'ಮಹಾ' ಚುನಾವಣೆ ಫಲಿತಾಂಶದ ನಂತರ ತೈಲ ಇಳಿಕೆ
ನವದೆಹಲಿ, ಅ. 11: ಮಹಾರಾಷ್ಟ್ರ ಮತ್ತು ಹರ್ಯಾಣ ಚುನಾವಣಾ ಪ್ರಕ್ರಿಯೆ ಮುಗಿದ ಮೇಲೆ ಪೆಟ್ರೋಲ್ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗುವ ಸಂಭವವಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ನಿರಂತರವಾಗಿ ಕುಸಿಯುತ್ತಿದೆ. ಒಂದು ಬ್ಯಾರಲ್ ತೈಲ ಬೆಲೆ 90 ಡಾಲರ್‌ಗಿಂತ ಕಡಿಮೆಯಾಗಿದೆ.
ಇತ್ತ ಇರಾನ್ ಮತ್ತು ಸೌದಿ ಅರೇಬಿಯಾ ರಿಯಾಯಿತಿ ದರದಲ್ಲಿ ತೈಲ ಮಾರಲು ಪೈಪೋಟಿಗೆ ಬಿದ್ದಿರುವುದು ಮಾತ್ರ ಯಾಕೆ ಎಂದು ತಿಳಿಯುತ್ತಿಲ್ಲ. ಕೇಂದ್ರ ಸರ್ಕಾರ ತನ್ನ ಆರ್ಥಿಕ ನೀತಿಯನ್ನು ಮತ್ತಷ್ಟು ಸುಧಾರಿಸಿಕೊಳ್ಳಲು ಇದು ಅವಕಾಶ ಕಲ್ಪಿಸುತ್ತದೆ ಎನ್ನಲಾಗಿದೆ. ಆದರೆ ಡಿಸೇಲ್ ದರ ಇಳಿಕೆ ಸದ್ಯಕ್ಕಾಗುವ ಯಾವ ಲಕ್ಷಣಗಳು ಇಲ್ಲ.[ಪೆಟ್ರೋಲ್ 1.82 ರೂ. ಇಳಿಕೆ, ಡೀಸೆಲ್ ದರ ಏರಿಕೆ]

ಇರಾಕ್ ಮತ್ತು ಲಿಬಿಯಾ ತಮ್ಮ ಸಾಮರ್ಥ್ಯಕ್ಕೂ ಮೀರಿ ತೈಲವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಚೀನಾ ಆರ್ಥಿಕ ವ್ಯವಸ್ಥೆಯ ದಿಢೀರ್ ಬೆಳವಣಿಗೆ, ರಷ್ಯಾ ಮತ್ತು ಅಮೆರಿಕದ ಇಬ್ಬಗೆಯ ನೀತಿಗಳು ತೈಲ ಬೆಲೆ ಇಳಿಕೆ ಮೇಲೆ ನೇರ ಪರಿಣಾಮ ಬೀರಿದೆ.
ಕಳೆದ ಜೂನ್ ತಿಂಗಳ ನಂತರದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಶೇ.20 ರಷ್ಟು ಕಡಿಮೆಯಾಗಿದೆ. ಭಾರತ ಖರೀದಿ ಮಾಡುತ್ತಿರುವ ತೈಲ ಬೆಲೆ ಕೂಡಾ ಕಡಿಮೆಯಾಗಿದೆ. ಮಹಾರಾಷ್ಟ್ರ ಮತ್ತು ಹರ್ಯಾಣದ ಚುನಾವಣಾ ಪ್ರಕ್ರಿಯೆಗಳು ಮುಗಿದ ಮೇಲೆ ಇನ್ನೊಮ್ಮೆ ತೈಲ ಬೆಲೆ ಕಡಿಮೆಯಾಗಬಹುದೆಂಬ ನಿರೀಕ್ಷೆಯಿದೆ. ಪೆಟ್ರೋಲ್ ಲೀಟರ್‌ಗೆ 3 ರೂ. ಕಡಿತಗೊಳ್ಳಲಿದೆ ಎನ್ನಲಾಗಿದೆ.[ಪೆಟ್ರೋಲ್ 1.82 ರೂ. ಇಳಿಕೆ, ಡೀಸೆಲ್ ದರ ಏರಿಕೆ]
ಡಿಸೇಲ್ ಬೆಲೆಯಲ್ಲೂ ನಂತರದ ದಿನಗಳಲ್ಲಿ ಇಳಿಕೆ ನಿರೀಕ್ಷೆ ಮಾಡಲಾಗಿದೆ. ಒಂದು ವೇಳೆ ಡಿಸೇಲ್ ದರ ಇಳಿದರೆ ಮೂಲ ವಸ್ತುಗಳ ಬೆಲೆ ಕೊಂಚ ತಗ್ಗುವುದರಲ್ಲಿ ಅನುಮಾನವಿಲ್ಲ. ಒಟ್ಟಿನಲ್ಲಿ ಮುಂದಿನ ದಿನಗಳು ತೈಲಕ್ಕೆ ಇತರ ದೇಶವನ್ನು ನಂಬಿಕೊಂಡಿರುವ ರಾಷ್ಟ್ರಗಳಿಗೆ ಉತ್ತಮವಾಗಲಿದೆ ಎಂದೇ ಹೇಳಲಾಗಿದೆ.


Click it and Unblock the Notifications
