ಭಾರತದ ಜಿಡಿಪಿ ಶೇ.8.7ಕ್ಕೆ ಏರಿಕೆ; ಆರ್ಥಿಕತೆ ಮೇಲೆ ಹೇಗೆ ಪರಿಣಾಮ ಬೀರುವುದು?
ನವದೆಹಲಿ, ಮೇ 31: ಭಾರತದಲ್ಲಿ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) ಬೆಳವಣಿಗೆಯು FY22 ರಲ್ಲಿ ಶೇ.8.7ರಷ್ಟು ದಾಖಲಾಗಿದ್ದು, ಇದು 2000ರ ನಂತರದ ಅತ್ಯಧಿಕ ಬೆಳವಣಿಗೆಯಾಗಿದೆ. ಏಕೆಂದರೆ ಕೊರೊನಾ ವೈರಸ್ ಸಾಂಕ್ರಾಮಿಕದ ಸಮಯದಲ್ಲಿ ಮೂಲ ಪರಿಣಾಮ ಕಡಿಮೆಯಾಗಿತ್ತು.
ಕೋವಿಡ್-19 ಸಾಂಕ್ರಾಮಿಕ ಉತ್ಪಾದನೆ, ಉದ್ಯಮ, ಪೂರೈಕೆ ಸರಪಳಿಗೆ ಪೆಟ್ಟು ಕೊಟ್ಟ ಹಿನ್ನೆಲೆಯಲ್ಲಿ ಕಳೆದ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿಯು ಶೇ. 6.6ರಷ್ಟಕ್ಕೆ ಕುಸಿದಿತ್ತು. ಕಳೆದ ಮಾರ್ಚ್ ತಿಂಗಳಿನಲ್ಲಿ ಜಿಡಿಪಿಯು ಶೇ.4.1ರಷ್ಟು ಹೆಚ್ಚಾಗಿದೆ. ಕಳೆದ ಹಣಕಾಸು ವರ್ಷದಲ್ಲಿ, ಇದೇ ತ್ರೈಮಾಸಿಕದಲ್ಲಿ GDP ಶೇ.1.6ರಷ್ಟು ಇಳಿಕೆಯಾಗಿತ್ತು.
ದೇಶದ ಆರ್ಥಿಕತೆಯು ಶೇ.8.7ರಷ್ಟು ಬೆಳವಣಿಗೆಯಾಗಿದೆ. 2021-22ರ ಹಣಕಾಸು ವರ್ಷದಲ್ಲಿ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆಯು ಹಿಂದಿನ ಹಣಕಾಸು ವರ್ಷದಲ್ಲಿ ಶೇ.6.6ರಷ್ಟಿದ್ದು, ಈಗ ಶೇ.8.7ಕ್ಕೆ ಹೆಚ್ಚಳವಾಗಿದೆ ಎಂದು ಅಂದಾಜಿಸಲಾಗಿದೆ. ಅದಾಗ್ಯೂ, ಅಂಕಿ-ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MoSPI)ವು ಶೇ.8.9ರಷ್ಟು ಜಿಡಿಪಿಯ YYY ಬೆಳವಣಿಗೆಯ ನಿರೀಕ್ಷೆಯಲ್ಲಿದೆ.

ಯಾವ ವಲಯದಲ್ಲಿ ಎಷ್ಟು ಪ್ರಮಾಣದ ಏರಿಕೆ?
ಇತ್ತೀಚೆಗೆ ಪ್ರಕಟವಾದ ಅಂಕಿ-ಅಂಶಗಳ ಪ್ರಕಾರ, ಉತ್ಪಾದನೆಯು ಶೇ.9.9ರಷ್ಟು, ಗಣಿಗಾರಿಕೆ ಮತ್ತು ಕಲ್ಲುಗಣಿಗಾರಿಕೆಯು ಶೇ.11.5ರಷ್ಟು, ನಿರ್ಮಾಣ ಸಂಬಂಧಿತ ವಸ್ತುಗಳು ಶೇ.11.5ರಷ್ಟು, ಪ್ರಸಾರಕ್ಕೆ ಸಂಬಂಧಿಸಿದ ವ್ಯಾಪಾರ, ಹೋಟೆಲ್‌ಗಳು, ಸಾರಿಗೆ, ಸಂವಹನ ಮತ್ತು ಸೇವೆಗಳು ಶೇ.11.10ರಷ್ಟು ಮತ್ತು ಸಾರ್ವಜನಿಕ ಆಡಳಿತ, ರಕ್ಷಣೆ ಮತ್ತು ಇತರ ಸೇವೆಗಳು ಶೇ.12.6ರಷ್ಟು ಏರಿಕೆಯಾಗಿದೆ.

