2018- 19ರ ಆರ್ಥಿಕ ವರ್ಷದಲ್ಲಿ ಜಿಡಿಪಿ ಅಭಿವೃದ್ಧಿ ದರ 7- 7.5

ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ಅಧಿವೇಶನ ಸೋಮವಾರ ಶುರು ಆಗಿದ್ದು, ಆರ್ಥಿಕ ಸಮೀಕ್ಷೆಯ ಅಂಕಿ- ಅಂಶವನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸಂಸತ್ ನ ಮುಂದೆ ಇಟ್ಟಿದ್ದಾರೆ. ಪ್ರಮುಖಾಂಶಗಳು ಹೀಗಿವೆ.

* ಖಾಸಗಿ ಹೂಡಿಕೆ ಮತ್ತೆ ಹೆಚ್ಚಾಗಲಿದೆ. ಗ್ರಾಹಕರ ಬೇಡಿಕೆಯ ಜತೆಗೆ ರಿಯಲ್ ಎಸ್ಟೇಟ್ ಬೇಡಿಕೆ ಇಳಿಕೆಯ ನೆರವು ದೊರೆಯಲಿದೆ.

* ಕೃಷಿ ಅಭಿವೃದ್ಧಿ ದರ ಆರ್ಥಿಕ ವರ್ಷ 2018ಕ್ಕೆ 2.1ರಷ್ಟು ಆಗುವ ಸಾಧ್ಯತೆ ಇದ್ದು, ಕೈಗಾರಿಕೆ ಅಭಿವೃದ್ಧಿ ದರವು ಆರ್ಥಿಕ ವರ್ಷ 2018ಕ್ಕೆ 4.4ರಷ್ಟಾಗುವ ಸಾಧ್ಯತೆ ಇದೆ.

* ಜಿಡಿಪಿ ಅಭಿವೃದ್ಧಿ ದರವು 6.75 ಇದ್ದು, ಈ ಆರ್ಥಿಕ ವರ್ಷದಲ್ಲಿ 7- 7.5 ತಲುಪುವ ಸಾಧ್ಯತೆಗಳಿವೆ. 2018- 19ರ ಮಧ್ಯಮಾವಧಿಯಲ್ಲಿ ಉದ್ಯೋಗ, ಶಿಕ್ಷಣ ಹಾಗೂ ಕೃಷಿ ವಲಯದ ಮೇಲೆ ತುರ್ತಾಗಿ ಗಮನ ಹರಿಸಬೇಕಿದೆ.

GDP growth in 2019 to be between 7 and 7.5%

* 2017- 2018ರಲ್ಲಿ ಜಿಡಿಪಿ 6.75 ಇದ್ದು, ಭಾರತವು ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಆಗಿದೆ.

* ಸೇವಾ ವಲಯದ ಅಭಿವೃದ್ಧಿಯು 2018ರ ಆರ್ಥಿಕ ವರ್ಷಕ್ಕೆ 8.3 ಆಗುವ ಸಾಧ್ಯತೆ ಇದೆ.

* ರಫ್ತು ವಲಯವು ಪ್ರಮುಖ ಆದಾಯ ಮೂಲದ ಸಾಮರ್ಥ್ಯ ಹೊಂದಿದ್ದು, ಈ ಆರ್ಥಿಕ ವರ್ಷದಲ್ಲಿ ಅದರ ಕೊಡುಗೆ ಹೆಚ್ಚುವ ನಿರೀಕ್ಷೆ ಇದೆ.

* ಆರ್ಥಿಕ ವರ್ಷದ ದ್ವಿತೀಯಾರ್ಧದಲ್ಲಿ ಜಿಎಸ್ ತಿ ಸಹಾಯದಿಂದ ಆರ್ಥಿಕತೆಗೆ ಒಂದಿಷ್ಟು ಚೈತನ್ಯ ಸಿಕ್ಕಿದೆ. ಬ್ಯಾಂಕ್ ಗಳಿಗೆ ಬಂಡವಾಳ ಪೂರೈಕೆ, ವಿದೇಶಿ ಹೂಡಿಕೆಯ ಉದಾರೀಕರಣ, ರಫ್ತು ಪ್ರಮಾಣದ ಹೆಚ್ಚಳದಿಂದ ಕೂಡ ಅನುಕೂಲವಾಗಿದೆ.

* ಪ್ರಾಥಮಿಕ ವಿಶ್ಲೇಷಣೆ ಬಯಲು ಮಾಡಿರುವ ಸಂಖ್ಯೆಗಳ ಪ್ರಕಾರ ಜಿಎಸ್ ಟಿಯಿಂದಾಗಿ ಪರೋಕ್ಷ ತೆರಿಗೆ ಪಾವತಿದಾರರ ಸಂಖ್ಯೆಯಲ್ಲಿ ಶೇಕಡಾ ಐವತ್ತರಷ್ಟು ಹೆಚ್ಚಳವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+