ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಸಿದ ಆರ್ಥಿಕ ಪ್ರಗತಿ; ಕಳೆದ ಮೂರು ವರ್ಷಗಳಲ್ಲಿ ಅತ್ಯಂತ ಕಳಪೆ

ಇದೇ ಆರ್ಥಿಕ ವರ್ಷದಲ್ಲಿ ಏಪ್ರಿಲ್-ಜೂನ್ ವರೆಗಿನ ಅವಧಿಯಲ್ಲಿ ಆದ ಪ್ರಗತಿ ಇಳಿಕೆ. ಅಪನಗದೀಕರಣ, ಜಿಎಸ್ ಟಿ ಪರಿಣಾಮಗಳಿಂದಾಗಿ ಆರ್ಥಿಕ ಬೆಳವಣಿಗೆಗೆ ಹೊಡೆತ.

|
Google Oneindia Kannada News

ನವದೆಹಲಿ, ಸೆಪ್ಟಂಬರ್ 1: ಪ್ರಸಕ್ತ ಹಣಕಾಸು ವರ್ಷದಲ್ಲಿ ಏಪ್ರಿಲ್ ನಿಂದ ಜೂನ್ ವರೆಗಿನ ಆರ್ಥಿಕ ಬೆಳವಣಿಗೆಯು ಶೇ. 5.7ರಷ್ಟು ಕುಗ್ಗಿದ್ದು, ಇದು ಕಳೆದ ಮೂರು ವರ್ಷಗಳಲ್ಲೇ ಅತಿ ಕಡಿಮೆ ಆರ್ಥಿಕ ಬೆಳವಣಿಗೆ ಎಂದು ವಿಶ್ಲೇಷಿಸಲಾಗಿದೆ.

ಕುಸಿದಿರುವ ಜಿಡಿಪಿ ಸದ್ಯಕ್ಕೆ ಎದ್ದೇಳುವ ಲಕ್ಷಣಗಳೇ ಕಾಣಿಸುತ್ತಿಲ್ಲಕುಸಿದಿರುವ ಜಿಡಿಪಿ ಸದ್ಯಕ್ಕೆ ಎದ್ದೇಳುವ ಲಕ್ಷಣಗಳೇ ಕಾಣಿಸುತ್ತಿಲ್ಲ

ಈ ಸ್ಥಿತಿಗೆ ಎರಡು ಕಾರಣಗಳನ್ನು ಆರ್ಥಿಕ ತಜ್ಞರು ಕಂಡುಕೊಂಡಿದ್ದಾರೆ. ಕಳೆದ ವರ್ಷಾಂತ್ಯಕ್ಕೆ ನಡೆದ ಅಪನಗದೀಕರಣ ಒಂದು ಕಾರಣವಾದರೆ, ಜಿಎಸ್ ಟಿ ಪರಿಣಾಮವಾಗಿ ಆ ಮೂರು ತಿಂಗಳ ಅವಧಿಯಲ್ಲಿ ಹಳೆಯ ಸರಕುಗಳನ್ನು ಬೇಗನೇ ವಿಲೇವಾರಿ ಮಾಡುವಂಥ ಒತ್ತಡಕ್ಕೆ ವ್ಯಾಪಾರಿಗಳು ಸಿಲುಕಿದ್ದು ಮತ್ತೊಂದು ಕಾರಣ ಎನ್ನಲಾಗಿದೆ.

GDP growth hits 3-year low of 5.7%, slowest under Modi govt

ಏಷ್ಯಾದಲ್ಲಿ ಭಾರತದ ಆರ್ಥಿಕತೆಗೆ ಪ್ರಬಲ ಪೈಪೋಟಿಯೊಡ್ಡಿರುವ ಚೀನಾ ದೇಶದ ಆರ್ಥಿಕ ಪ್ರಗತಿಯು ಇದೇ ವರ್ಷ ಏಪ್ರಿಲ್ ನಿಂದ ಜೂನ್ ವರೆಗೆ ಭಾರತಕ್ಕಿಂತ ಉತ್ತಮವಾಗಿದೆ. ಅದರ ಜಿಡಿಪಿ ಬೆಳವಣಿಗೆ 6.9ರಷ್ಟು ಹೆಚ್ಚಿದೆ. ಆದರೆ, ಅದರ ಮುಂದೆ ಭಾರತ ನೀರಸ ಸಾಧನೆ ಮಾಡಿದೆ ಎಂದು ಹೇಳಲಾಗಿದೆ.

ಏಪ್ರಿಲ್-ಜೂನ್ ವರೆಗಿನ ಅವಧಿಯಲ್ಲಿ ಉತ್ಪಾದನಾ ವಲಯವು ಶೇ. 1.2ರಷ್ಟು ಹಿನ್ನಡೆ ಅನುಭವಿಸಿದ್ದರೆ, ಗಣಿಗಾರಿಕೆಯಂಥ ಬೃಹತ್ ಉದ್ದಿಮೆಗಳು 0.7ರಷ್ಟು ಹಿನ್ನಡೆ ಅನುಭವಿಸಿವೆ.

ಜಿಡಿಪಿ ಬೆಳವಣಿಗೆ ದರ ಕುಸಿತ ಚಿಂತೆಗೆ ಕಾರಣ: ಅರುಣ್ ಜೇಟ್ಲಿಜಿಡಿಪಿ ಬೆಳವಣಿಗೆ ದರ ಕುಸಿತ ಚಿಂತೆಗೆ ಕಾರಣ: ಅರುಣ್ ಜೇಟ್ಲಿ

ಆದರೆ, ಇದರ ನಡುವೆಯೂ ಕೆಲ ಕ್ಷೇತ್ರಗಳ ಆರ್ಥಿಕ ಬೆಳವಣಿಗೆ ಚೇತೋಹಾರಿಯಾಗಿದೆ. ವಿದ್ಯುತ್ ಕ್ಷೇತ್ರವು ಶೇ. 7ರಷ್ಟು, ವ್ಯಾಪಾರ, ಹೋಟೆಲ್, ಸಂಪರ್ಕ ಕ್ಷೇತ್ರಗಳು ಶೇ 11.1 ರಷ್ಟು, ನಿರ್ಮಾಣ ಕ್ಷೇತ್ರ ಶೇ. 2ರಷ್ಟು ಪ್ರಗತಿ ಸಾಧಿಸಿವೆ ಎಂದು ಹೇಳಲಾಗಿದೆ.

English summary
Economic growth plunged to 5.7 per cent in April-June of the current financial year (FY18), the lowest in the three-year rule of the Modi government due to demonetisation and destocking by companies following pre-goods and services tax (GST) jitters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X