ಉತ್ಪಾದನೆ ಹೆಚ್ಚಿಸಿದ ಎಂಟು ಪ್ರಮುಖ ವಲಯಗಳು
ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ರಿಫೈನರಿ ಉತ್ಪನ್ನಗಳು, ರಸಗೊಬ್ಬರ, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಎಂಟು ಮೂಲಸೌಕರ್ಯ ವಲಯಗಳ ಉತ್ಪಾದನೆಯು ಮಾರ್ಚ್ 2022ರಲ್ಲಿ ಶೇ. 4.9ರಷ್ಟು ಹೆಚ್ಚಳವಾಗಿದೆ. ಪ್ರಮುಖ ವಲಯವು ಏಪ್ರಿಲ್ 2021 ರಲ್ಲಿ ಅಸಾಧಾರಣವಾಗಿ ಶೇ.62.6ರಷ್ಟು ಬೆಳವಣಿಗೆಯನ್ನು ಕಂಡಿತ್ತು.

ಜಿಡಿಪಿ ಏರಿಕೆಯಿಂದ ದೇಶದ ಆರ್ಥಿಕತೆ ಮೇಲಿನ ಪರಿಣಾಮ?
ಜಿಡಿಪಿ ಬೆಳವಣಿಗೆಯು ಆರ್ಥಿಕತೆಯ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಇದಕ್ಕೆ ಉತ್ತರ ನೀಡಲು ದೇಶದ ಆರ್ಥಿಕತೆಯನ್ನು ಸೂಕ್ಷ್ಮವಾಗಿ ವಿಶ್ಲೇಷಿಸಬೇಕಾಗುತ್ತದೆ. ಭಾರತ ಸರ್ಕಾರ ಇದೀಗ ಅಧಿಕ ಹಣದುಬ್ಬರದ ಒತ್ತಡದಿಂದ ಚೇತರಿಸಿಕೊಳ್ಳಲು ಶ್ರಮಿಸುತ್ತಿದೆ. ಇದನ್ನು ನಿಯಂತ್ರಿಸಲು ಆರ್‌ಬಿಐ ಈಗಾಗಲೇ ರೆಪೊ ದರವನ್ನು ಹೆಚ್ಚಿಸಿದೆ.
ಜಿಡಿಪಿ ಬೆಳವಣಿಗೆಯು ದೇಶದ ಅಧಿಕಾರಿಗಳಿಗೆ ಬೆಳವಣಿಗೆಗಳಲ್ಲಿ ವಿಶ್ವಾಸವನ್ನು ಹೆಚ್ಚಿಸುತ್ತದೆ. ಈ ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳು ಮತ್ತು ಪೂರೈಕೆ ಸರಪಳಿ ಅಡಚಣೆಗಳಿಂದ ಹೆಚ್ಚಿನ ಬೆಲೆಗಳು ಪ್ರಭಾವಿತವಾಗಿವೆ. ಉತ್ಪಾದನಾ ವಲಯವೂ ಕುಸಿದಿತ್ತು. ಆದರೆ, ಈ ಬೆಳವಣಿಗೆಯು ಕೃಷಿಯೊಂದಿಗೆ ಉತ್ಪಾದನೆ ಮತ್ತು ಮೂಲಸೌಕರ್ಯದಲ್ಲಿ ಹೊಸ ಹೂಡಿಕೆಗೆ ಉತ್ತೇಜನ ನೀಡುತ್ತದೆ.
ದೇಶದಲ್ಲಿ ಪ್ರಸ್ತುತ ಪರಿಸ್ಥಿತಿಯಲ್ಲಿ ರೆಪೊ ದರ ಹೆಚ್ಚಳವು ಮುಖ್ಯವಾಗಿದೆ. ಆದರೆ, ಆರ್ಥಿಕತೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಹೆಚ್ಚಿನ ಉದ್ಯೋಗವಕಾಶ ಸೃಷ್ಟಿಸುವತ್ತ ಸರ್ಕಾರಗಳು ನಿಗಾ ವಹಿಸಬೇಕಾಗುತ್ತದೆ.
ಇಲ್ಲದಿದ್ದರೆ, ಉತ್ಪಾದನಾ ವಲಯವು ತೀವ್ರವಾಗಿ ಬೆಳೆದರೂ ಭಾರತದಲ್ಲಿ ಬೇಡಿಕೆ ಸುಧಾರಿಸುವುದಿಲ್ಲ. ಆಹಾರ ಸೇರಿದಂತೆ ಮೂಲಭೂತ ಅಗತ್ಯಗಳ ಬೆಲೆಗಳು ಸರ್ಕಾರದ ಪ್ರಮುಖ ಗಮನವಾಗಿರಬೇಕಿದೆ.

