RRVL ಮತ್ತು ಫ್ಯೂಚರ್ ಗ್ರೂಪ್ ನಡುವಿನ ಒಪ್ಪಂದಕ್ಕೆ ಸಿಸಿಐ ಅನುಮೋದನೆ: ಅಮೆಜಾನ್‌ಗೆ ಹಿನ್ನಡೆ

ನವದೆಹಲಿ, ನವೆಂಬರ್ 20: ಇ-ಕಾಮರ್ಸ್ ದೈತ್ಯ ಅಮೆಜಾನ್‌ಗೆ ಭಾರೀ ಹಿನ್ನಡೆಯಾಗಿದ್ದು, ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ (RRVL) ಮತ್ತು ಫ್ಯೂಚರ್ಸ್ ಗ್ರೂಪ್ ನಡುವಿನ ಒಪ್ಪಂದಕ್ಕೆ ಭಾರತದ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಶುಕ್ರವಾರ ಅನುಮೋದನೆ ನೀಡಿದೆ.

"ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್, ಫ್ಯಾಶನ್ ಲೈಫ್‌ಸ್ಟೈಲ್ ಲಿಮಿಟೆಡ್‌ನಿಂದ ಫ್ಯೂಚರ್ ಗ್ರೂಪ್‌ನ ಚಿಲ್ಲರೆ, ಸಗಟು, ಲಾಜಿಸ್ಟಿಕ್ಸ್ ಮತ್ತು ಉಗ್ರಾಣ ವ್ಯವಹಾರಗಳನ್ನು ಸ್ವಾಧೀನಪಡಿಸಿಕೊಳ್ಳಲು ಆಯೋಗ ಅನುಮೋದಿಸಿದೆ" ಎಂದು ಸಿಸಿಐ ಟ್ವೀಟ್‌ನಲ್ಲಿ ತಿಳಿಸಿದೆ.

ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಆಗಸ್ಟ್‌ನಲ್ಲಿ ಕಿಶೋರ್ ಬಿಯಾನಿಯ ಫ್ಯೂಚರ್ ಗ್ರೂಪ್‌ನ ವ್ಯವಹಾರಗಳನ್ನು 24,713 ಕೋಟಿಗೆ ಸ್ವಾಧೀನಪಡಿಸಿಕೊಂಡಿತು.

Future Group -Reliance Retail Deal Gets CCI Approval

ರಿಲಯನ್ಸ್ ರಿಟೇಲ್ ಈಗ ಭಾರತದ 420 ಕ್ಕೂ ಹೆಚ್ಚು ನಗರಗಳಲ್ಲಿರುವ ಫ್ಯೂಚರ್ ಗ್ರೂಪ್‌ನ ಬಿಗ್ ಬಜಾರ್, ಎಫ್‌ಬಿಬಿ, ಈಸಿಡೇ, ಸೆಂಟ್ರಲ್, ಫುಡ್‌ಹಾಲ್ ಸ್ವರೂಪಗಳ 1,800 ಮಳಿಗೆಗಳ ಹಕ್ಕನ್ನು ಹೊಂದಿದೆ. ಫ್ಯೂಚರ್ ಗ್ರೂಪ್ ಈ ಮೇಲಿನ ವ್ಯವಹಾರಗಳನ್ನು ನಡೆಸುತ್ತಿರುವ ಕೆಲವು ಕಂಪನಿಗಳನ್ನು ಫ್ಯೂಚರ್ ಎಂಟರ್‌ಪ್ರೈಸಸ್ ಲಿಮಿಟೆಡ್ (ಎಫ್‌ಇಎಲ್) ಗೆ ವಿಲೀನಗೊಳಿಸುವ ಯೋಜನೆಯ ಭಾಗವಾಗಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ.

ಫ್ಯೂಚರ್ ಗ್ರೂಪ್‌ನ ಚಿಲ್ಲರೆ ಮತ್ತು ಸಗಟು ಉದ್ಯಮವನ್ನು ರಿಲಯನ್ಸ್ ರಿಟೇಲ್ ಮತ್ತು ಫ್ಯಾಶನ್ ಲೈಫ್‌ಸ್ಟೈಲ್ ಲಿಮಿಟೆಡ್ (ಆರ್‌ಆರ್‌ಎಫ್‌ಎಲ್ಎಲ್) ಗೆ ವರ್ಗಾಯಿಸಲಾಗುವುದು, ಇದು ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ (ಆರ್‌ಆರ್‌ವಿಎಲ್) ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+