಕಬೇಕು. ಆ ನಂತರ ನಿಮಗೊಂದು ಸೂಚನೆ ಬರುತ್ತದೆ. ಅದರ ಪ್ರಕಾರ ಮಾಹಿತಿಯನ್ನು ತುಂಬಬೇಕು. ಕ್ರೆಡಿಟ್ ರಿಪೋರ್ಟ್ ಹಾಗೂ ಹನ್ನೆರಡು ತಿಂಗಳ ಅಪ್ ಡೇಟ್ ಯಾವುದೇ ಶುಲ್ಕ ಇಲ್ಲದೆ ಈವರೆಗೆ ದೊರೆಯುತ್ತಿದೆ.

ಇನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಡ್ಡಾಯ ಮಾಡಿರುವಂತೆ, ಯಾವುದೇ ಕ್ರೆಡಿಟ್ ಬ್ಯೂರೋ ಮನವಿ ಮಾಡುವ ಪ್ರತಿ ವ್ಯಕ್ತಿಗೆ ವರ್ಷಕ್ಕೊಮ್ಮೆ ಉಚಿತ ಸಾಲದ ವರದಿ ನೀಡಬೇಕು. ಹೊಸದಾಗಿ ಸಾಲಕ್ಕೆ ಅರ್ಜಿ ಹಾಕಿದಾಗ ಬ್ಯಾಂಕ್ ಗಳಿಗೆ ಆ ಮಾಹಿತಿ ನೀಡಲು ನಿಮಗೆ ಸಾಧ್ಯವಾಗಬೇಕು. ಕ್ರೆಡಿಟ್ ಬ್ಯೂರೋದ ವೆಬ್ ಸೈಟ್ ಗಳ ಮೂಲಕ ಈ ವರದಿಗಳನ್ನು ಪಡೆಯಬಹುದು.

ಇನ್ನು ಕೆಲವು ಕಂಪೆನಿಗಳ ಮೂಲಕ ಕೂಡ ಪುಕ್ಕಟೆ ಕ್ರೆಡಿಟ್ ರಿಪೋರ್ಟ್ ಪಡೆಯಬಹುದು. ಅವರೇನೋ ತಾವು ಒಪ್ಪಂದ ಮಾಡಿಕೊಂಡ ಕ್ರೆಡಿಟ್ ಬ್ಯುರೋದಿಂದ ಉಚಿತವಾಗಿ ವರದಿ ಕೊಡಿಸುತ್ತಾರೆ. ಆದರೆ ಯಾವ ವ್ಯಕ್ತಿ ತಮ್ಮ ಮಾಹಿತಿಯನ್ನು ನೀಡಿರುತ್ತಾರೋ, ಆ ಮಾಹಿತಿಯನ್ನು ಮಾರ್ಕೆಟಿಂಗ್ ಸಲುವಾಗಿ ಬಳಸಿಕೊಳ್ಳುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+