ಅರ್ಥಶಾಸ್ತ್ರಜ್ಞರು ಜಿಡಿಪಿ ಏರಿಳಿತದ ಬಗ್ಗೆ ಹೇಳುವುದೇನು?
ಪ್ರಕಟವಾದ ಜಿಡಿಪಿ ದತ್ತಾಂಶದ ಕುರಿತು ಎಲಾರಾ ಕ್ಯಾಪಿಟಲ್‌ನ ಅರ್ಥಶಾಸ್ತ್ರಜ್ಞ ಗರಿಮಾ ಕಪೂರ್ ಪ್ರತಿಕ್ರಿಯೆ ನೀಡಿದ್ದಾರೆ. ಸಂಪರ್ಕ ಆಧಾರಿತ ಸೇವಾ ವಲಯವನ್ನು ಸಾಮಾನ್ಯೀಕರಣಗೊಳಿಸಿವುದು, ಪಿಎಲ್ಐ ಯೋಜನೆಗಳು ಮತ್ತು 'ಚೀನಾ ಪ್ಲಸ್ 1' ಕಾರ್ಯತಂತ್ರದ ಹಿನ್ನೆಲೆ ಖಾಸಗಿ ವಲಯದ ಪುನರುಜ್ಜೀವನಗೊಳಿಸುವುದು, ಕೃಷಿ ಆದಾಯದಲ್ಲಿ ಹೆಚ್ಚಿನ ಸುಧಾರಣೆಯನ್ನು ಸಾಧಿಸಲು ಗ್ರಾಮೀಣ ಪ್ರದೇಶಗಳಲ್ಲಿ ದೀರ್ಘಾವಧಿ ಹೂಡಿಕೆಯತ್ತ ಗಮನ ಹರಿಸುವುದು, ಜಾಗತಿಕ ಮಟ್ಟದಲ್ಲಿ ನಿಧಾಗತಿಯ ಬೆಳವಣಿಗೆ, ಇಂಧನ ಬೆಲೆಗಳ ಏರಿಕೆ, ಹೆಚ್ಚುತ್ತಿರುವ ಬಡ್ಡಿದರ, ಆರ್ಥಿಕ ಪರಿಸ್ಥಿತಿಯನ್ನು ಕಠಿಣಗೊಳಿಸಬೇಕಿದೆ. FY23E ಮೂಲಕ ಹೆಚ್ಚಿದ ಇಂಧನ ಬೆಲೆಗಳ ನಿರೀಕ್ಷೆಯ ಮಧ್ಯೆ, ನಾವು ನಮ್ಮ FY23E ಜಿಡಿಪಿ ಬೆಳವಣಿಗೆಯ ನಿರೀಕ್ಷೆಯನ್ನು ಶೇ.7.8 ರಿಂದ ಶೇ.7.5ಕ್ಕೆ ಪರಿಷ್ಕರಿಸಿದ್ದೇವೆ," ಎಂದರು.












Click it and Unblock the Notifications